ಆಗಸ್ಟ್ ಕ್ರಾಂತಿ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ ರೈಲ್ವೆಯಲ್ಲಿ ಕಳ್ಳ ಸಾಗಣೆ
ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಮೊತ್ತದ ಚಿನ್ನಾಭರಣ, ಹಣ ವಶಕ್ಕೆ
ಕೋಟಾ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದ ಆರೋಪಿಗಳು
ಜೈಪುರ: ರೈಲಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 6 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 26 ಲಕ್ಷ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯು ರಾಜಸ್ತಾನದ ಕೋಟಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.
ಮುಂಬೈ ಮೂಲದ ದಿಲೀಪ್ ಭಾಯ್, ಜಿತೇಂದ್ರ ಭನ್ವಾರ್ ಹಾಗೂ ರಾಜಸ್ತಾನದ ಪ್ರಿತೇಶ್ ಕುಮಾರ್ ಎನ್ನುವ ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂವರು ಸೇರಿ ನಿಜಾಮುದ್ದೀನ್-ಮುಂಬೈ ಆಗಸ್ಟ್ ಕ್ರಾಂತಿ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ ರೈಲ್ವೆಯಲ್ಲಿ ಚಿನ್ನಾಭರಣ ಹಾಗೂ ಬಿಸ್ಕೆಟ್ ಬಂಗಾರದ ಜೊತೆಗೆ 500 ರೂ. ನೋಟಿನ ಮುಖ ಬೆಲೆಯ ಸುಮಾರು 26 ಲಕ್ಷ ರೂಪಾಯಿ ನಗದು ಅನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ವೇಳೆ ಕೋಟಾ ಜಿಲ್ಲೆಯ ರೈಲ್ವೇ ನಿಲ್ದಾಣದಲ್ಲಿ ತಪಾಸಣೆ ನಡೆಸಿದ ರೈಲ್ವೆ ಸಿಬ್ಬಂದಿಗೆ ಬರೋಬ್ಬರಿ 6 ಕೋಟಿ ಮೊತ್ತದ ಚಿನ್ನ, 26 ಲಕ್ಷ ನಗದು ಆರೋಪಿಗಳ ಬ್ಯಾಗ್ನಲ್ಲಿ ಸಿಕ್ಕಿದೆ. ಮೂವರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಹಣ, ಬಂಗಾರ ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇನ್ನು ಹಣ ಹಾಗೂ ಚಿನ್ನಾಭರಣಗಳನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದ್ದು ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ರೈಲ್ವೆ ಸಿಬ್ಬಂದಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ