ತಮುಕೂರಿನಲ್ಲಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಡಿದರು..!
ರಾಜಸ್ಥಾನದ ಅಜ್ಮೀರ್, ಗುಜರಾತ್ ತೀರದ ಜಿಲ್ಲೆಗಳಲ್ಲಿ ನಿಲ್ಲದ ಮಳೆರಾಯ
ಅಸ್ಸಾಂನಲ್ಲಿ ಮಳೆಯ ಆಟ, ಪ್ರವಾಹಕ್ಕೆ 34,000ಕ್ಕೂ ಹೆಚ್ಚು ಜನರು ತತ್ತರ
ನಮ್ಮ ರಾಜ್ಯಕ್ಕೆ ಮಳೆ ಬಂತು ಅಂತ ಖುಷಿ ಪಡೋದಾ? ಇಲ್ಲ ಬಿಪರ್ಜಾಯ್ ಎಫೆಕ್ಟ್ ಗುಜರಾತ್. ರಾಜಸ್ಥಾನ್ ರಾಜ್ಯಗಳನ್ನ ಧೂಳೀಪಟ ಮಾಡಿದ ಚಂಡಮಾರುತದ ಆರ್ಭಟಕ್ಕೆ ಆತಂಕ ಪಡೋದಾ. ಅಥವಾ ಅಸ್ಸಾಂ ಸ್ಥಿತಿ ಬಗ್ಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ.
ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಬರೀ ಮೋಡ ಮುಸುಕಿದ ವಾತಾವರಣ. ಮಳೇಯದ್ದೇ ಅಬ್ಬರ. ಬಿಪರ್ಜಾಯ್ ಚಂಡಮಾರುತ ಹಾದು ಹೋದ ಬೆನ್ನಲ್ಲೇ ಮುಂಗಾರು ಮಳೆ ಹನಿಗಳ ಲೀಲೆಯನ್ನ ತೋರಿಸೋಕೆ ಶುರು ಮಾಡಿದೆ. ರಾಜ್ಯದ ಹಲವೆಡೆ ಮಳೆಯಾಗ್ತಿದೆ. ಬೆಳೆಗಾಗಿ ಆಕಾಶವನ್ನೇ ನೋಡ್ತಾ ಮಳೆ ಬಾರದೇ ಹಾಕಿದ ಬೆಳೆಗಳು ಕೈ ತಪ್ಪಿಹೋಗುತ್ತೋ ಅನ್ನೋ ಭೀತಿಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಲಾರಂಭಿಸಿದೆ.
ಸಿಲಿಕಾನ್ ಸಿಟಿ, ಸಕ್ಕರೆ ನಾಡಲ್ಲೂ ಸುರಿದ ಮಳೆರಾಯ
ಕಾಂಕ್ರೀಟ್ ನಗರಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯು ಸಹ ಜಿಟಿ ಜಿಟಿ ಮಳೆ ಮುಂದುವರೆಯಿತು. ಮುಂಗಾರು ಚುರುಕು ಪಡೆದ ಪರಿಣಾಮ ಕಳೆದ ಎರಡು ದಿನದಿಂದ ನಗರದಲ್ಲಿ ಮಳೆಗಾಲ ಛಾಯೆ ಆವರಿಸಿದೆ. ಮುಂದಿನ ಕೆಲವು ದಿನಗಳು ವಾತಾವರಣ ಹೀಗೆಯೇ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಹಲವೆಡೆ ಗುಡುಗು ಸಹಿತ ಮಳೆ ಸುರಿದಿದ್ದು, ಮಳೆ ಇಲ್ಲದೇ ಕಂಗಲಾಗಿದ್ದ ಜನರಿಗೆ ಮುಂಗಾರು ಮಳೆ ಕಂಡು ಮೊಗದಲ್ಲಿ ಸಂತಸಮೂಡಿದೆ.
ತುಮಕೂರಿನಲ್ಲಿ ಬಿಸಿಲ ಜಳದಿಂದ ಕಾದ ಭೂಮಿ ಕೂಲ್
ಕಲ್ಪತರು ನಾಡು ತುಮಕೂರಿನಲ್ಲಿ ಸಂಜೆಯಾಗುತ್ತಿದ್ದಂತೆ ಮಳೆರಾಯ ಅಬ್ಬರ ಶುರುಮಾಡಿದ್ದು, ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿದ್ದ. ಬಿಸಿಲ ಜಳದಿಂದ ಕಾದ ಭೂಮಿಗೆ ಮಳೆ ತಂಪೆರೆದಿದ್ದು, ಅನ್ನದಾತ ಖುಷಿಯಾಗಿದ್ರೆ, ವಾಹನ ಸವಾರರು ಪರದಾಡಿದ್ರು. ಕೆಲಸ ಮುಗಿಸಿ ಸಂಜೆ ಮನೆ ಕಡೆ ಹೊರಟವರಿಗೆ ಮಳೆರಾಯ ಸ್ವಲ್ಪ ಕಾಟನೂ ಕೊಟ್ಟ.
ಮಳೆಗಾಗಿ ಪ್ರಾರ್ಥಿಸುವ ಮೂಲಕ ಬಾಗಲಕೋಟೆಯಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಲಾಯಿತು. ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ನಡೆದ ಯೋಗ ದಿನಾಚರಣೆ ನಡೆಯಿತು.
ಅಸ್ಸಾಂನ 9 ಜಿಲ್ಲೆಗಳಲ್ಲಿ 34,000ಕ್ಕೂ ಹೆಚ್ಚು ಜನರು ಪ್ರವಾಹದಿಂದ ತತ್ತರ
ಅತ್ತ ಅಸ್ಸಾಂನಲ್ಲೂ ಕೂಡ ವರುಣ ಅಬ್ಬರ ಜೋರಾಗಿದೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 34,000 ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ತತ್ತರಿಸಿದ್ದು, ಹಲವಾರು ಸ್ಥಳಗಳಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಸೃಷ್ಟಿಯಾಗಿದೆ. ಅಸ್ಸಾಂ ರಾಜ್ಯದ ಲಖಿಂಪುರ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ನದಿ ತುಂಬಿದೆ. ನೀರಿನ ರಭಸಕ್ಕೆ ನದಿ ಪಾತ್ರದ ಕಟ್ಟೆ ಹೊಡೆದು ಗ್ರಾಮಗಳಿಗೆ ನುಗ್ಗಿದೆ.
ಮಳೆಯ ಅಬ್ಬರಕ್ಕೆ ಪ್ರವಾಹ ಉಂಟಾಗಿ ತಮುಲ್ಪುರದಲ್ಲಿ ಸೇತುವೆಗಳು ಮತ್ತು ರಸ್ತೆಗಳು ಹಾನಿಯಾಗಿವೆ. ಸಂಪೂರ್ಣ ಜಲಾವೃತವಾಗಿದ್ದು, ಸಂಚಾರ ಸ್ತಬ್ಧವಾಗಿದೆ. ಸುಕ್ಲೈ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು.. ಪ್ರಸ್ತುತ ನೀರಿನ ಮಟ್ಟ 76.05 ಮೀಟರ್ಗೆ ತಲುಪಿದೆ.
ಇನ್ನು, ಉದಲ್ಗುರಿ, ಸೋನಿತ್‌ಪುರ್, ದರ್ರಾಂಗ್, ಬೊಂಗೈಗಾಂವ್, ಚಿರಾಂಗ್, ಧುಬ್ರಿ, ಗೋಲ್‌ಪಾರಾ, ಕಾಮ್ರೂಪ್, ಕರೀಮ್‌ಗಂಜ್, ಕೊಕ್ರಜಾರ್, ನಾಗಾವ್, ನಲ್ಬರಿ ಮತ್ತು ಬರ್ಪೇಟಾದಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ನಗರ ಪ್ರದೇಶಗಳಾದ ದರ್ರಾಂಗ್, ಜೋರ್ಹತ್, ಕಾಮ್ರೂಪ್ ಮೆಟ್ರೋಪಾಲಿಟನ್, ಕೊಕ್ರಜಾರ್ ಮತ್ತು ನಲ್ಬರಿ ಜಿಲ್ಲೆಗಳಾದ್ಯಂತ ಅನೇಕ ಸ್ಥಳಗಳು ಮುಳುಗಿವೆ.
ಇನ್ನು, ಅಸ್ಸಾಂ ಮಾತ್ರವಲ್ಲದೇ ರಾಜಸ್ಥಾನದ ಅಜ್ಮೀರ್, ಗುಜರಾತ್ನ ಪಶ್ಚಿಮ ತೀರದ ಜಿಲ್ಲೆಗಳು ಹಾಗೂ ಹೈದರಾಬಾದ್ನಲ್ಲಿ ವರುಣ ಸಂಚಾರ ಮಾಡ್ತಿದ್ದಾನೆ. ಮುಂದಿನ ಎರಡ್ಮೂರು ದಿನಗಳಲ್ಲಿ ದೇಶದ ಹಲವೆಡೆ ಮೋಡ ಕವಿದ ವಾತಾವರಣ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಎಚ್ಚರಿಕೆ ಅಗತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ