newsfirstkannada.com

ಶ್ರೀಮಂತನ ಮಗನೆಂದು ಯುವಕನ ಕಿಡ್ನ್ಯಾಪ್‌.. ₹20 ಲಕ್ಷಕ್ಕೆ ಡಿಮ್ಯಾಂಡ್‌; ಆಮೇಲೆ ಏನಾಯ್ತು ಗೊತ್ತಾ?

Share :

Published August 28, 2024 at 5:10pm

    ಅತ್ಯಂತ ಕ್ಲಿಷ್ಟಕರ ಕಿಡ್ನಾಪ್ ಪ್ರಕರಣವನ್ನು ಭೇದಿಸಿದ ಜೈಪುರ ಪೊಲೀಸರು

    ಟ್ರಕ್ಕಿಂಗ್​ಗೆ ಹೋಗಿದ್ದ ಯುವಕನ ಕಿಡ್ನಾಪ್​, 20 ಲಕ್ಷ ರೂಪಾಯಿಗೆ ಬೇಡಿಕೆ

    ಶ್ರೀಮಂತ ಕುಟುಂಬದ ಮಗ ಎಂದು ಅಪಹರಣ ಮಾಡಿದ್ದ ದುರುಳರಿಗೆ ಸಿಕ್ಕಿದ್ದೇನು?

ರಾಜಸ್ಥಾನದ ಜೈಪುರ ಪೊಲೀಸರು ಒಂದು ವಿಭಿನ್ನವಾದ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಆಗಸ್ಟ್ 18 ರಂದು ಕಿಡ್ನಾಪ್ ಆಗಿದ್ದ ಅನುಜ್ ಎಂಬ ಯುವಕನನ್ನು ರಕ್ಷಿಸುವಲ್ಲಿ ಹಾಗೂ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನುಜ್​ನನ್ನು ಕಿಡ್ನಾಪ್ ಮಾಡಿದ ಕಿರಾತಕರು ಅವನ ಪೋಷಕರಿಗೆ ಕರೆ ಮಾಡಿ 20 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆಯೊಡ್ಡಿದ್ದರು. ಅನುಜ್​​ನನ್ನು ಕರೆದುಕೊಂಡು ಹೋಗಿ ಹಿಮಾಚಲ ಪ್ರದೇಶದಲ್ಲಿ ಸಲೂನ್ ಎಂಬ ಹೋಟೆಲ್​ನಲ್ಲಿ ಬಚ್ಚಿಟ್ಟಿದ್ದರು.

ಇದನ್ನೂ ಓದಿ: Bigg Boss Kannada: ಕೊನೆಗೂ ಬಂತು ಬಿಗ್‌ಬಾಸ್‌ ಕಾರು.. ವಿನ್ನರ್ ಕಾರ್ತಿಕ್ ಮಹೇಶ್ ಬಿಗ್ ಅಪ್ಡೇಟ್‌! 

ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಇಳಿದ ಪೊಲೀಸರು ಅನುಜ್​ನನ್ನು ಪತ್ತೆ ಹಚ್ಚಿದ್ದಾರೆ. ಹೋಟೆಲ್​ಗೆ ಬಂದ ಪೊಲೀಸರು ಮಲಗಿದ್ದ ಅನುಜ್​ನನ್ನು ಹಲೋ ಅನುಜ್, ವಿ.ಆರ್ ಜೈಪುರ್ ಪೊಲೀಸ್ ಎಂದು ಹೇಳಿದ್ದಾರೆ. ಪೊಲೀಸರು ಅನುಜ್​​ನನ್ನು ಕೂಗಿ ಎಬ್ಬಿಸಿದ ಹಾಗೂ ಪೊಲೀಸರನ್ನು ಕಂಡ ಅನುಜ್​​ನ ಎಕ್ಸ್​ಪ್ರೆಷನ್​ನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಸಾಹಸಕ್ಕೆ ಭೇಷ್ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಓ.. ಹೆಣ್​ ಮಗು.. ಹೆಣ್​ ಮಗು.. ಟೆಸ್ಟ್​ ಡ್ರೈವ್​ಗೆ ಅಂತ ಮರ್ಸಿಡಿಜ್ ಬೆಂಜ್ ಕಾರ್​ ಒಯ್ದ ಯುವತಿ ಮಾಡಿದ್ದೇನು?

ಅಪಹರಣ ಮಾಡಿದ ಆರೋಪಿಗಳಲ್ಲಿ ಮಾಸ್ಟರ್ ಮೈಂಡ್​, ಸಾಪ್ಟ್​ವೇರ್​ ಇಂಜನಿಯರ್ ವಿರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಅವನ ಜೊತೆ, ವಿನೋದ್ ಸಿಂಗ್, ಅಮಿತ್ ಸಿಂಗ್, ಜಿತೇಂದ್ರ ಸಿಂಗ್ ಹಾಗೂ ಜಮುನಾ ಸರ್ಕಾರ್ ಎಂಬ ವಿರೇಂದ್ರನ ಸಹಚರರನ್ನು ಕೂಡ ಬಂಧಿಸಲಾಗಿದೆ.

ಇದನ್ನೂ ಓದಿ: ಮಲಯಾಳಂ ಚಿತ್ರರಂಗಕ್ಕೆ ಬಿಗ್ ಶಾಕ್‌.. ‘ಅಮ್ಮಾ’ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೋಹನ್ ಲಾಲ್!

ಏನೋ ಮಾಡಲು ಹೋಗಿ ಏನೋ ಮಾಡಿಕೊಂಡ ಕಿಡ್ನಾಪರ್ಸ್!

ಅನುಜ್​ನನ್ನು ಅತ್ಯಂತ ಶ್ರೀಮಂತ ಕುಟುಂಬದ ಪುತ್ರ ಎಂದು ನಂಬಿ ಈ ವಿರೇಂದ್ರ ಆ್ಯಂಡ್ ಟೀಂ ಕಿಡ್ನಾಪ್ ಮಾಡಿತ್ತು ಎನ್ನಲಾಗಿದೆ. ಆದ್ರೆ ಅಪಹರಣಕಾರರ ದುರಾದೃಷ್ಟಕ್ಕೆ, ಅನುಜ್ ಶ್ರೀಮಂತ ಕುಟುಂಬದ ಹುಡುಗನಾಗಿರಲಿಲ್ಲ. ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದ ವೇಳೆ ಆತ ಶ್ರೀಮಂತ ಕುಟುಂಬದ ಮಗನಿರಬೇಕು ಎಂದು ಭಾವಿಸಿ ಕಿಡ್ನಾಪ್ ಮಾಡಿ, ಹೋಟೆಲ್​ನಲ್ಲಿ ಬಚ್ಚಿಟ್ಟಿದ್ದರು. ಕೊನೆಗೂ ಜೈಪುರ ಪೊಲೀಸರು ಯುವಕನನ್ನು ರಕ್ಷಿಸಿ, ಅಪಹರಣಕಾರರನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಮಂತನ ಮಗನೆಂದು ಯುವಕನ ಕಿಡ್ನ್ಯಾಪ್‌.. ₹20 ಲಕ್ಷಕ್ಕೆ ಡಿಮ್ಯಾಂಡ್‌; ಆಮೇಲೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2024/08/JAIPUR-POLICE-TRACED-KIDNAP-CASE.jpg

Load More