ರಾಜ್ಯದಲ್ಲಿ ಹಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ
ನಿನ್ನೆ ರಾತ್ರಿ ಕೂಡ ಬೆಂಗಳೂರಲ್ಲಿ ಮಳೆರಾಯ ಆರ್ಭಟಿಸಿದ್ದಾನೆ
ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಆಗಲಿದೆ?
ದೇಶದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತೆ ಆಗಿದೆ. ಉತ್ತರ ಭಾರತದಲ್ಲಿ ರಾತ್ರಿ ವೇಳೆ ತಾಪಮಾನ ಕುಸಿಯುತ್ತಿದ್ದು ವಿಪರೀತ ಚಳಿ ಅನುಭವಿಸುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಮಳೆಯಿಂದಾಗಿ ತೊಂದರೆಗೆ ಒಳಗಾಗಿದ್ದಾರೆ.
ಎಲ್ಲಿ ಏನೇನು ಆಗ್ತಿದೆ..?
ತಮಿಳುನಾಡು ಮತ್ತು ಕರ್ನಾಟಕ: ಹವಾಮಾನ ಇಲಾಖೆಯು ತಮಿಳುನಾಡಿನ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಉತ್ತರ ಕನ್ನಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಉಡುಪಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಎಚ್ಚರಿಕೆ ಕೊಟ್ಟಿದೆ.
ಇದನ್ನೂ ಓದಿ:Rain: ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ ಬೀಳಲಿದೆ? ಹವಾಮಾನ ಇಲಾಖೆಯಿಂದ ಮತ್ತೆ ಎಚ್ಚರಿಕೆ..!
ಇನ್ನು, ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಖಾರ್ಗೋನ್, ಖಾಂಡ್ವಾ, ಬುರ್ಹಾನ್‌ಪುರ್, ಹರ್ದಾ, ಬೇತುಲ್, ಛಿಂದ್‌ವಾರಾ, ಸಿಯೋನಿ, ಮಂಡ್ಲಾ, ದಿಂಡೋರಿ ಮತ್ತು ಅನುಪ್ಪುರ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜಾರ್ಖಂಡ್‌ನ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಖುಂಟಿ, ಸಿಮ್ಡೆಗಾ, ಗುಮ್ಲಾ, ಲೋಹರ್ದಾಗಾ, ಹಜಾರಿಬಾಗ್, ರಾಮಗಢ, ಬೊಕಾರೊ, ಧನ್‌ಬಾದ್, ಸಾಹೇಬ್‌ಗಂಜ್, ಗೊಡ್ಡಾ, ಪಾಕುರ್, ದುಮ್ಕಾ, ದೇವಗಢ, ಜಮ್ತಾರಾ, ಸೆರೈಕೆಲಾದಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಚಳಿ ಆವರಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ ಅಂತ್ಯದ ವೇಳೆಗೆ ಉತ್ತರ ಪ್ರದೇಶದಲ್ಲಿ ಚಳಿಗಾಲ ಪ್ರಾರಂಭವಾಗಲಿದೆ.
ಪಂಜಾಬ್ಗೆ ಶೀಘ್ರವೇ ಚಳಿ ಪ್ರವೇಶಿಸಲಿದೆ. ಹವಾಮಾನ ಇಲಾಖೆ ಪ್ರಕಾರ ಮುಂದಿನ ದಿನಗಳಲ್ಲಿ ವಾತಾವರಣ ಶುಭ್ರವಾಗಿರಲಿದೆ. ಅಕ್ಟೋಬರ್ 27ರ ನಂತರ ವಾತಾವರಣ ಸಂಪೂರ್ಣ ಬದಲಾಗಲಿದೆ. ಇದರೊಂದಿಗೆ ಚಳಿಯೂ ಹೆಚ್ಚಲಿದೆ.
ಬಿಹಾರ: ಬಿಹಾರದಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಲಿನ ವಾತಾವರಣ ಇರಲಿದೆ. ತಾಪಮಾನದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದೆ.
ಹರಿಯಾಣ: ಮುಂದಿನ ಏಳು ದಿನಗಳ ಕಾಲ ಸ್ಪಷ್ಟ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಬರುವ ಸಾಧ್ಯತೆ ಇಲ್ಲ. ಬೆಳಗ್ಗೆ ಮತ್ತು ಸಂಜೆ ಮೃದುವಾದ ಚಳಿ ಇರಲಿದೆ. ಇನ್ನು 3-4 ದಿನಗಳಲ್ಲಿ ಹಗಲು ರಾತ್ರಿ ತಾಪಮಾನವೂ ಕಡಿಮೆಯಾಗಲಿದೆ.
ರಾಜಸ್ಥಾನದಲ್ಲಿ ಹವಾಮಾನ ತಜ್ಞರ ಪ್ರಕಾರ ರಾಜಸ್ಥಾನದಲ್ಲಿ ಮುಂದಿನ 2-3 ದಿನಗಳ ಕಾಲ ವಾತಾವರಣ ಸ್ಪಷ್ಟವಾಗಲಿದ್ದು, ತಾಪಮಾನದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಜೈಪುರ ಹವಾಮಾನ ಕೇಂದ್ರದ ಪ್ರಕಾರ, ಅಕ್ಟೋಬರ್ 19 ರವರೆಗೆ ರಾಜಸ್ಥಾನದಲ್ಲಿ ಹವಾಮಾನವು ಸ್ಪಷ್ಟವಾಗಿರುತ್ತದೆ. ಬಿಸಿಲಿನಿಂದಾಗಿ ಕೆಲವೆಡೆ ತಾಪಮಾನ ಹೆಚ್ಚಾಗಬಹುದು, ಆದರೆ ಈಗ ರಾತ್ರಿಯಲ್ಲಿ ಸ್ವಲ್ಪ ತಂಪು ಇರುತ್ತದೆ.
ಇದನ್ನೂ ಓದಿ:ಕನ್ನಡತಿ ಐಶ್ವರ್ಯ ರೈ ಬಚ್ಚನ್ ಬಾಡಿಗಾರ್ಡ್ ಸಂಬಳ ಎಷ್ಟು? ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ