newsfirstkannada.com

ಇನ್ನೂ ನಿಲ್ಲದ ಮಳೆ ಆರ್ಭಟ; ಜೀವ ಭಯದಲ್ಲಿ ಉತ್ತರ ಭಾರತೀಯರು; ಎಲ್ಲೆಲ್ಲಿ ಏನಾಯ್ತು?

Share :

12-07-2023

  ವರುಣಾರ್ಭಟಕ್ಕೆ ಉತ್ತರ ಭಾರತ ತತ್ತರ

  ಮಹಾ ಮೇಘಸ್ಫೋಟ.. ಜನರ ಪರದಾಟ

  ಮೇಘರಾಜನ ಪ್ರತಾಪಕ್ಕೆ ಕಂಗೆಟ್ಟ ಜನರು

ದೆಹಲಿ: ಉತ್ತರ ಭಾರತದಲ್ಲಿ ಅಕ್ಷರಶಃ ಮೇಘಸ್ಫೋಟವಾಗಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉತ್ತರದ ರಾಜ್ಯಗಳು ಮುಳುಗಿ ಹೋಗಿವೆ. ವರುಣನ ಆಟಾಟೋಪಕ್ಕೆ ಇಳೆಯೇ ತೋಯ್ದು ತೊಪ್ಪೆಯಾಗಿದೆ. ಎಡೆಬಿಡದೇ ಸುರಿಯುತ್ತಿರೋ ಮಳೆಗೆ ನದಿಗಳು ಭೋರ್ಗರೆದು ಹರಿಯುತ್ತಿವೆ. ಮೇಘರಾಜನ ಪ್ರತಾಪಕ್ಕೆ ಉತ್ತರದ ಜನರು ಕಂಗೆಟ್ಟು ಹೋಗಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೇಘರಾಜನ ಅವಾಂತರ

ಇನ್ನು, ಉತ್ತರ ಭಾರತದಲ್ಲಿ ಮಳೆರಾಯನ ಆಟಾಟೋಪ ಮುಂದುವರಿದಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ್, ದೆಹಲಿ, ಚಂಡೀಘಡ ಸೇರಿದಂತೆ ಹಲವು ರಾಜ್ಯಗಳಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಹೊಡೆತಕ್ಕೆ ನದಿಗಳೆಲ್ಲಾ ಭೋರ್ಗರೆದು ಹರಿಯುತ್ತಿವೆ. ಪರಿಣಾಮ ನದಿ ತೀರದ ಪ್ರದೇಶಗಳು ಮುಳುಗಡೆಯಾಗಿವೆ. ಮಂಡಿ, ಶಿಮ್ಲಾ, ಸಿರ್ಮೌರ್, ಕುಲ್ಲು ಸೇರಿದಂತೆ ಹಲವೆಡೆ ಮುಂದಿನ 24 ಗಂಟೆ ಅತೀಹೆಚ್ಚು ಮಳೆ ಮುನ್ಸೂಚನೆ ಇದೆ. ಹೀಗಾಗಿ ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಇನ್ನೂ ನದಿಗಳೆಲ್ಲಾ ಉಕ್ಕಿ ಹರಿದು ಡ್ಯಾಂಗಳ ಗೇಟ್ ಓಪನ್ ಮಾಡಲಾಗಿದೆ. ಹತ್ತಾರು ಸೇತುವೆಗಳು ನೀರಿನ ರಭಸಕ್ಕೆ ಮುರಿದುಬಿದ್ದಿವೆ. ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತವಾಗಿದೆ. ಕಳೆದ 48 ಗಂಟೆಗಳಲ್ಲಿ 20ಕ್ಕೂ ಜನರು ಬಲಿಯಾಗಿದ್ದಾರೆ.

ಮೇಘಸ್ಫೋಟ! ಬಿಯಾಸ್ ನದಿಯಲ್ಲಿ ನೀರಿನಮಟ್ಟ ಹೆಚ್ಚಳ

ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ಜಲಪ್ರಳಯ ಉಂಟಾಗಿದ್ದು, ಒಂದೊಂದು ದೃಶ್ಯಗಳೂ ಬೆಚ್ಚಿ ಬೀಳಿಸುವಂತಿವೆ. ಉಕ್ಕಿ ಹರಿಯುತ್ತಿರೋ ಬಿಯಾಸ್ ನದಿ ಪಾತ್ರದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗ್ತಿದೆ. ಮಂಡಿ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿಯಾಸ್ ನೀರಿನ ಮಟ್ಟ ಹೆಚ್ಚಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಜನರನ್ನು ಸ್ಥಳಾಂತರಿಸಲಾಗಿದೆ. ಮಳೆಯ ಹೊಡೆತಕ್ಕೆ ನಲುಗಿ ಶಿಮ್ಲಾದಲ್ಲಿ ರಸ್ತೆಯೇ ಕುಸಿದು ಬಿದ್ದಿದೆ. ಹಿಮಾಚಲದಲ್ಲಿನ ಜಲಪ್ರಳಯವು ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ನದಿಯ ಪ್ರವಾಹಕ್ಕೆ ಬಂಡೋಲಿಯಾ ಬಾಬಾನಿಗೆ ಜಲದಿಗ್ಬಂಧನ

ಇತ್ತ ಭಾರೀ ಮಳೆಯಿಂದ ಹಿಮಾಚಲ ಪ್ರದೇಶ ಭಾರಿ ಮಳೆಗೆ ನದಿಗಳೆಲ್ಲಾ ತುಂಬಿ ಹರಿದು ಪ್ರವಾಹ ಬೋರ್ಗರೆಯುತ್ತಿವೆ. ರೇಣುಕಾ ಸಿರ್ಮೌರ್‌ ಎಂಬ ಗುಡ್ಡಗಾಡು ಪ್ರದೇಶದಲ್ಲಿರುವ ಪ್ರಸಿದ್ಧ ಬಡೋಲಿಯಾ ಬಾಬಾ ದೇಗುಲದ ಮೇಲೆ ಪ್ರವಾಹದ ನೀರು ಜಲಪಾತದಂತೆ ಧುಮ್ಮಿಕ್ಕಿ ಬೀಳುತ್ತಿದೆ. ಇದ್ರಿಂದ ದೇವರಿಗೂ ಜಲದಿಗ್ಭಂಧನ ಉಂಟಾಗಿದೆ.

ದೆಹಲಿಯಲ್ಲಿ ಯುಮುನೆಯ ಆಟಾಟೋಪ.. ಮನೆಗಳು ಜಲಾವೃತ

ದೆಹಲಿಯಲ್ಲಿ ಸುರಿದ ಮಳೆಗೆ ಇಡೀ ರಾಷ್ಟ್ರ ರಾಜಧಾನಿಯೇ ತತ್ತರಿಸಿ ಹೋಗಿದೆ. ಇದುವರೆಗೂ ರಸ್ತೆಗಳೆಲ್ಲಾ ಕೆರೆ, ನದಿಗಳಂತೆ ಆಗಿದ್ದವು. ಈಗ ಯಮುನಾ ನದಿಯೇ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾಳೆ. ಅಪಾಯ ಮಟ್ಟಕ್ಕಿಂತಲೂ ಒಂದು ಅಡಿ ಹೆಚ್ಚು ನೀರು ಹರಿಯುತ್ತಿದ್ದು, ನದಿ ತಟದ ಸಮೀಪದಲ್ಲಿರುವ ಗುಡಿಸಲು, ಮನೆ, ದೇವಸ್ಥಾನಗಳೂ ಜಲಾವೃತಗೊಂಡಿವೆ. ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ದೆಹಲಿ ಸರ್ಕಾರ ಸುಮಾರು 7,500 ಜನರನ್ನ ಈವರೆಗೂ ಕ್ಯಾಂಪ್​ಗಳಿಗೆ ಶಿಫ್ಟ್ ಮಾಡಿದೆ.

ನಿರಂತರ ಮಳೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರು ಹರಿಯುವಿಕೆ ಹೆಚ್ಚಳವಾಗಿದೆ. ಹೀಗಾಗಿ ಪಾಂಡೋ ಅಣೆಕಟ್ಟಿನ ನೀರನ್ನ ಅಧಿಕಾರಿಗಳು ಹೊರಬಿಟ್ಟಿದ್ದಾರೆ. ಜಲಾಶಯದ ಎಲ್ಲಾ ಗೇಟ್​ಗಳನ್ನ ತೆರೆದಿದ್ದು, ನೀರನ್ನ ನದಿಗೆ ಬಿಡಲಾಗ್ತಿದೆ. ಇನ್ನೂ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಮುಂಜಾಗೃತ ಕ್ರಮ ವಹಿಸಿದ್ದು, ನದಿಪಾತ್ರದ ಜನಗಳಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಿದ್ದಾರೆ.

ಯಮುನೆಯ ಪ್ರವಾಹದಲ್ಲಿ ಸಿಲುಕಿ ಮೂಕ ಪ್ರಾಣಿಗಳ ವೇದನೆ

ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಹರಿಯಾಣದ ಅಂಬಾಲದಲ್ಲಿ ಮೂಕ ಪ್ರಾಣಿಗಳು ಅಪಾಯದಲ್ಲಿ ಸಿಲುಕಿವೆ. ಪ್ರವಾಹದ ಮಧ್ಯೆ ಸಿಲುಕಿರುವ ಹತ್ತಾರು ನಾಯಿಗಳು ರಕ್ಷಣೆಗಾಗಿ ಮೊರೆ ಇಡುವ ದೃಶ್ಯ ಕರುಣಾಜನಕವಾಗಿದೆ.

ಪ್ರವಾಹದಲ್ಲಿ ಸಿಲುಕಿದ್ದ ಶ್ವಾನವನ್ನ ರಕ್ಷಿಸಿದ ಎನ್‌ಡಿಆರ್‌ಎಫ್

ಚಂಡೀಗಢದಲ್ಲೂ ಜಲಪ್ರಳಯ ಉಂಟಾಗಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಎನ್​ಡಿಆರ್​ಎಫ್​ ತಂಡ, ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಜನರ ರಕ್ಷಣೆ ಮಾತ್ರವಲ್ಲದೆ ಜಾನುವಾರಗಳ ರಕ್ಷಣೆಗೂ ಮುಂದಾಗಿ ಕರ್ತವ್ಯ ಮೆರೆದಿದ್ದಾರೆ. ಪ್ರವಾಹದಿಂದಾಗಿ ನದಿ ದಂಡೆ ನಡುವೆ ಬ್ರಿಡ್ಜ್​ ಅಡಿ ಸಿಲುಕಿದ್ದ ಸಾಕು ನಾಯಿಯನ್ನು ರಕ್ಷಿಸುವ ಮೂಲಕ ರಕ್ಷಣಾ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಮಳೆಯ ರೌದ್ರಾವತಾರಕ್ಕೆ ನಲುಗಿದ ಉತ್ತರಾಖಂಡ್

ವರುಣನ ಆಟಾಟೋಪಕ್ಕೆ ಉತ್ತರಾಖಂಡ್ ರಾಜ್ಯ ತತ್ತರಿಸಿ ಹೋಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸ್ತಿರೋ ಮಳೆಯಿಂದ ನದಿ, ಹಳ್ಳಕೊಳ್ಳಗಳು ಭೋರ್ಗರೆದು ಹರಿಯುತ್ತಿವೆ. ಇದೇ ವೇಳೆ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಗುಡ್ಡ ಕುಸಿತ ಉಂಟಾಗಿದ್ದು, ಚಾರಧಾಮ್ ಯಾತ್ರೆಗೆ ತೆರಳುತ್ತಿದ್ದ 5 ಮಂದಿ ಭಕ್ತಾದಿಗಳು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಒಟ್ಟಾರೆ, ಉತ್ತರ ಭಾರತದ ಮೇಲೆ ಮೇಘರಾಜನ ಮುನಿಸು ಮುಂದುವರಿದಿದೆ. ಧೋ ಎಂದು ಸುರಿಯುತ್ತಿರೋ ಮಳೆಗೆ ಮೇಘಸ್ಫೋಟವೇ ಆದಂತಿದೆ. ಒಂದು ವೇಳೆ ಹೀಗೆ ವರುಣದೇವನ ಅಟ್ಟಹಾಸ ಮುಂದುವರಿದ್ರೆ ಉತ್ತರಭಾರತವೇ ಮುಳುಗಿಹೋಗೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ನಿಲ್ಲದ ಮಳೆ ಆರ್ಭಟ; ಜೀವ ಭಯದಲ್ಲಿ ಉತ್ತರ ಭಾರತೀಯರು; ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2023/07/Car_Delhi.jpg

Load More