ಬಕ್ರೀದ್ ದಿನವೇ ಟೋಬಿ ಫಸ್ಟ್ ಲುಕ್ ಟೀಸರ್ ರಿಲೀಸ್
ಟೋಬಿ ಕಾರವಾರ ಮೂಲದ ನೈಜ ಕಥೆಯಾಧಾರಿತ ಸಿನಿಮಾ
ಆಗಸ್ಟ್ ತಿಂಗಳಿನಲ್ಲಿ ತೆರೆ ಮೇಲೆ ಅಬ್ಬರಿಸಲು ಟೋಬಿ ರೆಡಿ
ಬಕ್ರೀದ್ ದಿನವೇ ರಾಜ್ ಬಿ.ಶೆಟ್ಟಿ ಬಹುನಿರೀಕ್ಷಿತ ಟೋಬಿ ಚಿತ್ರದ ಫಸ್ಟ್ ಲುಕ್ ಟೀಸರ್ ನಿನ್ನೆ ಅನಾವರಣಗೊಂಡಿದೆ. ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಟೋಬಿ ಚಿತ್ರದ ಫಸ್ಟ್ ಲುಕ್ ಅನ್ನು ನಟ ರಾಜ್ ಬಿ.ಶೆಟ್ಟಿ ಮತ್ತು ಚಿತ್ರತಂಡ ಬಿಡುಗಡೆಗೊಳಿಸಿದೆ.
ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡುತ್ತಿರುವ ರಾಜ್ ಬಿ.ಶೆಟ್ಟಿ ಅಭಿನಯದ ಟೋಬಿ, ಸಿನಿಪ್ರೇಕ್ಷಕರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಚಿತ್ರದ ಫಸ್ಟ್ ಲುಕ್ ಟೀಸರ್ನಲ್ಲಿ ಟಗರು ಮತ್ತು ರಾಜ್ ಮುಖವನ್ನು ವಿಭಿನ್ನವಾಗಿ ತೋರಿಸಲಾಗಿದೆ.
ಟೋಬಿ ಸಿನಿಮಾ ನೈಜ ಕಥೆಯಾಗಿದೆ. ಕಾರವಾರದ ಮೂಲದ ಕಥೆಯನ್ನು ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಅಂದಹಾಗೆಯೇ ಈ ಸಿನಿಮಾದಲ್ಲಿ 2 ನಟಿಯರ ಜೊತೆಗೆ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಆಗಸ್ಟ್ 25ಕ್ಕೆ ಈ ಸಿನಿಮಾ ತೆರೆ ಮೇಲೆ ಬರಲು ರೆಡಿಯಾಗಿದೆ.
Time to halt your clocks and… feel the fever!! Lifting the drape on the fiery rendition of #𝐓𝐨𝐛𝐲𝐅𝐢𝐫𝐬𝐭𝐋𝐨𝐨𝐤 🤗❤️🔥
𝐈𝐍 𝐂𝐈𝐍𝐄𝐌𝐀𝐒 𝟐𝟓 𝐀𝐔𝐆𝐔𝐒𝐓, 𝟐𝟎𝟐𝟑 #TobyOnAug25 @rajbshettyOMK #BasilALChalakkal @Chaithra_Achar_ @samyuktahornad #PraveenShriyan pic.twitter.com/sJlJVCMejU
— Raj B Shetty (@RajbShettyOMK) June 29, 2023
ಅಂದಹಾಗೆಯೇ, ಈ ಸಿನಿಮಾದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರ ಪಾತ್ರ ಆಳವಾದ ಕಥೆಯನ್ನು ಹೇಳಲು ಹೊರಟಿದೆ ಎಂಬುದು ಪೋಸ್ಟರ್ಗಳ ಮುಖೇನ ಸ್ಪಷ್ಟವಾಗುತ್ತಿದೆ. ಸಿನಿಮಾ ನಿರ್ದೇಶಕರಾದ ಟಿ.ಕೆ ದಯಾನಂದ್, ನಟಿ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ಸೇರಿದಂತೆ ಮುಂತಾದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ