newsfirstkannada.com

Toby ಟ್ರೇಲರ್​ ರಿಲೀಸ್​.. ಮಾರಿ ಅವತಾರದಲ್ಲಿ ಘರ್ಜಿಸಿದ ರಾಜ್ ಬಿ ಶೆಟ್ರು

Share :

04-08-2023

    ಬಹುನಿರೀಕ್ಷಿತ 'ಟೋಬಿ' ಚಿತ್ರದ ಟ್ರೇಲರ್ ರಿಲೀಸ್

    ಸಾಕಷ್ಟು ಕುತೂಹಲ ಹುಟ್ಟಿಸಿದ 3 ನಿಮಿಷದ ಟ್ರೈಲರ್​

    ಆಗಸ್ಟ್​​ 25 ರಂದು ತೆರೆಗೆ ಬರಲಿರುವ ಟೋಬಿ

ಸ್ಯಾಂಡಲ್​ವುಡ್​ ಮಂದಿ ಬಹಳ ಕಾತುರದಿಂದ ಕಾಯ್ತಿದ್ದ ‘ಟೋಬಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಈ ಟ್ರೇಲರ್ ನೋಡಿದ್ಮೇಲೆ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಕಾನ್ಸೆಪ್ಟ್‌ಗಳ ಜೊತೆಗೆ ತೆರೆಯ ಮೇಲೆ ಬರುವ ರಾಜ್‌ ಬಿ ಶೆಟ್ಟಿ ಇದೀಗ ಗರುಡ ಗಮನ ವೃಷಭ ವಾಹನದ ನಂತ್ರ ಮತ್ತೆ ಹೊಸ ಗೆಟಪ್​ನಲ್ಲಿ ಮಿಂಚಲಿದ್ದಾರೆ.

ಸದ್ಯ ಬಿಡುಗಡೆಯಾಗಿರುವ 3 ನಿಮಿಷದ ಟ್ರೈಲರ್​ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಈ ಸಲ ಮಾಸ್ ಮನರಂಜನೆ ಪಕ್ಕಾ ಎನ್ನುವ ಭರವಸೆ ಹುಟ್ಕೊಂಡಿದೆ. ಬರೀ ಮಾಸ್‌ ಮಾತ್ರವಲ್ಲ ಜತೆಗೆ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ಕನೆಕ್ಟ್​ ಆಗುವ ಕಂಟೆಂಟ್‌ ಕೂಡ ಈ ಚಿತ್ರದಲ್ಲಿದೆ ಅನ್ನೋದು ಟ್ರೈಲರ್​ನಿಂದ ಭಾಸವಾಗಿದೆ.

ರವಿ ರೈ ಕಳಸ ‘ಟೋಬಿ’ಯನ್ನು ನಿರ್ಮಾಣ ಮಾಡಿದ್ದು, ಬಾಸಿಲ್ ಚಿತ್ರವನ್ನ​ ನಿರ್ದೇಶಿಸಿದ್ದಾರೆ. ಇನ್ನು, ಚಿತ್ರದಲ್ಲಿ ರಾಜ್‌ ಜತೆಗೆ ಚೈತ್ರಾ ಜೆ ಆಚಾರ್‌, ಸಂಯುಕ್ತಾ ಹೊರನಾಡು, ಗೋಪಾಲ್‌ ದೇಶಪಾಂಡೆ ಸೇರಿದಂತೆ ಹಲವರು ನಟಿಸಿದ್ದಾರೆ. ಆಗಸ್ಟ್​​ 25 ರಂದು ತೆರೆಗೆ ಬರಲಿರುವ ಟೋಬಿ ನಿಜಕ್ಕೂ ಒಂದೊಳ್ಳೆ ಪವರ್​ಫುಲ್​ ಎಂಟರ್ಟೈನರ್​ ಅನ್ನೋದ್ರಲ್ಲಿ ನೋ ಡೌಟ್.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Toby ಟ್ರೇಲರ್​ ರಿಲೀಸ್​.. ಮಾರಿ ಅವತಾರದಲ್ಲಿ ಘರ್ಜಿಸಿದ ರಾಜ್ ಬಿ ಶೆಟ್ರು

https://newsfirstlive.com/wp-content/uploads/2023/08/Toby.jpg

Load More