ಇಂದು ದೇಶದಾದ್ಯಂತ ‘ಜೈಲರ್’ ಸಿನಿಮಾ ರಿಲೀಸ್
10 ಭಾಷೆಗಳಲ್ಲಿ ರಜನಿಕಾಂತ್ ‘ಜೈಲರ್’ ಚಿತ್ರ ಬಿಡುಗಡೆ
ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು
ಇಂದು ದೇಶದಾದ್ಯಂತ ಸೂಪರ್ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರ ಬಿಡುಗಡೆಯಾಗಿದೆ. ಎರಡು ವರ್ಷಗಳ ಅಂತರದ ಬಳಿಕ ರಜನಿಕಾಂತ್ ಚಿತ್ರ ತೆರೆ ಮೇಲೆ ರಿಲೀಸ್ ಆಗಿದ್ದು, ಸೂಪರ್ ಸ್ಟಾರ್ ಅಭಿಮಾನಿಗಳ ಪಾಲಿಗೆ ಹಬ್ಬವೇ ಬಂದಂತಾಗಿದೆ.
10 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲೂ ಜೈಲರ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯದ 300 ಥಿಯೇಟರ್ಗಳಲ್ಲಿ ಜೈಲರ್ ಪ್ರದರ್ಶನಗೊಳ್ಳುತ್ತಿದ್ದು, ಇಂದು 2000ಕ್ಕೂ ಅಧಿಕ ಶೋ ನಡೆಯಲಿದೆ. ಜೈಲರ್ಗೆ ತಲೈವಾ ಅಭಿಮಾನಿಗಳ ಬಹುಪರಾಕ್ ಎಂದಿದ್ದು, ಥಿಯೇಟರ್ ಮುಂದೆ ಕುಣಿದು-ಪಟಾಕಿ ಸಿಡಿಸಿ ಸೆಲೆಬ್ರೇಷನ್ ಮಾಡ್ತಿದ್ದಾರೆ.
‘ಜೈಲರ್’ಚಿತ್ರ ಯು/ಎ ಪ್ರಮಾಣ ಪತ್ರ ಪಡೆದಿದೆ. ಈ ಚಿತ್ರದ ಅವಧಿ 2 ಗಂಟೆ 49 ನಿಮಿಷಗಳಿದ್ದು, ಸುಮಾರು 3 ಗಂಟೆಗಳ ಕಾಲ ಸಿನಿಮಾವಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಜೈಲರ್’ ಚಿತ್ರದ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
https://twitter.com/mr_kk001_/status/1689286067558461440?s=20
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್ ಸಿನಿಮಾ ಮೂಡಿಬಂದಿದೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ