newsfirstkannada.com

ಇಂದು ನಡೆಯಬೇಕಿದ್ದ ಟಿ20 ವಿಶ್ವಕಪ್​ ವಿಜಯೋತ್ಸವದ ಮೆರವಣಿಗೆ ರದ್ದು? ಕಾರಣವೇನು?

Share :

Published July 4, 2024 at 6:02pm

Update July 4, 2024 at 6:08pm

    ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ

    ಭಾರತಕ್ಕೆ ಬಂದಿಳಿದ ಟೀಮ್​ ಇಂಡಿಯಾ ಆಟಗಾರರಿಗೆ ಅದ್ಧೂರಿ ಸ್ವಾಗತ..!

    ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವದ ಮೆರವಣಿಗೆ

ಮುಂಬೈ: ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಟೀಮ್​ ಇಂಡಿಯಾ ತವರಿಗೆ ವಾಪಸ್​ ಆಗಿದೆ. ಭಾರತಕ್ಕೆ ಬಂದಿಳಿದ ಟೀಮ್​ ಇಂಡಿಯಾ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾ ಆಟಗಾರರು ಕುಣಿದು ಕುಪ್ಪಳಿಸಿದ್ರು.

ಇಂದು ಮುಂಬೈನ ವಾಂಖೆಡೆಯಲ್ಲಿ ಟಿ20 ವಿಶ್ವಕಪ್​ ವಿಜಯೋತ್ಸವದ ಮೆರವಣಿಗೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮೆರವಣಿಗೆ ಬಳಿಕ ವಾಂಖೆಡೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಭಿಮಾನಿಗಳಿಗೆ ಉಚಿತವಾಗಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆದರೀಗ, ಮುಂಬೈನಲ್ಲಿ ವಾಂಖೆಡೆ ಸ್ಟೇಡಿಯಮ್​ ಸುತ್ತಮುತ್ತ ಭಾರೀ ಮಳೆ ಬೀಳುತ್ತಿದೆ. ಹಾಗಾಗಿ ಇನ್ನೂ ಮೂರು ಗಂಟೆಗಳ ಕಾಲ ಮಳೆ ಮುಂದುವರಿಯಲಿದ್ದು, ವಿಜಯೋತ್ಸವದ ಮೆರವಣಿಗೆ ರದ್ದಾಗುವ ಸಾಧ್ಯತೆಗಳು ಇವೆ. ಟೀಮ್​ ಇಂಡಿಯಾ ಭದ್ರತೆ ಮತ್ತು ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವರದಿಯಾಗಿದೆ.

ಸಂಜೆ 6 ಗಂಟೆ ಮೇಲೆ ಮರೈನ್ ಡ್ರೈವ್‌ನಿಂದ ವಾಂಖೆಡೆ ಕ್ರೀಡಾಂಗಣದವರೆಗೆ ಟೀಮ್​ ಇಂಡಿಯಾ ವಿಕ್ಟರಿ ಪರೇಡ್ ನಡೆಸಬೇಕಿದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲು ನಾಯಕ ರೋಹಿತ್ ಶರ್ಮಾ ಮತ್ತು ಜಯ್‌ ಶಾ ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನ ನೀಡಿದ್ರು.

ಇದನ್ನೂ ಓದಿ: ಫ್ಯಾಮಿಲಿ ಜತೆ ಕೊಹ್ಲಿ ಟಿ20 ವಿಶ್ವಕಪ್ ವಿಜಯೋತ್ಸವ.. ಅನುಷ್ಕಾ ಶರ್ಮಾ ಬಾರದಿರಲು ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂದು ನಡೆಯಬೇಕಿದ್ದ ಟಿ20 ವಿಶ್ವಕಪ್​ ವಿಜಯೋತ್ಸವದ ಮೆರವಣಿಗೆ ರದ್ದು? ಕಾರಣವೇನು?

https://newsfirstlive.com/wp-content/uploads/2024/07/TEAM_INDIA-2.jpg

Load More