ರಾಜಾ-ರಾಣಿ ಫಿನಾಲೆಗೆ ಎಂಟ್ರಿ ನೀಡಿತ್ತು ಐದು ಜೋಡಿ
ರನ್ನರ್ ಅಪ್ ಜೋಡಿಗೆ ಸಿಕ್ಕಿದ್ದು ಮೂರು ಲಕ್ಷ ರೂಪಾಯಿ
ವೀಕ್ಷಕರ ಹೃದಯಗೆದ್ದ ಹರ್ಷಿತಾ-ವಿನಯ್ ದಂಪತಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಮುಕ್ತಾಯಗೊಂಡಿದೆ. ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದ 5 ದಂಪತಿಯಲ್ಲಿ ಸಂಜಯ್ ಮತ್ತು ಮೇಘಾ ವಿನ್ನರ್ ಎಂದು ತೀರ್ಪುಗಾರರು ಘೋಷಣೆ ಮಾಡಿದರು.
ನಾನ್ ಡ್ಯಾನ್ಸರ್ ಆಗಿ ಬಂದ ಸಂಜಯ್-ಮೇಘಾ ದಂಪತಿ ‘ರಾಜಾ ರಾಣಿ’ ಪಟ್ಟವನ್ನು ತಮ್ಮದಾಗಿಸಿಕೊಂಡರು. ಸಂಜಯ್-ಮೇಘಾ ದಂಪತಿಗೆ ಬಹುಮಾನವಾಗಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಸಿಕ್ಕಿದೆ.
ಇದನ್ನೂ ಓದಿ:ದೊಡ್ಮನೆಗೆ ಎಂಟ್ರಿ ಕೊಟ್ರು 2 ಕೋಟಿ ಬಂಗಾರ ಧರಿಸಿರೋ Gold Suresh; ಯಾರು ಈತ?
ಯಾರೆಲ್ಲ ಫಿನಾಲೆಗೆ ಎಂಟ್ರಿ..!
ಗ್ರ್ಯಾಂಡ್ ಫಿನಾಲೆಗೆ ಲೋಕೇಶ್ ಬಸವಟ್ಟಿ-ರಚನಾ, ಸಂಜಯ್-ಮೇಘಾ, ಹರ್ಷಿತಾ-ವಿನಯ್, ಪ್ರಿಯಾಂಕಾ ಕಾಮತ್-ಅಮಿತ್ ನಾಯಕ್ ಮತ್ತು ಅರ್ಜುನ್ ಯೋಗಿ-ಸಹನಾ ದಂಪತಿ ಎಂಟ್ರಿ ನೀಡಿತ್ತು. ಅವರಲ್ಲಿ ಅರ್ಜುನ್ ಯೋಗಿ-ಸಹನಾ ದಂಪತಿ ರನ್ನರ್ ಅಪ್ ಆದರು. ಈ ಜೋಡಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ.
ಇನ್ನು ಪ್ರಿಯಾಂಕಾ ಕಾಮತ್-ಅಮಿತ್ ನಾಯಕ್ ದಂಪತಿ 3ನೇ ಸ್ಥಾನವನ್ನು ಅಲಂಕರಿಸಿದರು. ಇವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಲೋಕೇಶ್ ಬಸವಟ್ಟಿ-ರಚನಾ 4ನೇ ಸ್ಥಾನ ಪಡೆದುಕೊಂಡ್ರೆ, ಹರ್ಷಿತಾ-ವಿನಯ್ ಜೋಡಿ 5ನೇ ಸ್ಥಾನ ಪಡೆದರು. ಸೃಜನ್ ಲೋಕೇಶ್, ಅನು ಪ್ರಭಾಕರ್, ತಾರಾ ಮತ್ತು ಅದಿತಿ ಪ್ರಭುದೇವ ತೀರ್ಪುಗಾರರಾಗಿದ್ದರು.
ಇದನ್ನೂ ಓದಿ:BIGG BOSS ಮನೆಗೆ ಎಂಟ್ರಿ ಕೊಟ್ಟಾಯ್ತು ಈ 4 ಕಂಟೆಸ್ಟೆಂಟ್ಸ್; ಮುಂದೆ ಇದೆ ನಿಜವಾದ ಅಸಲಿ ಆಟ
ಗ್ರಾಂಡ್ ಫಿನಾಲೆ ಗೆದ್ದು ರಾಜಾ ರಾಣಿ ಕಿರೀಟ ಮುಡಿಗೇರಿಸಿಕೊಂಡವರು ಸಂಜಯ್-ಮೇಘ
ರಾಜಾ ರಾಣಿ ರೀಲೋಡೆಡ್ ಗ್ರಾಂಡ್ ಫಿನಾಲೆ #RajaRaniReloaded #SrujanLokesh #Tara #AditiPrabhudeva #Anupama #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory pic.twitter.com/2MFCwdlQoa
— Colors Kannada (@ColorsKannada) September 28, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ