newsfirstkannada.com

Karnataka Rain: ಕರ್ನಾಟಕದಲ್ಲಿ ಇನ್ನೂ ಒಂದು ವಾರ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

Share :

12-07-2023

    ಮಹಾಮಳೆಗೆ ಮಳೆನಾಡಾಗಿ ಬದಲಾದ ಮಲೆನಾಡು

    ಮಳೆಯಿಂದ ಮಲೆನಾಡಿನ ಜಲಪಾತಗಳಿಗೆ ಜೀವ ಕಳೆ

    ಹಾಲ್ನೊರೆಯಂತೆ ಗೋಡಚಿನಮಲ್ಕಿ ಫಾಲ್ಸ್ ಅಬ್ಬರ..!

ಬೆಂಗಳೂರು: ಇನ್ನು, ಕರ್ನಾಟಕದಲ್ಲಿ ಮುಂಗಾರು ಚುರುಕು ಪಡೆದಿದೆ. ಮಲೆನಾಡಿನಲ್ಲಿ ಮಳೆಯಿಂದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ವಿಶ್ವವಿಖ್ಯಾತ ಜೋಗ್​ ಫಾಲ್ಸ್​ಗೆ ಪ್ರವಾಸಿಗರ ವಿಹಾರ ಶುರುವಾಗಿದೆ. ಆದ್ರೂ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ ಕಾಣಿಸಿದ್ದು, ಈ ತಿಂಗಳಲ್ಲಿ ಸುಧಾರಣೆ ಕಾಣಲಿದೆ.

ರಾಜ್ಯದಲ್ಲಿ ಮುಂಗಾರು, ಹಂಗಾಮ ಸೃಷ್ಟಿಸುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಜುಲೈ 16ರ ವರೆಗೂ ಭಾರೀ ಮಳೆ ನಿರೀಕ್ಷೆ ಇದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜೊತೆಗೆ ಕಿತ್ತೂರು, ಕಲ್ಯಾಣ ಕರ್ನಾಟಕ ಭಾಗದಲ್ಲೂ ಸಾಧಾರಣ ಮಳೆ ಆಗಲಿದೆ. ತಿಂಗಳ ಬಳಿಕ ಮಲೆನಾಡು ಮಳೆನಾಡಾಗಿ ಬದಲಾಗಿದ್ದು, ನಿರಂತರ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳಿಗೆ ಜೀವಕಳೆ ಬಂದಿದೆ.

ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲೀಗ ಸುಂದರ ದೃಶ್ಯಕಾವ್ಯ

ಮಲೆನಾಡಿನ ಹೆಬ್ಬಾಗಿಲಲ್ಲಿ ವರುಣದೇವ, ತಿಂಗಳ ರಜೆ ಕಳೆದು ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಧರೆಯ ಮೇಲೆ ತನ್ನ ಪ್ರೀತಿಯ ಧಾರೆ ಎರೆಯುತ್ತಿರುವ ಮಳೆ, ಸ್ವರ್ಗವನ್ನೇ ಸೃಷ್ಟಿಸಿದೆ. ಸಂಭ್ರಮದಿಂದ ಉಕ್ಕುತ್ತಿರುವ ಜೀವಸೆಲೆಯಿಂದ ಕನ್ನಡನಾಡಿನ ಭಾಗೀರಥಿಯ ಒಡಲು ತುಂಬಿ ತುಳುಕ್ತಿದೆ. ಶರಾವತಿಯ ಸೊಬಗು, ಕಣ್ಣಿಗೆ ಹಬ್ಬ ನೀಡ್ತಿದ್ದು, ತನ್ನ ತಳಕು ಬಳುಕಿನಿಂದ ಜೋಗ ಜಲಪಾತದಲ್ಲಿ ನಾಟ್ಯರಾಣಿ ಆಗಿ ಸಾವಿರಾರು ಅಡಿಗಳಿಂದ ಧುಮ್ಮಿಕ್ತಿದ್ದಾಳೆ. ಫಾಲ್ಸ್​ನ ವೈಭವ, ಹಚ್ಚ ಹಸಿರಿನ ಪರಿಸರ ಕಣ್ತುಂಬಿಕೊಳ್ಳಲು ಸಾವಿರಾರು ಜನ, ಜೋಗದ ಸಿರಿ ಕಾಣಲು ಆಗಮಿಸ್ತಿದ್ದಾರೆ.

ಜಲ ವೈಭವದಲ್ಲಿ ಮಿಂದೇಳ್ತಿದೆ ಗೋಡಚಿನಮಲ್ಕಿ ಫಾಲ್ಸ್!

ಪಶ್ಚಿಮಘಟ್ಟಗಳಲ್ಲಿ ಬಿಡಾರ ಹೂಡಿರುವ ಮಳೆರಾಯ, ಸ್ವಲ್ಪ ಉದಾರಿ ಆಗಿದ್ದಾನೆ. ಘಟ್ಟದಲ್ಲಿ ಬೀಳ್ತಿರುವ ಸೋನೆ ಮಳೆಯಿಂದ ಮಾರ್ಕಂಡೇಯ ನದಿಯಲ್ಲಿ ಝುಳು ಝುಳು ನಿನಾದ ಕೇಳಿಸ್ತಿದೆ. ಗೋಕಾಕ್​ನ​​ ಗೋಡಚಿನಮಲ್ಕಿ ಫಾಲ್ಸ್​ ಮೈದುಂಬಿ, ಹಾಲ್ನೊರೆಯ ನಗೆ ಬೀರ್ತಿದೆ. ಎತ್ತರಕ್ಕಿಂತ ಹೆಚ್ಚು ಅಗಲವಾಗಿ, ಬಂಡೆಗಲ್ಲುಗಳ ಮೇಲೆ ಹಂತ ಹಂತವಾಗಿ ಜಾರಿ, ತನ್ನ ವೇಗ ವೃದ್ಧಿಸಿಕೊಳ್ತಿದೆ. ಜಲಪಾತದಿಂದ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯುತ್ತಿರುವ ನಿಸರ್ಗದ ಈ ರಮಣೀಯ ದೃಶ್ಯ ಕಾಣಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಮುಂಗಾರು ವಿಳಂಬ.. ಕಳೆಗುಂದಿದ ಭರಚುಕ್ಕಿ

ಕಾವೇರಿ ಕಣಿವೆ ಮೇಲೆ ಈ ಬಾರಿ ವರುಣ ಮುನಿದಿದ್ದಾನೆ. ಚಾಮರಾಜನಗರದಲ್ಲಿ ಮುಂಗಾರು ವಿಳಂಬವಾಗಿದ್ದು, ಭರಚುಕ್ಕಿ ಜಲಪಾತ ಕಳೆಗುಂದಿದೆ. ಚಾಮರಾಜನಗರದ ಕೊಳ್ಳೇಗಾಲ ಸಮೀಪವಿರುವ ಭರಚುಕ್ಕಿ ಮುಂಗಾರಿನಲ್ಲೂ ಕಡು ಬೇಸಿಗೆಯಂತೆ ಕಲ್ಲು ಕೊರಕಲು ಕಾಣಿಸ್ತಿದೆ. ಕೆಆರ್​​​ಎಸ್, ಕಬಿನಿ ಡ್ಯಾಂನಿಂದ ಹೆಚ್ಚುವರಿ ನೀರು ಬಿಟ್ಟರಷ್ಟೇ ಜಲಪಾತ ಭೋರ್ಗರೆಯಲಿದೆ. ಆದ್ರೆ, ಡ್ಯಾಂಗಳಿಗೆ ಜನರಾಶಿ ಹರಿದು ಬರ್ತಿಲ್ಲ. ಇಷ್ಟೊತ್ತಿಗೆ ಪ್ರವಾಸಿಗರಿಂದ ತುಂಬಿ ತುಳುಕ್ತಿದ್ದ ಭರಚುಕ್ಕಿ, ಈಗ ಅನಾಥವಾಗಿದೆ.

ಸುರಿಯದ ನಿರೀಕ್ಷಿತ ಮಳೆ, ಮುಂಗಾರು ಕೊರತೆ

ಇನ್ನು, ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಮಳೆಯಾಗುತ್ತಿಲ್ಲ. ಆದ್ರೆ ಪಶ್ಚಿಮಘಟ್ಟಗಳಲ್ಲಿ ಮಳೆ ಸುರಿತಿದ್ದು, ನದಿಗಳಿಗೆ ನೀರು ಹರಿದು ಬರುತ್ತಿದೆ. ಬಹುತೇಕ ಜಲಾನಯನ ಪ್ರದೇಶಗಳಲ್ಲಿ ಕಡಿಮೆ ಮಳೆ ಆಗಿದ್ದು, ಬರಗಾಲದ ಭೀತಿಯಿಂದ ರಾಜ್ಯ ಹೊರಬಂದಿಲ್ಲ.

ಮಳೆ ಜೂಜಾಟ!

ಜೂನ್‌ನಲ್ಲಿ ಕಡಿಮೆ ಮಳೆಯಾಗಿದ್ದು ಶೇ 56ರಷ್ಟು ಮಳೆ ಕೊರತೆ ದಾಖಲಾಗಿದೆ. ಕಳೆದ ವಾರ ಮತ್ತು ಈ ವಾರ ಸ್ವಲ್ಪ ಸುಧಾರಣೆ ಕಂಡಿದ್ದು, ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಜುಲೈ 1 ರಿಂದ ಇಲ್ಲಿವರೆಗ ಕರಾವಳಿ ಕರ್ನಾಟಕದಲ್ಲಿ ಶೇ 68 ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ 35 ಅಧಿಕ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 23 ಪ್ರತಿಶತ ಮಳೆಯಾಗಿದೆ. ಈ ಅವಧಿಯಲ್ಲಿ, ಕರ್ನಾಟಕವು ಒಟ್ಟಾರೆ 34 ಪ್ರತಿಶತ ಅಧಿಕ ಮಳೆ ಪಡೆದಿದೆ. ಉತ್ತರ ಕರ್ನಾಟಕದ ತುಂಗಭದ್ರಾ, ಆಲಮಟ್ಟಿ ಅಣೆಕಟ್ಟುಗಳಿಗೆ ಒಳಹರಿವು ಇನ್ನೂ ಹೆಚ್ಚಾಗಿಲ್ಲ.

ಒಟ್ಟಾರೆ, ಮಲೆನಾಡಿನಲ್ಲಿ ಮಳೆಯಿಂದ ಹಳ್ಳ-ಕೊಳ್ಳಗಳಿಗೆ ಜೀವಕಳೆ ಬಂದಿದೆ. ಮುಂದಿನ ವಾರದಲ್ಲಿ ಕರಾವಳಿ, ಮಲೆನಾಡಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಇದ್ದು, ರಾಜ್ಯದ ಇತರ ಭಾಗಗಳಲ್ಲಿ ಸಾಧಾರಣ ತುಂತುರು ಮಳೆಯಾಗಲಿದೆ ಹವಾಮಾನ ಇಲಾಖೆ ಆಶಾಭಾವನೆಯ ಭವಿಷ್ಯ ನುಡಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Karnataka Rain: ಕರ್ನಾಟಕದಲ್ಲಿ ಇನ್ನೂ ಒಂದು ವಾರ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆಯೇನು?

https://newsfirstlive.com/wp-content/uploads/2023/07/Rain_2.jpg

Load More