newsfirstkannada.com

ಅಲ್ಲಲ್ಲಿ ಮಳೆ.. ಸಿಡಿಲಿಗೆ ಇಬ್ಬರು ರೈತರು ಸಾವು; ರಾಜ್ಯದಲ್ಲಿ ಏನೆಲ್ಲ ಅನಾಹುತ ಆಗಿದೆ..?

Share :

10-06-2023

  ಮಂಡ್ಯದಲ್ಲಿ ನೆಲಕ್ಕುರುಳಿವೆ ಮರಗಳು, ವಿದ್ಯುತ್ ಕಂಬಗಳು

  ಕಲಬುರಗಿ ನಗರ ಸೇರಿ ಜಿಲ್ಲೆಯ ಕೆಲವೆಡೆ ಮಳೆ

  ಸಮುದ್ರದಲ್ಲಿ ಸೈಕ್ಲೋನ್ ಆರ್ಭಟ ಹೇಗಿದೆ..?

ಮಂಗಾರು ಮಳೆ ಆರಂಭಕ್ಕೂ ಮೊದಲೇ ರಾಜ್ಯದ ಹಲವು ಭಾಗಗಳಲ್ಲಿ ಮಳೆರಾಯ ಆರ್ಭಟಿಸಿ ಅನಾಹುತ ಮಾಡಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ವ್ಯಾಪಕ ಮಳೆಯಾಗಿದೆ. ನಿನ್ನೆ ಸಂಜೆ ಸುರಿದ ಗಾಳಿ ಮಳೆ ಪರಿಣಾಮ ಬೆಳೆಗಳಿಗೆ ಹಾನಿಯಾಗಿದೆ. ಕೂಡ್ಲಿಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿ ಸಹಿತ ಮಳೆಯಾಗಿದ್ದರಿಂದ ಹತ್ತಾರು ಎಕರೆ ಬಾಳೆ ತೋಟ ನಾಶವಾಗಿದೆ. ಕೂಡ್ಲಿಗಿ ನಿವಾಸಿ ರಮೇಶ್ ಎಂಬುವವರ ಸುಮಾರು ನಾಲ್ಕು ಎಕರೆ ಬಾಳೆ ನಾಶವಾಗಿದ್ದು ರೈತ ಕಂಗಾಲಾಗಿದ್ದಾರೆ.

ಸಿಡಿಲಿಗೆ ಇಬ್ಬರು ರೈತರು ಬಲಿ

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಗುಡುಗು ಸಹಿತ ಮಳೆ‌ಗೆ ಇಬ್ಬರು ಮೃತಪಟ್ಟಿದ್ದಾರೆ. ಅಣಬೂರು ಗ್ರಾಮದ ಕಾಟಲಿಂಗಪ್ಪ ಹಾಗೂ ರಾಜು ಎಂಬ ರೈತರು ಸಿಡಿಲಿಗೆ ಬಲಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಘಡ ನಡೆದಿದೆ. ಅಣಬೂರು ಗ್ರಾಮದ ಕಾಟಲಿಂಗಪ್ಪ(42), ರಾಜು (32) ಸಿಡಿಲಿಗೆ ಸಾವನ್ನಪ್ಪಿದ್ದಾರೆ.  ಸ್ಥಳಕ್ಕೆ ಅಧಿಕಾರಿಗಳು ಹಾಗೂ ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲಕ್ಕುರುಳಿದ ಮರಗಳು, ವಿದ್ಯುತ್ ಕಂಬಗಳು

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಬಿರುಗಾಳಿ‌ ಸಹಿತ ಭಾರೀ ಮಳೆಯಾಗಿದೆ. ಈ ಬಿರುಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮದ್ದೂರು ತಾಲೂಕಿನ ನಗರಕೆರೆ, ಸೋಂಪುರ, ಮಾಲಗಾರನಹಳ್ಳಿ, ಅಜ್ಜಹಳ್ಳಿ, ಕ್ಯಾತಘಟ್ಟ,‌ ಹುಲಿಗೆರೆಪುರ ಸೇರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಳೆಯಾಗಿದೆ. ಕೆಲವೆಡೆ ಬಿರುಗಾಳಿಗೆ ಮರಗಳು ಧರೆಗುರುಳಿದ್ರೆ ಇನ್ನೂ ಕೆಲವೆಡೆ ವಿದ್ಯುತ್ ಕಂಬಗಳು ಮುರಿದು ಅವಾಂತರ ಸೃಷ್ಟಿಸಿವೆ. ಸೆಸ್ಕಾಂ‌ ಅಧಿಕಾರಿಗಳಿಂದ ಮುರಿದು ಬಿದ್ದ ಕಂಬಗಳ ತೆರವು ಕಾರ್ಯಾಚರಣೆ ನಡೆದಿದೆ.

ಕಲಬುರಗಿ ನಗರ ಸೇರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ

ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮೊದಲ ಮಳೆ ಶುರುವಾಗಿದೆ. ಕಲಬುರಗಿ ನಗರ ಸೇರಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಗಾಳಿ, ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆ ಸುರಿದಿದೆ. ಮುಂಗಾರು ಮಳೆ ಆರಂಭದಿಂದ ರೈತರು ಖುಷ್ ಆಗಿದ್ದು ಕೃಷಿ ಚಟುವಟಿಕೆಗಳಿಗೆ ಅಣಿಯಾಗಲಿದ್ದಾರೆ. ಮತ್ತೊಂದೆಡೆ ಮಳೆ, ಗಾಳಿಯಿಂದ ವಾಹನ ಸವಾರರು ಪರದಾಡಿದ್ದಾರೆ. ಗಾಳಿ, ಮಳೆ ಹಿನ್ನೆಲೆ ನಗರದ ಹಲವು ಕಡೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ.

ಹೊಗೇನಕಲ್‌ನಲ್ಲಿ ತೆಪ್ಪಗಳ ರೇಸ್!

ಚಾಮರಾಜನಗರ ಜಿಲ್ಲೆ ಗಡಿಗೆ ಹೊಂದಿಕೊಂಡ ತಮಿಳುನಾಡು ಭಾಗದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ತೆಪ್ಪಗಳ ರೇಸ್ ಜೋರಾಗಿದೆ. ಹೊಗೇನಕಲ್‌ ಜಲಪಾತದ ಹಿನ್ನೀರು ಪ್ರದೇಶದಲ್ಲಿ ತೆಪ್ಪಗಳ ರೋಮಾಂಚಕ ರೇಸ್ ನಡೆಯುತ್ತಿದೆ. ತಮಿಳುನಾಡಿನ ಊಟುಮಲೈ ಗ್ರಾಮದ ಮಾರಿಯಮ್ಮ ಹಬ್ಬದ ನಿಮಿತ್ತ ನಡೆದ ಸ್ಪರ್ಧೆಯಲ್ಲಿ ತೆಪ್ಪಗಳು ರೇಸ್​​​ಗೆ ಇಳಿದಿವೆ.

3-4 ದಿನಗಳಲ್ಲಿ ಭಾರೀ ಮಳೆ

ಬಿಪರ್ಜಾಯ್ ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಆರ್ಭಟಿಸುತ್ತಿದೆ. ಮುಂದಿನ 3-4 ದಿನಗಳು ಪಶ್ಚಿಮ ಕರಾವಳಿ ಭಾಗದ ಕರ್ನಾಟಕ, ಕೇರಳ, ಗೋವಾ, ಮುಂಬೈ, ಗುಜರಾತ್, ಲಕ್ಷ್ಮದ್ವೀಪದ ತೀರಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿಸಮುದ್ರದ ಉತ್ತರದ ಕಡೆ ಚಲಿಸುತ್ತಿರುವ ಚಂಡಮಾರುತ ಗುಜರಾತ್, ಗೋವಾ, ಮುಂಬೈ ಕರಾವಳಿ ತೀರದಿಂದ ಸುಮಾರು 870 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಗಂಟೆಗೆ 155 ಕಿ.ಮೀಗೂ ಅಧಿಕ ವೇಗದಲ್ಲಿ ಗಾಳಿ ಬೀಸುತ್ತಿದ್ದು ಗರಿಷ್ಠ 180 ಕಿ.ಮೀವರೆಗೂ ವೇಗ ಪಡೆಯುವ ಮುನ್ಸೂಚನೆ ಇದೆ. ಜೂನ್ 11ರವರೆಗೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ತೀರ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿರುವ ಮೀನುಗಾರರು ಮರಳುವಂತೆ ಸೂಚನೆ ನೀಡಲಾಗಿದೆ. ಇನ್ನು ಸಮುದ್ರ ತೀರ ಪ್ರದೇಶಗಳಲ್ಲಿ ನೆಲೆಸಿರುವ ಜನರ ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಎಲ್ಲಾ ಬಂದರುಗಳಿಗೆ ರಿಮೋಟ್ ಎಚ್ಚರಿಕೆ ಸಂಕೇತ ರವಾನೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಎನ್​​ಡಿಆರ್​ಎಫ್ ಹಾಗೂ ಎಸ್​ಡಿಆರ್​​ಎಫ್  ತಂಡಗಳು ಕಾರ್ಯಾಚರಣೆಗೆ ಸಜ್ಜಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಲ್ಲಲ್ಲಿ ಮಳೆ.. ಸಿಡಿಲಿಗೆ ಇಬ್ಬರು ರೈತರು ಸಾವು; ರಾಜ್ಯದಲ್ಲಿ ಏನೆಲ್ಲ ಅನಾಹುತ ಆಗಿದೆ..?

https://newsfirstlive.com/wp-content/uploads/2023/06/death-5.jpg

Load More