ಉಪಾಸನ ಬರ್ತ್ಡೇಗೆ ಮೆಗಾ ಫ್ಯಾಮಿಲಿ ಬಿಗ್ ಗಿಫ್ಟ್
ಮಣಿಪುರ ಘಟನೆ ಬಗ್ಗೆ ರಶ್ಮಿಕಾ ಮಂದಣ್ಣ ಬೇಸರ
ನಟ ಟೈಗರ್ ಶ್ರಾಫ್ ಆಲ್ಬಂ ಸಾಂಗ್ವೊಂದು ರಿಲೀಸ್
ಉಪಾಸನ ಬರ್ತ್ಡೇಗೆ ಸ್ಪೆಷಲ್ ಗಿಫ್ಟ್
ರಾಮ್ ಚರಣ್ ಪತ್ನಿ ಉಪಾಸನ ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಉಪಾಸನ ಹುಟ್ಟುಹಬ್ಬದ ವಿಶೇಷವಾಗಿ ಉಡುಗೊರೆ ಕೊಟ್ಟಿರುವ ಮೆಗಾ ಫ್ಯಾಮಿಲಿ, ಉಪಾಸನ ಚೊಚ್ಚಲ ಮಗುವಿನ ಡಿಲವರಿ ಸಮಯದ ಅತ್ಯದ್ಭುತ ಕ್ಷಣಗಳನ್ನ ಕ್ಯಾಪ್ಚರ್ ಮಾಡಿದ್ದು, ಇವತ್ತು ಆ ಗ್ಲಿಂಪ್ಸ್ನ ಶೇರ್ ಮಾಡಿದ್ದಾರೆ. ಜೂನ್ 20ಕ್ಕೆ ಉಪಾಸನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
View this post on Instagram
ಮಣಿಪುರ ಘಟನೆ ಬಗ್ಗೆ ರಶ್ಮಿಕಾ ಬೇಸರ
ಮಣಿಪುರದ ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಘಟನೆ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ರಶ್ಮಿಕಾ, ‘ನಾನು ಓದಿದ್ದನ್ನ ನಂಬಲು ಸಾಧ್ಯವಾಗ್ತಿಲ್ಲ. ದೇಶದಲ್ಲಿ ಏನು ನಡೆಯುತ್ತಿದೆ. ದುಷ್ಟರಿಗೆ ತಕ್ಕ ಶಿಕ್ಷೆಯಾಗಲಿ. ಅಪರಾಧಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷೆಯಾಗುತ್ತದೆ’ ಎಂದು ಭಾವಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.
ತೆರೆಮೇಲೆ ರಾಜ್ ಕುಂದ್ರಾ ಅಶ್ಲೀಲ ಪ್ರಕರಣ
2021ರಲ್ಲಿ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಬಂಧನವಾಗಿದ್ದರು. ಇದೀಗ, ಈ ಘಟನೆಯನ್ನ ತೆರೆಮೇಲೆ ತರೋಕೆ ರಾಜ್ ಕುಂದ್ರಾ ನಿರ್ಧರಿಸಿದ್ದಾರಂತೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಏನಾಯ್ತು? ಜೈಲಿನಲ್ಲಿ ಎದುರಾದ ಅನುಭವ ಏನು? ಶಿಲ್ಪಾ ಶೆಟ್ಟಿ ಮನಸ್ಥಿತಿ ಹೇಗಿತ್ತು ಅನ್ನೋ ವಿಚಾರಗಳನ್ನಿಟ್ಟುಕೊಂಡು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಖುದ್ದು ರಾಜ್ ಕುಂದ್ರಾ ಅವರೇ ಈ ಚಿತ್ರ ನಿರ್ಮಿಸಲಿದ್ದು, ಸ್ಕ್ರಿಪ್ಟ್, ಕಲಾವಿದರ ಆಯ್ಕೆ ಇನ್ನಷ್ಟೇ ಆರಂಭವಾಗಬೇಕಿದೆ ಎಂಬ ಮಾಹಿತಿ ಹೊರಬಿದ್ದಿದೆ.
ನಿರ್ದೇಶಕ್ಕಿಳಿದ ಕಲೈ ಮಾಸ್ಟರ್
ಸ್ಯಾಂಡಲ್ವುಡ್ ಸ್ಟಾರ್ ಡ್ಯಾನ್ಸ್ ಕೊರಿಯೋಗ್ರಫರ್ ಕಲೈ ಮಾಸ್ಟರ್ ಈಗ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಕಲೈ ಮಾಸ್ಟರ್ ಆ್ಯಕ್ಷನ್ ಕಟ್ ಹೇಳಲಿದ್ದು, ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ. ಸಾಮಾಜಿಕ ಕಳಕಳಿ ಹೊಂದಿರುವ ಕಥಾಹಂದರವನ್ನು ರಾಜಲಕ್ಷ್ಮೀ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ನಿರ್ಮಾಣ ಮಾಡಲಿದ್ದಾರೆ. 23 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ಕಲೈ ಮಾಸ್ಟರ್ ಮದನ್ – ಹರಿಣಿ, ಚಿನ್ನಿಪ್ರಕಾಶ್, ತ್ರಿಭುವನ್, ಫೈವ್ ಸ್ಟಾರ್ ಗಣೇಶ್ ಮುಂತಾದ ಹಿರಿಯ ನೃತ್ಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು, 300ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಟೈಗರ್ ಶ್ರಾಫ್ ಸಾಂಗ್ಸ್ ಸೆನ್ಸೇಷನ್
ಬಾಲಿವುಡ್ ನಟ ಟೈಗರ್ ಶ್ರಾಫ್ ನಟನೆಯ ಆಲ್ಬಂ ಸಾಂಗ್ವೊಂದು ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿದೆ. ಟಿ-ಟಿರೀಸ್ ನಿರ್ಮಾಣ ಈ ಹಾಡಿನಲ್ಲಿ ಟೈಗರ್ ಶ್ರಾಫ್ ಮತ್ತು ಝರಾ ಖಾನ್ ಕಾಣಿಸಿಕೊಂಡಿರೋದಲ್ಲದೇ ಅವರೇ ಸ್ವತಃ ಹಾಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಲವ್ ಸ್ಟೋರೀಸ್ ಅಗೈನ್ ಎನ್ನುವ ಹಾಡು ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದ್ದು, ಮ್ಯೂಸಿಕ್ ಪ್ರಿಯರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ