ಕೈಗೆ ಬಂದ ಬೆಳೆ ಬಾಯಿಗೆ ಬಾರದೆ ರೈತ ಕಂಗಾಲು..!
ಕಲಬುರಗಿಯಲ್ಲಿ ಟೊಮ್ಯಾಟೋ ಬೆಳೆಗೆ ಮಳೆ ಕಾಟ
ಹೊಲದಲ್ಲೇ ಸಂಪೂರ್ಣ ನಾಶವಾದ ಟೊಮ್ಯಾಟೋ
ಬೆಂಗಳೂರು: ಮುಂಗಾರು ಮಳೆ ಕರ್ನಾಟಕಕ್ಕೆ ತಡವಾಗಿ ಬಂದ್ರೂ, ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆಯಾದ್ರೂ, ಅತಿವೃಷ್ಠಿಯ ಕಾರಣಕ್ಕೆ ಬದುಕು ದುಸ್ತರವಾಗಿದೆ. ಬಂಪರ್ ಜಾಕ್ಪಾಟ್ ನಿರೀಕ್ಷೆಯಲ್ಲಿದ್ದ ಕಲಬುರಗಿ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರಿಗೆ ಮಳೆರಾಯ ಪೆಟ್ಟು ನೀಡಿದ್ದಾನೆ. ಸದ್ಯ ವರುಣ ಕೊಂಚ ವಿರಾಮ ಕೊಟ್ಟಿದ್ದರೂ, ಮುಳುಗಿ ಹೋಗಿರುವ ಬೆಳೆಗಳು ರೈತರನ್ನ ಕಂಗಾಲಾಗಿಸಿದೆ.
ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಣ್ಣು, ತರಕಾರಿ, ಅಕ್ಕಿ ಬೇಳೆ ಬೆಲೆ ದುಬಾರಿಯಾಗಿದೆ. ಅದರಲ್ಲೂ ಕೆಂಪು ಸುಂದರಿ ಟೊಮ್ಯಾಟೋ ರೇಟ್ ಕೇಳಿದ್ರೆ ಸಾಕು ತಲೆ ತಿರುಗುತ್ತೆ. ಒಂದು ಕೆ.ಜಿ ಟೊಮ್ಯಾಟೋ 150 ರೂ. ಗಡಿ ದಾಟಿದೆ. ಟೊಮ್ಯಾಟೋ ಬೆಳೆಗಾರರಂತು ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ. ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಚಿನ್ನದ ಬೆಲೆ ಇದೆ. ಆದ್ರೆ. ಕಲಬುರ್ಗಿಯಲ್ಲಿ ಮಳೆಯ ಕಾಟದಿಂದ ಹೊಲದಲ್ಲೇ ಮಣ್ಣು ಪಾಲಾಗಿದೆ.
ಕೈಗೆ ಬಂದಿದ್ದ ಬೆಳೆ ಕಳೆದುಕೊಂಡು ಕಂಗಾಲಾದ ಅನ್ನದಾತ
ತೊಗರಿ ನಾಡು ಕಲಬುರ್ಗಿಯಲ್ಲಿ ಅಪರೂಪಕ್ಕೆ ಟೊಮ್ಯಾಟೋ ಬೆಳೆದಿದ್ದ ರೈತ, ಈ ಬಾರಿ ಬಂಪರ್ ಬೆಲೆ ಸಿಕ್ಕಿದ್ದಕ್ಕೆ ಫುಲ್ ಖುಷಿಯಾಗಿದ್ದ. ಆದ್ರೆ, ನಿರಂತರ ಮಳೆಗೆ ಹೊಲದಲ್ಲಿ ತೇವಾಂಶ ಹೆಚ್ಚಳದಿಂದ ಟೊಮ್ಯಾಟೊ ಬೆಳೆ ನಾಶವಾಗಿದೆ. ಮೊದಲೇ ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದರು. ಆದ್ರೀಗ ಮಳೆಯ ರಗಳೆ ಗಾಯದ ಮೇಲೆ ಬರೆ ಎಳೆದಿದೆ. ಕೈಗೆ ಬಂದ ತುತ್ತು ಬಾಯಿ ಬರಲಿಲ್ವಲ್ಲ ಎಂದು ಮಳೆರಾಯನಿಗೆ ಮನಸ್ಸಿನಲ್ಲೇ ಹಿಡಿಶಾಪ ಹಾಕ್ತಿದ್ದಾರೆ.
ಜಿಟಿ ಜಿಟಿ ಮಳೆಯಿಂದ ದಾಳಿಂಬೆ ಬೆಳೆಗಾರರಿಗೆ ಸಂಕಷ್ಟ
ಕೇವಲ ಟೊಮ್ಯಾಟೋ ಬೆಳೆಗಾರರು ಮಾತ್ರವಲ್ಲ, ದಾಳಿಂಬೆ ಬೆಳಗಾರರೂ ಕೂಡ ಮಳೆಯ ಕಾಟದಿಂದ ತತ್ತರಿಸಿ ಹೋಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಜಂಬಗಿ ಗ್ರಾಮದಲ್ಲಿ ಸಾವಿರಾರೂ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆಗೆ ದುಂಡಾಣು ಅಂಗಮಾರಿ ರೋಗ ತಗುಲಿದೆ. ಇದರಿಂದ ಇಳುವರಿ ಕುಂಠಿತವಾಗಿದ್ದು, ಸಂಕಷ್ಟದಲ್ಲಿರುವ ಬೆಳೆಗಾರರು, ಪರಿಹಾರಕ್ಕಾಗಿ ಸಚಿವರು ಅಧಿಕಾರಿಗಳ ಮೊರೆ ಹೋಗಿದ್ದಾರೆ.
ನಿರ್ಬಂಧಿತ ಸ್ಥಳದಲ್ಲಿ ಸರ್ಕಾರಿ ಅಧಿಕಾರಿಗಳ ಮಸ್ತಿ
ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ಪ್ರವಾಸಿಗರ ಹುಚ್ಚಾಟವೂ ಹೆಚ್ಚಾಗಿದೆ. ಅರಶಿನಗುಂಡಿ ಜಲಪಾತದ ದುರಂತದ ಬಳಿಕವೂ ಪ್ರವಾಸಿಗರ ಮಸ್ತಿ ನಿಂತಿಲ್ಲ. ಜನರು ಬಿಡಿ, ಸರ್ಕಾರಿ ಅಧಿಕಾರಿಗಳೇ ನಿರ್ಬಂಧದ ನಡುವೆಯೂ ಅಪಾಯದ ಸ್ಥಳಗಳಲ್ಲಿ ಹೇಗೆ ಮೋಜು ಮಸ್ತಿ ಮಾಡ್ತಿದ್ದಾರೆ. ಬೆಳಗಾವಿಯ ಬಟವಡೆ ಜಲಪಾತದ ವೀಕ್ಷಣೆಗೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಆದ್ರೂ ವೈದ್ಯರ ತಂಡ ಮತ್ತು ಹೆಸ್ಕಾಂ ಅಧಿಕಾರಿಗಳು ಸರ್ಕಾರಿ ವಾಹನ ಬಳಸಿ, ಅಕ್ರಮವಾಗಿ ನಿಷೇಧಿತ ಪ್ರದೇಶಕ್ಕೆ ಬಂದು, ಜಲಪಾತದ ಪಕ್ಕದಲ್ಲೇ ಅಡುಗೆ, ಎಣ್ಣೆ ಪಾರ್ಟಿ ಮಾಡಿ, ಹುಚ್ಚಾಟ ಮೆರೆದಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ, ನಾಲ್ವರು ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ದೂರು ದಾಖಲಾಗಿದೆ. ಇನ್ನು ಉಳಿದ ನಾಲ್ವರ ವಿರುದ್ಧವೂ ದೂರು ದಾಖಲಿಸಲು ನಿರ್ದೇಶಿಸಿದ್ದಾರೆ.
ಹರಿಯುವ ನೀರ ಮಧ್ಯೆ ನಿಂತು ಜನರ ದುಸ್ಸಾಹಸ
ಇನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದ ಬಳಿಯೂ ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ. ಧಾರಾಕಾರ ಮಳೆಯಿಂದ ಬೇಡ್ತಿ ಹಳ್ಳ ಅಡ್ಡಲಾಗಿ ಕಟ್ಟಿರುವ ಜಲಾಶಯ ತುಂಬಿ ಹರಿಯುತ್ತಿದೆ. ಇದರ ವೀಕ್ಷಣೆಗೆ ಬರ್ತಿರುವ ಪ್ರವಾಸಿಗರು, ಜಲಾಶಯದ ಕೋಡಿ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳೋ ಹುಚ್ಚಾಟ ಮಾಡ್ತಿದ್ದಾರೆ.
ಕಬಿನೆಯ ಹಿನ್ನೀರಿನಲ್ಲಿ ಆದಿವಾಸಿ ಮಕ್ಕಳ ದುಸ್ಸಾಹಸ
ಎಚ್.ಡಿ ಕೋಟೆಯ ಕಬಿನಿ ಜಲಾಶಯ ಭರ್ತಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಆದ್ರೆ ಯಾರ ಭಯವಿಲ್ಲದೆ ಭರ್ತಿಯಾದ ಕಬಿನಿ ಹಿನ್ನೀರಿನಲ್ಲಿ ಆದಿವಾಸಿ ಮಕ್ಕಳು ದುಸ್ಸಾಹಸ ಪ್ರದರ್ಶಿಸಿದ್ದಾರೆ. ಯಾವುದೇ ಸುರಕ್ಷತೆ ಇಲ್ಲದ ಬಿದಿರಿನ ಬೊಂಬುಗಳ ಮೇಲೆ ಕುಳಿತು ಮೀನು ಹಿಡಿಯುವ ದುಸ್ಸಾಹಸ ಪ್ರದರ್ಶಿಸಿದ್ದಾರೆ.
ಒಟ್ಟಾರೆ ಕರ್ನಾಟಕಕ್ಕೆ ತಡವಾಗಿ ಬಂದರೂ ಮಳೆರಾಯನ ಆಭರ್ಟಕ್ಕೆ ಸಾಕಷ್ಟು ಪ್ರಾಣಹಾನಿ, ಬೆಳೆ ಹಾನಿ ಸಂಭವಿಸಿದೆ. ಸರ್ಕಾರ ಆದಷ್ಟು ಬೇಗ ಮಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಬೇಕು ಅನ್ನೋದು ಎಲ್ಲರ ಒತ್ತಾಯವಾಗಿದೆ. ಇನ್ನು ಪ್ರವಾಸಿಗರು ಕೂಡ ಅಪಾಯದ ಸ್ಥಳಗಳಲ್ಲಿ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ವರ್ತಿಸಬೇಕಿದೆ.