/newsfirstlive-kannada/media/post_attachments/wp-content/uploads/2024/07/BNG_RAIN-5.jpg)
ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 21ರವರೆಗೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಎಂದು ಎಚ್ಚರಿಕೆ ನೀಡಿದೆ.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
/newsfirstlive-kannada/media/post_attachments/wp-content/uploads/2024/10/Chennai-on-alert-for-heavy-rain.jpg)
ನಿನ್ನೆ ಏನೇನು ಆಯಿತು..?
ಎರಡು ದಿನಗಳ ಕಾಲ ಬೆಳಗ್ಗೆ-ರಾತ್ರಿ ಬೆಂಗಳೂರಲ್ಲಿ ಅಬ್ಬರಿಸಿದ್ದ ವರುಣ, ವಿಶ್ರಾಂತಿ ತೆಗೆದುಕೊಂಡಿದ್ದಾನೆ. ಈ ನಡುವೆ ರಾಜ್ಯ ಪ್ರವಾಸ ಕೈಗೊಂಡಿರೋ ಮಳೆರಾಯ ಹಲವು ಜಿಲ್ಲೆಗಳಲ್ಲಿ ಆರ್ಭಟಿಸಿದ್ದಾನೆ. ಒಂದಷ್ಟು ಅವಾಂತರಗಳನ್ನೂ ಸೃಷ್ಟಿಸಿದ್ದಾನೆ. ಬಾಗಲಕೋಟೆಯ ಕರಡಿ ಗ್ರಾಮದ ಸಂಪರ್ಕದ ರಸ್ತೆ ಮೇಲೆ ಕಾಲುವೆ ನೀರು ತುಂಬಿ ಹರಿಯುತ್ತಿದೆ. ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಸವಾರರು ಪರದಾಡುವಂತಾಗಿತ್ತು. ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನಕ್ಕೂ ಜಲಸಂಕಷ್ಟ ಎದುರಾಗಿದೆ. ದೇಗುಲದ ಪ್ರಾಂಗಣಕ್ಕೆ ನೀರು ನುಗ್ಗಿದ್ದು, ಭಕ್ತರಿಗೆ ಸಮಸ್ಯೆ ತಂದೊಡಿತ್ತು. ಭಾರೀ ಮಳೆಯ ಹಿನ್ನೆಲೆ ಬಾದಾಮಿಯ ಗುಹಾಂತರ ದೇವಾಲಯದ ಸಮೀಪವಿರುವ ಅಕ್ಕತಂಗಿಯರ ಜಲಪಾತ ಮತ್ತೆ ಜೀವಕಳೆ ಪಡೆದುಕೊಂಡಿದೆ. ಪ್ರವಾಸಿಗರನ್ನ ಆಕರ್ಷಿಸ್ತಿದೆ.
ಇದನ್ನೂ ಓದಿ:Rain Effects: ಮಳೆಯಿಂದಾಗಿ ಸಾಲು ಸಾಲು ಸಮಸ್ಯೆ; ಕಾಲು ಜಾರಿ ನದಿಗೆ ಬಿದ್ದ ಯುವಕನಿಗಾಗಿ ಶೋಧ
/newsfirstlive-kannada/media/post_attachments/wp-content/uploads/2024/10/BNG_RAIN_5.jpg)
ಚಿತ್ರದುರ್ಗ ತಾಲೂಕಿನ ಈಚಲ ನಾಗೇನಹಳ್ಳಿ ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಗೋಡೆ ಕುಸಿದಿದೆ. ಪರಿಣಾಮ 75 ವರ್ಷದ ರಂಗಮ್ಮ ಎಂಬ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗೂಗಿ ಹಳ್ಳ ತುಂಬಿದ್ದು, ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಬಸ್​ಗಳ ಸಂಚಾರ ಬಂದ್ ಆಗಿದ್ದು, ಈ ಸೇತುವೆ ನಂಬಿದ್ದ ಚಾಕಲಬ್ಬಿ ಗ್ರಾಮದಲ್ಲಿರುವ 5000 ಸಾವಿರ ಜನರಿಗೆ ಸಂಕಷ್ಟ ಎದುರಾಗಿದೆ. ನೀರಿನ ಹರಿವಿನ ನಡುವೆಯೂ ಅಪಾಯ ಇದ್ದರೂ ಬೈಕ್​ ಏರಿ ಗ್ರಾಮಸ್ಥರು ಹಳ್ಳ ದಾಟ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us