ಕಲಬುರಗಿಯಲ್ಲಿ ಮಳೆಯ ಅವಾಂತರ ಸಿಕ್ಕಾಪಟ್ಟೆ
89 ಶಾಲಾ ಕೊಠಡಿ, 38 ಅಂಗನವಾಡಿ ಕಟ್ಟಡಕ್ಕೆ ಹಾನಿ
ಸಂಕಷ್ಟ ಸಮಸ್ಯೆಗೆ ಸಹಾಯವಾಣಿ ತೆರೆದ ಜಿಲ್ಲಾಡಳಿತ
ಕಲಬುರಗಿ: ಭಾರೀ ಮಳೆಯ ಹೊಡೆತಕ್ಕೆ ಜಿಲ್ಲೆಯಲ್ಲಿರುವ ಅಬ್ಬರದ ಮಳೆಗೆ 283 ಮನೆಗಳು ನೆಲಕಚ್ಚಿವೆ. 281 ವಿದ್ಯುತ್ ಕಂಬಗಳು ಧರೆಶಾಹಿ ಆಗಿವೆ.
ಜೊತೆಗೆ 35 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಢಮಾರ್ ಆಗಿವೆ. ಹಾಳಾದ ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ರಿಪೇರಿಯಲ್ಲಿ ಜೆಸ್ಕಾಂ ಸಿಬ್ಬಂದಿ ಬ್ಯುಸಿ ಆಗಿದ್ದಾರೆ. ಭೀಮಾ, ಕಾಗಿಣಾ ನದಿಯಲ್ಲಿ ಪ್ರವಾಹ ಸಂಭವಿಸಿದ್ರೆ 159 ಗ್ರಾಮಗಳು ತುತ್ತಾಗಲಿವೆ.
ಕಲಬುರಗಿ ತಾಲೂಕಿನ ಅಫಜಲಪುರ, ಶಾಹಬಾದ್ ಕಾಳಗಿಯ ಗ್ರಾಮಗಳು ಮಳೆಗೆ ತತ್ತರಿಸಿ ಹೋಗಿವೆ. ಮಳೆ ಅಬ್ಬರಕ್ಕೆ ಜಿಲ್ಲೆಯಲ್ಲಿ 147 ಕಿಲೋ ಮೀಟರ್ ರಸ್ತೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ 84 ಸೇತುವೆಗಳು, 89 ಶಾಲಾ ಕೊಠಡಿಗಳು, 38 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ.
ಹಾಗೆಯೇ ಜಿಲ್ಲೆಯ ತಾಲ್ಲೂಕುವಾರು ತುರ್ತು ನಿರ್ವಹಣಾ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಮಳೆಯಿಂದ ತೊಂದರೆ ಆದರೆ ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 1077ಗೆ ಕರೆ ಮಾಡಲು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ