newsfirstkannada.com

ಕಾಂಗ್ರೆಸ್‌ಗೆ ಗುಡ್‌ ಬೈ ಹೇಳ್ತಾರಾ ಸಚಿನ್ ಪೈಲಟ್?; ರಾಜಸ್ಥಾನ ರಾಜಕೀಯಕ್ಕೆ ಇವತ್ತು ಮೆಗಾ ಟ್ವಿಸ್ಟ್

Share :

11-06-2023

    ರಾಜಸ್ಥಾನದ ಮಾಜಿ ಡಿಸಿಎಂ ಹೊಸ ಪಕ್ಷ ಘೋಷಣೆ?

    ಅಶೋಕ್ ಗೆಹ್ಲೋಟ್ ವಿರುದ್ಧ ಪೈಲೆಟ್ ಪ್ರಾಜೆಕ್ಟ್‌ ಏನು?

    ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲಿ ಮೆಗಾ ಎಲೆಕ್ಷನ್ ಫೈಟ್

ದೌಸಾ: ರಾಜಸ್ಥಾನದ ಮಾಜಿ ಡಿಸಿಎಂ, ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಇವತ್ತು ತಮ್ಮ ಮಹತ್ವದ ರಾಜಕೀಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಸಾರಿರುವ ಪೈಲೆಟ್‌ ತಮ್ಮ ಹೊಸ ಪ್ರಾಜೆಕ್ಟ್ ಏನು ಅನ್ನೋದನ್ನ ಬಹಿರಂಗಪಡಿಸಲಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ರಾಜಸ್ಥಾನಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಎಲೆಕ್ಷನ್‌ಗೂ ಮುನ್ನ ಸಚಿನ್ ಪೈಲಟ್ ಇವತ್ತಿನ ನಿರ್ಧಾರ ಕುತೂಹಲ ಕೆರಳಿಸಿದೆ.

ಇಂದು ಸಚಿನ್ ಪೈಲಟ್ ಅವರ ತಂದೆ ರಾಜೇಶ್ ಪೈಲಟ್ ಅವರ ಪುಣ್ಯಸ್ಮರಣೆ. ತಂದೆಯ ಶ್ರದ್ಧಾಂಜಲಿ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ದೌಸಾದಲ್ಲಿ ಬೆಂಬಲಿಗರ ಱಲಿ ಹಮ್ಮಿಕೊಂಡಿದ್ದಾರೆ. ಈ ವೇಳೆ ಮಾತನಾಡಿರುವ ಸಚಿನ್ ಪೈಲಟ್, ನನ್ನ ತಂದೆ ರಾಜೇಶ್ ಪೈಲಟ್ ಅವರ ಸಾರ್ವಜನಿಕ ಕಲ್ಯಾಣ, ಕಾರ್ಯಶೈಲಿ ನನಗೆ ಮಾರ್ಗದರ್ಶಿಯಾಗಿದೆ. ಅವರು ಸಾರ್ವಜನಿಕ ಹಿತಾಸಕ್ತಿಗಳನ್ನು ಪರಿಗಣಿಸಿ ತಮ್ಮ ತತ್ವಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅವರ ಆಲೋಚನೆಗಳು ಮತ್ತು ಆದರ್ಶಗಳನ್ನು ನಾನು ಯಾವಾಗಲೂ ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಇವತ್ತಿನ ದೌಸಾ ಱಲಿಯಲ್ಲಿ ಪೈಲಟ್ ಕಾಂಗ್ರೆಸ್ ಪಕ್ಷವನ್ನೇ ಬಿಟ್ಟು ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಘೋಷಣೆ ಮಾಡಬಹುದು. ಇತ್ತೀಚಿಗೆ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಸಂಧಾನದ ಮಾತುಕತೆ ನಡೆಸಿತ್ತು. ಆದರೆ ಇಬ್ಬರು ನಾಯಕರ ಬಹುಕಾಲದ ಶೀತಲ ಸಮರ ಅಷ್ಟು ಸುಲಭವಾಗಿ ಬಗೆಹರಿದಿಲ್ಲ. ಸಚಿನ್ ಪೈಲಟ್ ಅವರ ಬೇಡಿಕೆಗಳು ಈಡೇರಿದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿಯದಿದ್ದರೆ ಸಚಿನ್ ಪೈಲಟ್ ಪ್ರಗತಿಶೀಲ ಕಾಂಗ್ರೆಸ್ ಪಕ್ಷ ಕಟ್ಟಿ ಚುನಾವಣೆಯನ್ನು ಎದುರಿಸಬಹುದು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕಾಂಗ್ರೆಸ್‌ಗೆ ಗುಡ್‌ ಬೈ ಹೇಳ್ತಾರಾ ಸಚಿನ್ ಪೈಲಟ್?; ರಾಜಸ್ಥಾನ ರಾಜಕೀಯಕ್ಕೆ ಇವತ್ತು ಮೆಗಾ ಟ್ವಿಸ್ಟ್

https://newsfirstlive.com/wp-content/uploads/2023/06/Sachin-Pilot-1.jpg

Load More