newsfirstkannada.com

ಸೀಮಾ, ಸಂಜು ನಂತರ ಭಾರತ-ಪಾಕ್​ನ ಮತ್ತೊಂದು ಜೋಡಿಗಳ ವಿವಾಹ.. ಆನ್​ಲೈನ್​ನಲ್ಲಿ ನಡೆದ ಮ್ಯಾರೇಜ್, ಯಾಕೆ?

Share :

06-08-2023

    ರಾಜಸ್ಥಾನ ಮೂಲದ ವರ, ಪಾಕಿಸ್ತಾನದ ವಧು ನಡುವೆ ವಿವಾಹ

    ಹಿರಿಯರ ಸಮ್ಮುಖದಲ್ಲಿ ನಡೆಯಿತು ಅದ್ಧೂರಿ ಮದುವೆ ಸಮಾರಂಭ

    ಆನ್​ಲೈನ್​ ಮ್ಯಾರೇಜ್ ಎಲ್​ಇಡಿಯಲ್ಲಿ ನೋಡಿದ ಸಂಬಂಧಿಕರು

ಇತ್ತೀಚೆಗೆ ಗಡಿ ದಾಟಿ ಪ್ರೀತಿ-ಪ್ರೇಮಗಳು ಆಗುತ್ತಿರುವುದು ಜನರಲ್ಲಿ ಭಾರೀ ಕುತೂಹಲ ಮೂಡಿಸಿವೆ. ಮೊನ್ನೆ, ಮೊನ್ನೆಯಷ್ಟೇ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಎನ್ನುವ ಪಬ್​ಜೀ ಮೂಲಕ ಲವ್​ನಲ್ಲಿ ಬಿದ್ದು ಭಾರತಕ್ಕೆ ಬಂದು ಯುವಕನೊಬ್ಬನನ್ನ ಮದುವೆ ಆಗಿದ್ದರು. ಇದರ ಬೆನ್ನಲ್ಲೇ ಭಾರತದ ಯುವತಿ ಅಂಜು ಎನ್ನುವರು ಪಾಕ್​ಗೆ ಹೋಗಿ ನಸ್ರುಲ್ಲಾ ಎನ್ನುವರನ್ನ ವಿವಾಹವಾಗಿದ್ದಳು. ಈ 2 ಮದುವೆ ನಡೆದು ಇನ್ನು ಸರಿಯಾಗಿ 2 ತಿಂಗಳು ಕಳೆದಿಲ್ಲ. ಅವಾಗಲೇ ಇನ್ನೊಂದು ವಿವಾಹ ಸಮಾರಂಭ ಭಾರತ-ಪಾಕ್​ನ ವಧು-ವರನ​ ನಡುವೆ ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ನಡೆದಿದೆ.

ಜೋಧ್‌ಪುರದ ಅರ್ಬಾಜ್

ರಾಜಸ್ಥಾನದ ಜೋಧ್‌ಪುರದ ನಿವಾಸಿ ಅರ್ಬಾಜ್ ಮತ್ತು ಪಾಕ್​ನ ಅಮೀನಾ ಎನ್ನುವರ ಮದುವೆ ನಿಶ್ಚಯವಾಗಿತ್ತು. ಆದ್ರೆ ವಿವಾಹ ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ನವವಧುವಿನ ವೀಸಾ ಸಮಸ್ಯೆ ಆಗಿದ್ದರಿಂದ ಆನ್​ಲೈನ್​ ಮ್ಯಾರೇಜ್​ ಮೊರೆ ಹೋಗಲಾಯಿತು. ಅದ್ಧೂರಿ ಸಮಾರಂಭದಲ್ಲಿ ಭಾರತ-ಪಾಕ್​ನ ಖಾಜಿಗಳು ಹಾಗೂ ಎರಡು ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಒಂದು ಒಳ್ಳೆಯ ಶುಭ ಸಮಯದಲ್ಲಿ ಮದುವೆ ನೆರವೇರಿಸಲಾಯಿತು.

ವರನ ತಂದೆ ಹೇಳುವುದು ಏನು..?

ಜೋಧ್‌ಪುರದ ನಿವಾಸಿ ವರನ ಮನೆಯಲ್ಲಿ ಸಂಭ್ರಮ ಕಳೆಗಟ್ಟಿತ್ತು. ಸಾಕಷ್ಟು ಸಂಬಂಧಿಕರು ಮದುವೆ ಬಂದಿದ್ದರಿಂದ ದೊಡ್ಡದಾದ ಎಲ್​ಇಡಿ ಪರದೆ ಅಳವಡಿಸಲಾಗಿತ್ತು. ಈ ಬಗ್ಗೆ ಮಾತನಾಡಿದ ವರನ ತಂದೆ ಮೊಹಮ್ಮದ್ ಅಫ್ಜಲ್, ಭಾರತಕ್ಕೆ ಬರುಲು ಶೀಘ್ರದಲ್ಲೇ ವೀಸಾಕ್ಕೆ ಅಪ್ಲೇ ಮಾಡಲಾಗುವುದು. ನಮ್ಮ ಸಂಬಂಧಿಕರು ಪಾಕ್​ನಲ್ಲಿದ್ದಾರೆ. ಇದರಿಂದ ಎರಡು ಕುಟುಂಬದ ಮಾತುಕತೆ ನಂತರ ಮದುವೆ ನಿಶ್ಚಯ ಮಾಡಲಾಗಿತ್ತು. ಆದ್ರೆ ಕೊನೆ ಸಮಯದಲ್ಲಿ ವೀಸಾ ಸಿಗಲಿಲ್ಲ. ಎರಡು ದೇಶಗಳ ನಡುವೆ ಸಂಬಂಧ ಸರಿಯಾಗಿಲ್ಲದ ಕಾರಣ ನಾವು ಆನ್​ಲೈನ್​ ಮ್ಯಾರೇಜ್​ ಮೊರೆ ಹೋದೇವು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀಮಾ, ಸಂಜು ನಂತರ ಭಾರತ-ಪಾಕ್​ನ ಮತ್ತೊಂದು ಜೋಡಿಗಳ ವಿವಾಹ.. ಆನ್​ಲೈನ್​ನಲ್ಲಿ ನಡೆದ ಮ್ಯಾರೇಜ್, ಯಾಕೆ?

https://newsfirstlive.com/wp-content/uploads/2023/08/IND_PAK.jpg

Load More