ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಿಟಿ ಜನ ಕಂಗಾಲು
ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಕರೆಯಂತೆ ಆಗಿವೆ
ಉದ್ಯಾನನಗರಿಯಲ್ಲಿ ಎತ್ತ ನೋಡಿದರೂ ಜಡಿ ಮಳೆಯೋ ಮಳೆ
ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಅಷ್ಟು ಜೋರಾಗಿ ಮಳೆ ಬಾರದೇ, ಅಷ್ಟು ನಿಧಾನವಾಗಿಯು ಬಾರದೇ ಒಂದೇ ಸಮನೆ ಜಿಟಿ ಜಿಟಿ ಎಂದು ಸುರಿಯುತ್ತಿದೆ. ಇದರಿಂದ ಜನರಿಗೆ ಮನೆಯಿಂದ ಹೊರ ಹೋಗಲು ಆಗುತ್ತಿಲ್ಲ. ಸದ್ಯ ಈ ಮಳೆಯಿಂದ ಉದ್ಯಾನ ನಗರಿ ನಿವಾಸಿಗಳು ಸಾಕಪ್ಪ.. ಸಾಕಪ್ಪ ಈ ಮಳೆ ಅವಾಂತರ ಎಂದು ಎನ್ನುತ್ತಿದ್ದಾರೆ. ಅಂದ್ಹಾಗೆ ಸಿಟಿಯಲ್ಲಿ ರೈನ್ನಲ್ಲಿ ನ್ಯೂಸ್ಟ್ಫಸ್ಟ್ ಕ್ಯಾಮೆರಾದಿಂದ ಕ್ಲಿಕ್ ಮಾಡಿದಂತ ಕೆಲ ಫೋಟೋಸ್ ಇಲ್ಲಿವೆ.
ನಿರಂತರ ಮಳೆಯಿಂದ ರಸ್ತೆಯಲ್ಲಿ ಅಧಿಕ ನೀರು ನಿಂತಿದ್ದರಿಂದ ಬೈಕ್ ಸವಾರನೊಬ್ಬ ತನ್ನ ಬೈಕ್ ಅನ್ನು ತಳ್ಳಿಕೊಂಡು ಹೋಗುತ್ತಿರುವುದು. ಈ ದೃಶ್ಯವು ಬೆಂಗಳೂರಿನ ಬೆಳ್ಳಂದೂರು ಬಳಿ ಕಂಡು ಬಂದಿದೆ.
ಕೆಂಪೇಗೌಡ ಏರ್ಪೋರ್ಟ್ ಮಾರ್ಗವಾದ ಹೆಬ್ಬಾಳ ಪ್ಲೈಓವರ್ ಮೇಲೆ ಮಳೆ ನೀರು ಹೆಚ್ಚಾಗಿ ನಿಂತಿದ್ದು ವಾಹನಗಳು ಮಳೆಯಲ್ಲೇ ಸಂಚಾರ ಮಾಡಿವೆ. ಈ ವೇಳೆ ಬೈಕ್ ಸವಾರರು, ಆಟೋ ಡ್ರೈವರ್ಗಳು ಮಳೆಯಿಂದ ತೊಂದರೆ ಅನುಭವಿಸಿದರು.
ಈ ಮೇಲಿನ ಫೋಟೋದಲ್ಲಿ ನೋಡುತ್ತಿರುವುದು ಕೆರೆ ಏನು ಅಲ್ಲ, ರಸ್ತೆ ಆಗಿದೆ. ಜಿಟಿ ಜಿಟಿ ಮಳೆಯಿಂದ ಬೆಳ್ಳಂದೂರಿನ ರಸ್ತೆಯೊಂದಕ್ಕೆ ನೀರು ತುಂಬಿದ್ದರಿಂದ ಸೇಮ್ ಟು ಸೇಮ್ ಕೆರೆಯಂತೆ ಕಾಣುತ್ತಿದೆ. ಈ ರೀತಿಯಲ್ಲಿ ನೀರು ನಿಂತಿದ್ದರಿಂದ ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಆಗಿದೆ.
ನಿರಂತರ ಮಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಎಲ್ಲಿ ನೋಡಿದರು ಟ್ರಾಫಿಕ್ ಬಿಸಿ ಕಂಡು ಬಂತು. ಫ್ಲೈಓವರ್ ಮೇಲೂ, ಕೆಳಗೂ, ಸರ್ವೀಸ್ ರಸ್ತೆಗಳಲ್ಲೂ ಟ್ರಾಫಿಕ್ ಆಗಿತ್ತು. ಇದರಿಂದ ಗಂಟೆ ಗಂಟೆ ಟ್ರಾಫಿಕ್ನಲ್ಲೇ ಸವಾರರು, ಡ್ರೈವರ್ಸ್ ಸುಸ್ತು ಆದರು.
ಫುಡ್ ಡೆಲಿವರಿ ಬಾಯ್ ಒಬ್ಬರು ಮಳೆಯಲ್ಲಿ ಹೋಗುತ್ತಿದ್ದರು. ಆದರೆ ರಸ್ತೆಯಲ್ಲಿ ನಿಂತಿದ್ದ ನೀರಿನಿಂದ ಮಧ್ಯೆದಲ್ಲೇ ಸುಲುಕಿದವರು. ನಿಂತಿದ್ದ ನೀರಿನಿಂದ ಬೈಕ್ ಸಂಪೂರ್ಣವಾಗಿ ಮುಳುಗಿ ಹೋಗಿತ್ತು.
ಬೆಂಗಳೂರು ಎಂದರೆ ಸಾಮಾನ್ಯ ದಿನಗಳಲ್ಲೇ ಟ್ರಾಫಿಕ್ ಇರುತ್ತದೆ. ಇನ್ನು ಕೊಂಚ ಮಳೆ ಹನಿ ಉದುರಿದರೆ ಸಾಕು ಬೇಗ ಮನೆ ಸೇರಬೇಕೆಂದು ಜನರೆಲ್ಲ ಒಂದೇ ಬಾರಿಗೆ ರಸ್ತೆಗೆ ಬರುವುದರಿಂದ ಟ್ರಾಫಿಕ್ ಕಾಮನ್. ಉದ್ಯಾನ ನಗರಿಯಲ್ಲಿ ಟ್ರಾಫಿಕ್ನಲ್ಲಿ ನಿಂತಿರುವ ವಾಹನಗಳು. ಇನ್ನೊಂದು ಟ್ರಾಫಿಕ್ ಸಿಗ್ನಲ್ ಕೊಟ್ಟಿದ್ದರಿಂದ ವಾಹನಗಳು ಚಾಲನೆಯಲ್ಲಿವೆ.
ಮಳೆ ನೀರು ಮಣ್ಣಿನ ಜೊತೆ ಸೇರಿ ಕೆಂಪಾಗಿ ಹೋಗಿದೆ. ಇದರಲ್ಲೇ ವಾಹನಗಳು ಸಂಚಾರ ಮಾಡುತ್ತಿವೆ.
ಇದು ಮಾನ್ಯತಾ ಟೆಕ್ ಪಾರ್ಕ್ ದೃಶ್ಯ. ದೊಡ್ಡ ದೊಡ್ಡ ಕಟ್ಟಡಗಳ ನಡುವೆ ಇರುವ ರಸ್ತೆಗಳಲ್ಲಿ ನೀರು ನಿಂತಿದ್ದು ಅದರಲ್ಲೇ ವಾನಗಳು ಚಲಾಯಿಸಲು ಚಾಲಕರು ಹರಸಾಹ ಪಟ್ಟರು.
ಮಳೆ ನೀರಿನಲ್ಲಿ ಆಟೊ ಇದ್ದಕ್ಕಿದ್ದ ಹಾಗೆ ಆಫ್ ಆಗಿದೆ. ಇದರಿಂದ ಡ್ರೈವರ್ ಹಾಗೂ ಬಾಲಕನೊಬ್ಬ ಮಳೆ ನೀರಿನಲ್ಲಿ ಆಟೊವನ್ನು ತಳ್ಳಿಕೊಂಡು ಹೋಗುತ್ತಿರುವುದು.
ಸಿಟಿಯಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಟ್ರಾಫಿಕ್ ಜಾಮ್ ಉಂಟಾಗಿ ಮಳೆಯಲ್ಲೇ ವಾಹನಗಳು ನಿಂತು ಸಾಕಷ್ಟು ತೊಂದರೆ ಅನುಭಸಿದರು. ಇನ್ನು ಟ್ರಾಫಿಕ್ ಪೊಲೀಸರು ಮಳೆಯಲ್ಲೇ ನಿಂತು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ