newsfirstkannada.com

ಬೈಕ್​ಗಳಲ್ಲಿನ ಪೆಟ್ರೋಲ್ ಕದ್ದ.. ಬಾಟಲ್​ಗಳಲ್ಲಿ ತುಂಬಿ ರಾಜಭವನದ ಮುಖ್ಯಗೇಟ್​ಗೆ ಎಸೆದ; ಪೊಲೀಸರು ಏನ್ ಮಾಡಿದರು?

Share :

26-10-2023

    ಪೆಟ್ರೋಲ್​ ಬಾಂಬ್ ಎಸೆದು ಎಸ್ಕೇಪ್ ಆಗಲು ಪ್ರಯತ್ನ

    ರಾಜಭವನದ ಮುಖ್ಯಗೇಟ್​ಗೆ ಪೆಟ್ರೋಲ್​ ಬಾಂಬ್ ಎಸೆದ

    ಸಾಮಾನ್ಯ ವ್ಯಕ್ತಿ ರಾಜಭವನವನ್ನೇ ಟಾರ್ಗಟ್​ ಮಾಡಿದ್ದೇಕೆ.?

ಚೆನ್ನೈ: ತಮಿಳುನಾಡಿನ ರಾಜಭವನದ ಮುಖ್ಯ ಗೇಟ್ ಬಳಿ ದುಷ್ಕರ್ಮಿಯೊಬ್ಬ ಪೆಟ್ರೋಲ್ ಬಾಂಬ್‌ ಎಸೆದು ಎಸ್ಕೇಪ್ ಆಗುತ್ತಿದ್ದಾಗ ಪೊಲೀಸರು ಅಟ್ಟಾಡಿಸಿ ಸೆರೆ ಹಿಡಿದಿದ್ದಾರೆ.

K ವಿನೋದ್‌ ಪೆಟ್ರೋಲ್ ಬಾಂಬ್ ಎಸೆದ ಆರೋಪಿ. ಈತನು ಸೈದಾಪೇಟೆ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ಬೈಕ್​ಗಳಲ್ಲಿ ಪೆಟ್ರೋಲ್ ಕದ್ದು ಬಳಿಕ ರಾಜಭವನದತ್ತ ನಡೆದುಕೊಂಡು ಬಂದಿದ್ದಾನೆ. ಬಳಿಕ ಎರಡು ಬಾಟಲಿಗಳಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿದ್ದಾನೆ. ಅವುಗಳನ್ನು ರಾಜಭವನದ ಮುಖ್ಯಗೇಟ್‌ಗೆ ಎಸೆದು ಪರಾರಿಯಾಗಲು ಪ್ರಯತ್ನಿಸುತ್ತಿದ್ದನು. ಈ ವೇಳೆ ಪೊಲೀಸರು ಓಡಿ ಹೋಗಿ ಅಟ್ಟಾಡಿಸಿ ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸರ್ಕಾರವನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅಣ್ಣಾಮಲೈ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಜನರನ್ನು ಸರ್ಕಾರ ಪ್ರಚೋದಿಸುವಂತೆ ಮಾಡುತ್ತಿದೆ. ಇದೊಂದು ಪ್ರಾಯೋಜಿತವಾಗಿ ನಡೆದಂತ ಘಟನೆ ಎಂದು ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​ಗಳಲ್ಲಿನ ಪೆಟ್ರೋಲ್ ಕದ್ದ.. ಬಾಟಲ್​ಗಳಲ್ಲಿ ತುಂಬಿ ರಾಜಭವನದ ಮುಖ್ಯಗೇಟ್​ಗೆ ಎಸೆದ; ಪೊಲೀಸರು ಏನ್ ಮಾಡಿದರು?

https://newsfirstlive.com/wp-content/uploads/2023/10/TAMIL_NADU_RAJABHAVANA.jpg

Load More