newsfirstkannada.com

Toby: ಫಸ್ಟ್ ಶೋನಲ್ಲೇ ಅಬ್ಬರಿಸಿದ ಟೋಬಿ.. ನರ್ತಕಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ ಮಾಡಿದ್ದೇನು?

Share :

25-08-2023

    ಸ್ಯಾಂಡಲ್​ವುಡ್​ನ ಬಹು ನಿರೀಕ್ಷಿತ ಸಿನಿಮಾ ಟೋಬಿ ರಿಲೀಸ್

    ರಾಜ್ಯಾದ್ಯಾಂತ ಎಲ್ಲ ಥಿಯೇಟರ್​ಗಳಲ್ಲಿ ಶುರುವಾದ ಟೋಬಿ ಹವಾ

    ಅಭಿಮಾನಿಗಳಿಗೆ ಎನರ್ಜಿ ಡೋಸ್ ಕೊಟ್ಟ ರಾಜ್ ಬಿ ಶೆಟ್ಟಿ ತಂಡ

ಬಾಸಿಲ್ ಮತ್ತು ನಟ ರಾಜ್ ಬಿ ಶೆಟ್ಟಿ ಕಾಂಬಿನೇಷನ್​ನಲ್ಲಿ ನಿರ್ಮಾಣವಾಗಿರೋ ಟೋಬಿ ಸಿನಿಮಾ ಇಂದು ರಾಜ್ಯಾದ್ಯಾಂತ ಗ್ರ್ಯಾಂಡ್ ರಿಲೀಸ್ ಆಗಿದೆ. ಸಿಂಗಲ್ ಥಿಯೇಟರ್​ ಸೇರಿದಂತೆ ಮಲ್ಟಿಪ್ಲೆಕ್ಸ್ ಥಿಯೇಟರ್​ಗಳ ಬೆಳ್ಳಿ ತೆರೆ ಮೇಲೆ ಟೋಬಿ ಮೋಡಿ ಶುರುವಾಗಿದೆ. ವರ ಮಹಾಲಕ್ಷ್ಮಿ ಹಬ್ಬದಂದೇ ಸಿನಿಮಾ ರಿಲೀಸ್ ಆಗಿದ್ದಕ್ಕೆ ಚಿತ್ರ ತಂಡದ ಖುಷಿ ದುಪ್ಪಟ್ಟು ಆಗಿದೆ.

ಇಂದು ಬೆಳಗ್ಗೆ ಬೆಂಗಳೂರಿನ ನರ್ತಕಿ ಥಿಯೇಟರ್​ಗೆ ಭೇಟಿ ನೀಡಿದ್ದ ಟೋಬಿ ಹೀರೋ ರಾಜ್ ಬಿ ಶೆಟ್ಟಿ ಫ್ಯಾನ್ಸ್ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಸಿನಿಮಾ ಪ್ರದರ್ಶನಕ್ಕೂ ಮೊದಲು ರಾಜ್ ಬಿ ಶೆಟ್ಟಿ, ನಟಿ ಸಂಯುಕ್ತ ಹೊರನಾಡು ಸೇರಿದಂತೆ ಸಿನಿಮಾದ ಇತರೆ ಕಲಾವಿದರು ನರ್ತಕಿ ಥಿಯೇಟರ್​​ನ ಪ್ರೊಜೆಕ್ಷನ್ ರೂಮ್​ಗೆ ಪೂಜೆ ಸಲ್ಲಿಸಿದರು. ಬಳಿಕ ಬೆಳ್ಳಿ ತೆರೆ ಮೇಲೆ ಟೋಬಿ ಮೊದಲ ಪ್ರದರ್ಶನ ಮಾಡಲಾಯಿತು. ಇದೇ ವೇಳೆ ಅಭಿಮಾನಿಗಳ ಜೊತೆ ಸಖತ್ ಎಂಜಾಯ್ ಮಾಡಿದ ರಾಜ್​ ಬಿ ಶೆಟ್ಟಿ ಡೊಳ್ಳು ಬಾರಿಸಿ ರಂಜಿಸಿದರು.

ಇಂದು ಬಿಡುಗಡೆಯಾದ ಕನ್ನಡದ ಟೋಬಿ ಚಿತ್ರವನ್ನ ಸ್ವತಹ ನಟ ರಾಜ್ ಬಿ ಶೆಟ್ಟಿಯವರೇ ಬರೆದಿದ್ದಾರೆ. ಆದರೆ ಬಾಸಿಲ್ ಅವರು ಡೈರೆಕ್ಷನ್ ಮಾಡಿದ್ದು ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಪ್ರವೀಣ್ ಶ್ರೀಯಾನ್ ಕ್ಯಾಮರಾವರ್ಕ್ ಈ ಚಿತ್ರಕ್ಕಿದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ರಿಗೆ ಚೈತ್ರಾ ಆಚಾರ್ ಮತ್ತು ಸಂಯುಕ್ತಾ ಹೊರನಾಡು ಜೊತೆಯಾಗಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Toby: ಫಸ್ಟ್ ಶೋನಲ್ಲೇ ಅಬ್ಬರಿಸಿದ ಟೋಬಿ.. ನರ್ತಕಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ ಮಾಡಿದ್ದೇನು?

https://newsfirstlive.com/wp-content/uploads/2023/08/RAJ_B_SHETTY_1.jpg

Load More