newsfirstkannada.com

ರಾಜ್ಯದಲ್ಲಿ ತಗ್ಗಿದ ಮಳೆರಾಯನ ಅಬ್ಬರ.. KRS ಡ್ಯಾಂನ ಒಳಹರಿವಿನ ಪ್ರಮಾಣ ಕಡಿಮೆ.. ಹೊರ ಹರಿವಿನಲ್ಲೂ ಇಳಿಕೆ..!

Share :

29-07-2023

    ಮಳೆ ಸುರಿದರೂ ಜಲಾಶಯಗಳು ಮಾತ್ರ ಅರ್ಧ ಖಾಲಿ..!

    ತಗ್ಗಿದ ಕೃಷ್ಣೆಯ ಅಬ್ಬರ.. ಪ್ರವಾಹ ಭೀತಿ ದೂರ

    ಮಳೆಯಿಂದ ಏನೆಲ್ಲ ಅನಾಹುತ ಆಗಿದೆ.. ಕಂಪ್ಲೀಟ್ ಮಾಹಿತಿ..

ಹೌದು.. ಧೋ ಎಂದು ಮಳೆ ಸುರಿದ, ಮುಗಿಲು ಸ್ವಲ್ಪ ವಿಶ್ರಾಂತಿಗೆ ಜಾರಿದೆ. ನಿನ್ನೆಯಿಂದ ಮಳೆ ಅಬ್ಬರ ಅಲ್ಪ ಪ್ರಮಾಣ ಕುಸಿತ ಆಗಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ಮುನ್ಸೂಚನೆ ಇದೆ.. ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ಇದೆ.. ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮಳೆ ಅಬ್ಬರ ತಗ್ಗಿದ್ದರಿಂದ ಜಲಾಶಯಗಳ ಒಳ ಹರಿವಿನ ಪ್ರಮಾಣವೂ ಕಡಿಮೆ ಆಗಿದೆ. ಕೆಆರ್ಎಸ್ ಡ್ಯಾಂನ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಹೊರ ಹರಿವು ಇಳಿಕೆ ಕಂಡಿದೆ.

ಕೆಆರ್​​ಎಸ್​
ಕೆಆರ್​​ಎಸ್​

KRS ಜಲಾಶಯ

ಕೃಷ್ಣರಾಜ ಸಾಗರ ಜಲಾಶಯದ ಗರಿಷ್ಠ ಮಟ್ಟ 49.452 ಟಿಎಂಸಿ ಆಗಿದ್ದು, ರಾತ್ರಿ 32.554 ಟಿಎಂಸಿ ನೀರು ದಾಖಲಾಗಿದೆ.. ಸದ್ಯ ಡ್ಯಾಂನ ಒಳ ಹರಿವು 33,566 ಕ್ಯೂಸೆಕ್​​​ನಷ್ಟಿದ್ದು 3,106 ಕ್ಯೂಸೆಕ್ನಷ್ಟು ಮಾತ್ರ ಹೊರ ಬಿಡಲಾಗ್ತಿದೆ.

ಆಲಮಟ್ಟಿ ಡ್ಯಾಂ

ಬರದ ನಾಡು ವಿಜಯಪುರ ಜಿಲ್ಲೆಯ ಜೀವನಾಡಿ ಆಲಮಟ್ಟಿ ಜಲಾಶಯ ಭರ್ತಿ ಆಗಲು ಇನ್ನು, 30 ಟಿಎಂಸಿ ನೀರು ಬಾಕಿ ಇದೆ.. ಸದ್ಯ ಒಳ ಹರಿವುಗಿಂತ ಹೊರ ಹರಿವು ಹೆಚ್ಚಿದೆ. ಆಲಮಟ್ಟಿ ಜಲಾಶಯ 123.081 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಸುಮಾರು 88.503 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಆಲಮಟ್ಟಿ ಡ್ಯಾಂನಲ್ಲಿ ಒಳ ಹರಿವು 1 ಲಕ್ಷ 57 ಸಾವಿರದ 729 ಕ್ಯೂಸೆಕ್ನಷ್ಟಿದೆ. ಆದ್ರೆ ಅದಕ್ಕೂ ಹೆಚ್ಚು ಹೊರ ಹರಿವು ದಾಖಲಾಗಿದೆ.

ತುಂಗಭದ್ರಾ ಡ್ಯಾಂ

ವಿಜಯನಗರ ಜಿಲ್ಲೆಯ ತುಂಗಭದ್ರಾ ಡ್ಯಾಂ ಸುಮಾರು ಅರ್ಧದಷ್ಟು ತುಂಬಿದ್ದು, ಹೊರ ಹರಿವಿನ ನೀರು ಸ್ಥಗಿತ ಮಾಡಲಾಗಿದೆ. ತುಂಗಭದ್ರಾ ಡ್ಯಾಂನ ಗರಿಷ್ಠ ಮಟ್ಟ 105.788 ಟಿಎಂಸಿಗಳಷ್ಟಿದ್ದು, ನಿನ್ನೆ ರಾತ್ರಿವರೆಗೆ 59.001 ಟಿಎಂಸಿಯಷ್ಟಿತ್ತು.. ಒಳಹರಿವು 84 ಸಾವಿರದ 506 ಕ್ಯೂಸೆಕ್ನಷ್ಟಿದ್ದರೆ, ಹೊರಹರಿವು ಪ್ರಮಾಣ ಕೇವಲ 59 ಕ್ಯೂಸೆಕ್​​ ನಷ್ಟಿದೆ.

ನೀರಲ್ಲಿ ಕೊಚ್ಚ ಹೋದ ಯುವಕನಿಗಾಗಿ ಶೋಧ

ಬೀದರ್ ಜಿಲ್ಲೆಯ ಬಸವಕಲ್ಯಾಣದ ಧನ್ನುರು ಗ್ರಾಮದ ಯುವಕನ ಶೋಧ ಮುಂದುವರಿದಿದೆ.. ಹಳ್ಳ ದಾಟುವಾಗ ಕೊಚ್ಚಿ ಹೊಗಿದ್ದ ಮಲ್ಲಪ್ಪ ಶರಣಪ್ಪಗಾಗಿ ಎಸ್‌ಡಿಆರ್‌‌ಎಫ್ ತಂಡ ಇವತ್ತು ಕೂಡ ಶೋಧಕಾರ್ಯ ಕೈಗೆತ್ತಿಕೊಳ್ತಿದೆ.. ನಾಪತ್ತೆಯಾದ ಯುವಕನ ಪತ್ತೆಗಾಗಿ ಡ್ರೋಣ್ ಬಳಸಲಾಗ್ತಿದೆ.

ಕೊಚ್ಚಿ ಹೋದ ಯುವಕನಿಗಾಗಿ ಶೋಧ
ಕೊಚ್ಚಿ ಹೋದ ಯುವಕನಿಗಾಗಿ ಶೋಧ

ಮಲ್ಲಿಕಾರ್ಜುನ ದೇವರಿಗೂ ಬಿಡದ ಜಲಕಂಟಕ

ಬೀದರ್‌ನ ಕಾರಂಜಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ನದಿಗೆ ಭಾರೀ ಪ್ರಮಾಣದ ನೀರು ಹೊರಕ್ಕೆ ಬಿಡಲಾಗ್ತಿದೆ.. ದೇವನಿಗೂ ಜಲಕಂಟಕ‌ ತಪ್ಪಲ್ಲಾ ಎಂಬಂತಾಗಿದೆ.. ಕಣಜಿ ಬಳಿ ಇರುವ ಮಲ್ಲಿಕಾರ್ಜುನ ದೇವಸ್ಥಾನ ಸಹ ಮುಳುಗಡೆ ಆಗಿದೆ.

ಮುಳುಗಡೆಯಾದ ಮಲ್ಲಿಕಾರ್ಜುನ್ ದೇಗುಲ
ಮುಳುಗಡೆಯಾದ ಮಲ್ಲಿಕಾರ್ಜುನ್ ದೇಗುಲ

ತಗ್ಗಿದ ಕೃಷ್ಣೆಯ ಅಬ್ಬರ.. ಪ್ರವಾಹ ಭೀತಿ ದೂರ

ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಮಳೆ ಸ್ವಲ್ಪ ಬಿಡುವು ನೀಡಿದ್ದಾನೆ.. ಭೋರ್ಗರೆದು ಹರಿಯುತ್ತಿದ್ದ ಕೃಷ್ಣಾ, ಘಟಪ್ರಭಾ ನದಿಗಳ ಹರಿವಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.. ಹೀಗಾಗಿ ಪ್ರವಾಹದ ಭೀತಿಯಲ್ಲಿದ್ದ ನದಿಯಂಚಿನ ಗ್ರಾಮಗಳು ನಿಟ್ಟುಸಿರು ಬಿಟ್ಟಿವೆ.

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ
ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ

ಕಪ್ಪತ್ತಗುಡ್ಡ ಗಾಳಿಗುಂಡಿಗೆ ತೆರಳುವ ಡೋಣಿಗಳಿಗೆ ನಿರ್ಬಂಧ!

ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಬಳಿ ಭಾರೀ ಮಳೆ ಆಗಿದೆ.. ಇದರಿಂದ ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡದ ಗಾಳಿಗುಂಡಿಗೆ ಡೋಣಿ ಮಾರ್ಗಕ್ಕೆ ನಿರ್ಬಂಧ ಹೇರಲಾಗಿದೆ.. ಅನಧಿಕೃತವಾಗಿ ಕಪ್ಪತ್ರಗುಡ್ಡಕ್ಕೆ ಪ್ರವೇಶಿಸಿದ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ..

ಕಪ್ಪತಗುಡ್ಡ
ಕಪ್ಪತಗುಡ್ಡ

ವರುಣ ತಗೊಂಡ ವಿರಾಮ, ಕೃಷಿಗೆ ಇನ್ಮುಂದೆ ಆರಾಮ!

ಚಿತ್ರದುರ್ಗದಲ್ಲೂ ಕಳೆದ 8 ದಿನಗಳಿಂದ ಅಬ್ಬರಿಸಿದ್ದ ಮಳೆರಾಯ ಕೊಂಚ ಗ್ಯಾಪ್ ನೀಡಿದ್ದು, ರೈತರು ಕೃಷಿ ಕಾರ್ಯಗಳತ್ತ ಮುಖ ಮಾಡಿದ್ದಾರೆ.. ಜಿಲ್ಲೆಯಲ್ಲಿ ಸುರಿದ ವಿಪರೀತ ಮಳೆಯಿಂದ ರೈತರು ಬೆಳೆ ಹಾಳಾಗುವ ಭೀತಿಯಲ್ಲಿದ್ರು. ಈಗ ಕೃಷಿ ಕಾರ್ಯಗಳತ್ತ ರೈತರು ಮರಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ತಗ್ಗಿದ ಮಳೆರಾಯನ ಅಬ್ಬರ.. KRS ಡ್ಯಾಂನ ಒಳಹರಿವಿನ ಪ್ರಮಾಣ ಕಡಿಮೆ.. ಹೊರ ಹರಿವಿನಲ್ಲೂ ಇಳಿಕೆ..!

https://newsfirstlive.com/wp-content/uploads/2023/07/KRS-2.jpg

Load More