newsfirstkannada.com

ರಾಜ್ಯದಲ್ಲಿ ಕೈ ಕೊಟ್ಟ ಮಳೆ: ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತ; ನೀರಿಲ್ಲದೆ ಇನ್ನೂ ಆರಂಭವಾಗದ ಕೃಷಿ ಚಟುವಟಿಕೆ

Share :

14-07-2023

    ರಾಜ್ಯ ಜಲಾಶಯಗಳ ನೀರಿನ ಒಳ ಹರಿವಿನ ಮಟ್ಟದಲ್ಲಿ ಕುಸಿತ

    ಕೃಷಿಗೆ ನೀರುಣಿಸಲು ಕಷ್ಟದ ಪರಿಸ್ಥಿತಿ ಎದುರಾಗುವ ಸಾಧ್ಯತೆ

    ರಾಜ್ಯ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಮಳೆ ಕಡಿಮೆಯಾದ ಹಿನ್ನಲೆ ಕೆಲ ಜಲಾಶಯಗಳ ನೀರಿನ ಒಳ ಹರಿವಿನಲ್ಲಿ ಕುಸಿತ ಕಂಡಿದೆ. ಆದರೆ 3 ತಿಂಗಳವರೆಗೆ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಇಲ್ಲವಾದರು. ಮುಂಬರುವ ದಿನಗಳಲ್ಲಿ ಕೃಷಿಗೆ ನೀರುಣಿಸಲು ಕಷ್ಟದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಅಂದಹಾಗೆಯೇ ರಾಜ್ಯ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

KRS ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 88.78 ಅಡಿ
ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಇಂದು ಡ್ಯಾಂನಲ್ಲಿರುವ ನೀರು – 15.224 ಟಿಎಂಸಿ
ಒಳ ಹರಿವು – 2459 ಕ್ಯೂಸೆಕ್
ಹೊರ ಹರಿವು – 393 ಕ್ಯೂಸೆಕ್

ಕಾವೇರಿ ಜಲಾನಯನ ಪ್ರದೇಶದಲ್ಲಿ ಕಡಿಮೆ ಮಳೆಯಾದ ಹಿನ್ನೆಲೆ ಮುಂಬರುವ ದಿನಗಳಲ್ಲಿ ನೀರಿಗೆ ಕಂಟಕವಾಗುವ ಸ್ಥಿತಿ ಎದುರಾಗಲಿದೆ. ಅದರಲ್ಲೂ KRS ಡ್ಯಾಂ ಒಳ ಹರಿವಿನಲ್ಲಿ ಕುಸಿತ ಕಂಡಿದೆ. ಸದ್ಯ
2,459 ಕ್ಯೂಸೆಕ್ ಗೆ ಇಳಿದ ಒಳ ಹರಿವಿನ ಪ್ರಮಾಣ ಕುಸಿದಿದೆ.

ಕಳೆದ ವಾರ 15 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಮಳೆ ಕಡಿಮೆಯಾದಂತೆ ಡ್ಯಾಂ ಒಳ ಹರಿವಿನಲ್ಲೂ ಕುಸಿತ ಕಂಡಿದೆ. ಕಳೆದ 8 ದಿನಗಳಿಂದ ಡ್ಯಾಂಗೆ 5 ಟಿಎಂಸಿ ನೀರು ಹರಿದುಬಂದಿದೆ.

ಕಳೆದ ಶುಕ್ರವಾರ ಡ್ಯಾಂನಲ್ಲಿ 10 ಟಿಎಂಸಿ ಮಾತ್ರ ನೀರಿತ್ತು. ಇಂದು 15.224 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ 3 ತಿಂಗಳಿಗೆ ಕುಡಿಯುವ ನೀರು ಪೂರೈಕೆಗೆ ನೀರಿನ ಸಮಸ್ಯೆ ಇಲ್ಲ. ಆದರೆ ಕೃಷಿಗಾಗಿ ನೀರು ಒದಗಿಸಲು ಕಷ್ಟದ ಪರಿಸ್ಥಿರಿ ಎದುರಾಗುವ ಸಾಧ್ಯತೆ ಇದೆ.
ಅತ್ತ ಒಳ ಹರಿವು ಕಡಿಮೆಯಾಗುತ್ತಿದ್ದಂತೆ ರೈತರಲ್ಲಿ ಆತಂಕ ಮನೆ ಮಾಡಿದೆ. ಮತ್ತೊಂದೆಡೆ ನೀರಿಲ್ಲದೆ ಮಂಡ್ಯ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಇನ್ನು ಆರಂಭವಾಗಿಲ್ಲ.

ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ:123.081ಟಿಎಂಸಿ
ಇಂದಿನ ಸಂಗ್ರಹ :23.044ಟಿಎಂಸಿ
ಒಳಹರಿವು : 9993ಕ್ಯೂಸೆಕ್ಸ್
ಹೊರಹರಿವು :00(ಕುಡಿಯುವ ನೀರಿಗಾಗಿ 561 ಕ್ಯೂಸೆಕ್)

ಹಾರಂಗಿ

ಗರಿಷ್ಠ ಸಂಗ್ರಹ ಸಾಮರ್ಥ್ಯ : 2859 ಅಡಿಗಳು (8.5 ಟಿಎಂಸಿ)
ಇಂದಿನ ಸಂಗ್ರಹ : 2841.84 ಅಡಿಗಳು
ಒಳಹರಿವು : 1247 ಕ್ಯುಸೆಕ್
ಹೊರಹರಿವು : 50 ಕ್ಯುಸೆಕ್

ಲಿಂಗನಮಕ್ಕಿ

ಪೂರ್ಣ ಮಟ್ಟ 1819 ಅಡಿ
ಇಂದಿನ ಮಟ್ಟ 1754 ಅಡಿ
ಒಳಹರಿವು 14,884 ಕ್ಯೂಸೆಕ್
ಹೊರ ಹರಿವು 1390.71 ಕ್ಯೂಸೆಕ್

ಭದ್ರಾ

ಪೂರ್ಣ ಮಟ್ಟ 186 ಅಡಿ
ಇಂದಿನ ಮಟ್ಟ 141.2 ಅಡಿ
ಒಳಹರಿವು 846 ಕ್ಯೂಸೆಕ್
ಹೊರ ಹರಿವು 164 ಕ್ಯೂಸೆಕ್

ನಾರಾಯಣಪುರ ಬಸವಸಾಗರ ಜಲಾಶಯ

ಗರಿಷ್ಠ ಸಂಗ್ರಹ ಸಾಮರ್ಥ್ಯ : 33.31 ಟಿಎಂಸಿ
ಇಂದಿನ ಸಂಗ್ರಹ : 14.04 ಟಿಎಂಸಿ
ಒಳಹರಿವು : ಇಲ್ಲ
ಹೊರ ಹರಿವು : ಇಲ್ಲ

ತುಂಗಭದ್ರಾ ಡ್ಯಾಂ

ಗರಿಷ್ಠ ಸಂಗ್ರಹ ಸಾಮರ್ಥ್ಯ : 105.788 TMC
ಇಂದಿನ ಸಂಗ್ರಹ : 8.278 TMC
ಒಳಹರಿವು : 8032 c/s
ಹೊರ ಹರಿವು : 149c/s

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಕೈ ಕೊಟ್ಟ ಮಳೆ: ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತ; ನೀರಿಲ್ಲದೆ ಇನ್ನೂ ಆರಂಭವಾಗದ ಕೃಷಿ ಚಟುವಟಿಕೆ

https://newsfirstlive.com/wp-content/uploads/2023/07/KRS.jpg

Load More