ವರುಣನ ಉಗ್ರರೂಪ, ನಲುಗಿದ ದೇವಭೂಮಿ!
ಉತ್ತರಾಖಂಡ್‌ನಲ್ಲಿ ಮಳೆ, ಪ್ರವಾಹ, ಭೂಕುಸಿತ
ದೇವಭೂಮಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ
ಬೆಂಗಳೂರು: ಕರ್ನಾಟಕ ಮಾತ್ರವಲ್ಲ ಇಡೀ ಭಾರತದಾದ್ಯಂತ ವರುಣ ಎಲ್ಲೆ ಮೀರಿದೆ. ಭಾರಿ ಮಳೆಗೆ ಹಲವು ಅವಾಂತರಗಳಾಗಿವೆ. ದೇವಭೂಮಿ ಉತ್ತರಾಖಂಡ್‌ನಲ್ಲಿ ಮಳೆರಾಯ ಉಗ್ರರೂಪ ತಾಳಿದ್ದಾನೆ. ಇತ್ತ, ಅಮರನಾಥ್ ಯಾತ್ರೆಯನ್ನ ಮಳೆ ಸ್ಥಗಿತ ಮಾಡಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆ ಆರ್ಭಟದಿಂದ ರಸ್ತೆಗಳು ಹೊಳೆಯಂತಾಗಿವೆ.
ಉಗ್ರರೂಪ ತಾಳಿದ ವರುಣ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು. ಕೊಚ್ಚಿ ಹೋಗುತ್ತಿರುವ ವಾಹನಗಳು. ಮುಳುಗಿದ ಹೆದ್ದಾರಿಗಳು, ರಸ್ತೆಗಳು. ಭಾರಿ ಪ್ರವಾಹದಲ್ಲಿ ಸಿಲುಕಿದ ಪ್ರವಾಸಿಗರು. ಭೂಕುಸಿತ ಮತ್ತು ಜನಜೀವನ ಅಸ್ತವ್ಯಸ್ತ. ವರುಣಾರ್ಭಟಕಕ್ಕೆ ಉತ್ತರ ಭಾರತ ನಲುಗುತ್ತಿದೆ.
ವರುಣಾರ್ಭಟಕ್ಕೆ ನಲುಗಿದ ದೇವಭೂಮಿ!
ಉತ್ತರ ಭಾರತದ ಹಲವೆಡೆ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಭಾರಿ ವರ್ಷಧಾರೆಗೆ ದೇವಭೂಮಿ ಉತ್ತರಾಖಂಡ್ ರಾಜ್ಯ ಅಕ್ಷರಶಃ ನಲುಗಿದೆ. ಪಿಥೋರಗರದಲ್ಲಿ ಪ್ರವಾಹದಿಂದಾಗಿ ಚೀಂಕಾ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಪ್ರವಾಹದಲ್ಲಿ 200ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದಾರೆ. ರಕ್ಷಣಾ ಪಡೆಗಳಿಂದ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿವೆ. ಸೇತುವೆಗಳು ಕೊಚ್ಚಿ ಹೋಗಿವೆ. ಹೆದ್ದಾರಿ ಬಂದ್ ಆಗಿದ್ದರಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಭಾರೀ ಮಳೆ ಕಾರಣ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ. ಉತ್ತರಾಖಂಡ್‌ನಲ್ಲಿ ಇನ್ನೂ 4 ದಿನಗಳ ಕಾಲ ಧಾರಾಕಾರ ಮಳೆಯ ಮುನ್ಸೂಚನೆ ಇದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನಿರಂತರ ಮುಸಲಧಾರೆಗೆ ಹಿಮದ ನಾಡು ತತ್ತರ!
ಅತ್ತ ಹಿಮಾಚಲ ಪ್ರದೇಶದಲ್ಲಿ ಕುಂಭದ್ರೋಣ ಮಳೆಗೆ ಜನ-ಜೀವನ ತತ್ತರಿಸಿದೆ. ಕಸೌಲಿಯ ದೋಚಿ ಗ್ರಾಮದಲ್ಲಿ ಹಲವು ಮನೆಗಳು ಕುಸಿದಿವೆ. ಸಿರ್ಮೋರ್ ಜಿಲ್ಲೆಯಲ್ಲಿ ಗುರುದ್ವಾರ ಕುಸಿದು ಓರ್ವ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ. ಭಾರಿ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿದೆ. ಪರ್ವಾನೂ-ಶಿಮ್ಲಾ ಹೆದ್ದಾರಿ ಮೇಲೆ ಬಂಡೆಗಳು ಉರುಳಿಬಿದ್ದಿದ್ದು ವಾಹನ ಸವಾರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಟ್ ಅಗಿದೆ. ಹಲವು ಜಿಲ್ಲೆಗಳಲ್ಲಿ 2 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಉನಾ ಜಿಲ್ಲೆಯಲ್ಲಿ ನದಿಯ ಆಚೆ ಅಂತ್ಯಕ್ರಿಯೆಗೆ ಹೋಗಿ ವಾಪಸ್ ಬರಲಾರದೇ ಪರದಾಡುತ್ತಿದ್ದ ಗ್ರಾಮಸ್ಥರ ರಕ್ಷಣಾ ಕಾರ್ಯ ನಡೆಯಿತು.
ಕಣಿವೆ ನಾಡಲ್ಲಿ ಮಳೆ ರೌದ್ರಾವತಾರ.. ಹಲವೆಡೆ ಭೂಕುಸಿತ!
ಇನ್ನು ಕಣಿವೆ ನಾಡು ಜಮ್ಮು ಕಾಶ್ಮೀರದಲ್ಲಿ ಧಾರಾಕಾರ ಮಳೆಯಾಗ್ತಿದೆ. ನದಿ-ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಂಬಾನ್ ಬಳಿಯ ರಸ್ತೆ ಕುಸಿತಗೊಂಡಿದೆ. ಫಂಥಯಾಲ್ ಸುರಂಗ ಮಾರ್ಗದ ಬಳಿ ಭೂಕುಸಿತದಿಂದಾಗಿ ಹೆದ್ದಾರಿಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಭಾರಿ ಮಳೆಯಿಂದಾಗಿ ಶ್ರೀನಗರ ಹೆದ್ದಾರಿ ಕುಸಿತಗೊಂಡಿದ್ದು ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಭಾರಿ ವರ್ಷಧಾರೆ.. ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹ!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ನಿರಂತರ ಮಳೆಗೆ ದೆಹಲಿ ಅಕ್ಷರಶಃ ಮುಳುಗಿದೆ. ತಗ್ಗುಪ್ರದೇಶಗಳು ಜಲಾವೃತಗೊಂಡಿದೆ. ರಸ್ತೆಗಳು ನದಿಗಳಾಂತಾಗಿದ್ದು ವಾಹನ ಸವಾರರು ಪರದಾಟ ನಡೆಸಿದ್ದಾರೆ. ಏಮ್ಸ್ ಆಸ್ಪತ್ರೆ ಬಳಿಯ ರಸ್ತೆ ಜಲಾವೃತಗೊಂಡಿದ್ದು ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಮುಂಬೈನಲ್ಲಿ ವರುಣಾರ್ಭಟ.. ರಸ್ತೆಗಳು ಜಲಾವೃತ!
ಇತ್ತ ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆಯಾರ್ಭಟ ಮುಂದುವರೆದಿದೆ. ಕಳೆದ 2 ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇನ್ನೂ 2 ದಿನಗಳ ಕಾಲ ಮುಂಬೈನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉತ್ತರ ಪ್ರದೇಶದಲ್ಲಿ ವಿರಾಮ ನೀಡದ ವರುಣ!
ಉತ್ತರ ಪ್ರದೇಶದ ಹಲವೆಡೆ ಮಳೆ ಮುಂದುವರಿದಿದೆ. ಲಕ್ನೋ, ಮೀರತ್, ಕಾನ್ಪುರ ಸೇರಿ ಬಿಡುವಿಲ್ಲದೇ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಲಕ್ನೋದ ರಸ್ತೆಗಳು ಜಲಾವೃತಗೊಂಡಿದ್ದು ಲಗೇಜ್ ತುಂಬಿದ್ದ ಆಟೋವೊಂದು ಚಲಿಸಲಾರದೇ ಪಲ್ಟಿಯಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ