newsfirstkannada.com

ಒತ್ತಾಯ ಮಾಡಿ ಮರು ಮದುವೆ.. ತಾಳಿ ಕಟ್ಟಿದ ಬೆನ್ನಲ್ಲೇ 2ನೇ ಪತ್ನಿಗೆ ರಾಖಿ ಕಟ್ಟಿ ಆಕ್ರೋಶ ಹೊರಹಾಕಿದ ಲೇಡಿ..!

Share :

13-06-2023

  ಇದು ಅಪ್ಪ ಮಾಡಿದ ಕಿತಾಪತಿ..!

  ಮೊದಲ ಪತಿಗಾಗಿ ನಿತ್ಯ ನರಳಾಟ

  5 ತಿಂಗಳ ಕಾಲ ಸತತ ಚಿತ್ರಹಿಂಸೆ

‘ಅಳಿಯ ನಮ್ಮ ಜಾತಿಗೆ ಸೇರಿದವನಲ್ಲ’ ಎಂದು ಸಿಟ್ಟಿಗೆದ್ದ ಮಾವ, ತನ್ನ ಮಗಳಿಗೆ ಮತ್ತೊಂದು ಮದುವೆ ಮಾಡಿದ. ಅಪ್ಪ ತೆಗೆದುಕೊಂಡ ಈ ತಪ್ಪು ನಿರ್ಧಾರದಿಂದ ಮಹಿಳೆಯ ಬಾಳು ಕೆಲವು ವಿಲಕ್ಷಣ ಪರಿಸ್ಥಿತಿಗೆ ಸಿಲುಕಿದ ಪ್ರಸಂಗ ರಾಜಸ್ಥಾನದ ಜೋಧ್​ಪುರ್​​ನಲ್ಲಿ ಬೆಳಕಿಗೆ ಬಂದಿದೆ.

ಏನಿದು ಸ್ಟೋರಿ..?

ತರುಣಾ ಶರ್ಮಾ ಮತ್ತು ಸುರೇಂದ್ರ ಶುಕ್ಲಾ ಇಬ್ಬರು ಪ್ರೈಮರಿ ಸ್ಕೂಲ್​ನಿಂದಲೂ ಕ್ಲಾಸ್​ಮೇಟ್. ರಾಜಸ್ಥಾನದ ಬಾಲ್​​ಸೋರ್​​ನಲ್ಲಿ ಓದು ಆರಂಭಿಸಿದ್ದ ಇವರು, ಕಾಲೇಜಿಗೆ ಹೋಗಲು ಆರಂಭಿಸಿದ ಬಳಿಕ ಇಬ್ಬರಲ್ಲಿಯೂ ಪ್ರೀತಿ ಚಿಗುರಿತ್ತು. ಓದು ಮುಗಿದ ಬಳಿಕ ಮದುವೆ ಕೂಡ ಆಗಿದ್ದರು. ಆದರೆ, ಇವರಿಬ್ಬರ ಜಾತಿ ಬೇರೆ ಬೇರೆಯಾಗಿತ್ತು. ಇದೇ ಕಾರಣಕ್ಕೆ ಮಗಳ ‘ಲವ್ ಮ್ಯಾರೇಜ್​​’ಗೆ ತಂದೆಯ ಒಪ್ಪಿಗೆ ಇರಲಿಲ್ಲ.

ಮದ್ವೆಯಾಗಿ ಜಸ್ಟ್ 10 ದಿನ ಆಗಿತ್ತು..!

ಇಬ್ಬರು ಮದುವೆಯಾದ ಹತ್ತೇ ದಿನದಲ್ಲಿ ತರುಣಾ ಮನೆಯವರು ಈ ಜೋಡಿಯನ್ನು ಪೊಲೀಸರ ಸಹಾಯದಿಂದ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆಕೆಯನ್ನು ಒತ್ತಾಯ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಬರೋಬ್ಬರಿ 5 ತಿಂಗಳ ಕಾಲ ಇಬ್ಬರನ್ನೂ ದೂರ ಮಾಡಿದ್ದಾರೆ. ಮನೆಯೊಂದರಲ್ಲಿ ಪ್ರತ್ಯೇಕವಾಗಿರಿಸಿದ್ದ ಆಕೆಯಿಂದ ಮೊಬೈಲ್ ಫೋನ್​ ಕಸಿದುಕೊಂಡಿದ್ದಾರಂತೆ. ಜೊತೆಗೆ ಯಾರ ಸಂಪರ್ಕವೂ ಸಿಗದಂತೆ ಮಾಡಿ ಕೊಡಬಾರದ ಶಿಕ್ಷೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಟಾರ್ಚರ್ ಕೊಟ್ಟು ಎರಡನೇ ಮದುವೆ

ಕಳೆದ ಮೇ 1 ರಂದು ಜೀತೇಂದ್ರ ಜೋಶಿ ಜೊತೆ ಒತ್ತಾಯ ಪೂರ್ವಕವಾಗಿ ಮದ್ವೆ ಮಾಡ್ತಾರೆ. ಮದುವೆಯಾದ ಬೆನ್ನಲ್ಲೇ ಜೀತೇಂದ್ರ ಜೋಶಿ, ನನಗೆ ಟಾರ್ಚರ್ ಕೊಡುತ್ತಿದ್ದ ಎಂದು ತರುಣಾ ಆರೋಪಿಸಿದ್ದಾಳೆ. ಇತ್ತೀಚೆಗೆ ತರುಣಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ರಾಯ್​ಪುರದ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಬರಲಾಗಿತ್ತು. ಅಲ್ಲಿ, ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಮೊಬೈಲ್ ಪಡೆದು ತನ್ನ ಮೊದಲ ಪತ್ನಿಯನ್ನು ಸಂಪರ್ಕಿಸುತ್ತಾಳೆ. ಮಾತ್ರವಲ್ಲ, ಅದೇ ಮೊಬೈಲ್ ಫೋನ್​​ನಲ್ಲಿ ತಾನು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಟ್ವೀಟ್ ಮಾಡಿಸುತ್ತಾಳೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಶೇರ್ ಆಗುತ್ತದೆ. ಕೆಲವರು ಬಾಲಿವುಡ್ ನಟ ಸೋನು ಸೂದ್​ಗೂ ಟ್ಯಾಗ್ ಮಾಡಿದ್ದರು. ಕೊನೆಗೂ ರೊಚ್ಚಿಗೆದ್ದ ತರುಣಾ, ತನ್ನ ಎರಡನೇ ಪತ್ನಿ ವಿರುದ್ಧ ರೊಚ್ಚಿಗೇಳುತ್ತಾಳೆ. ಜೀತೇಂದ್ರ ಶರ್ಮಾಗೆ ರಾಖಿ ಕಟ್ಟಿ, ಇನ್ಮೇಲೆ ನೀನು ನನ್ನ ಗಂಡ ಅಲ್ಲ. ಅಣ್ಣ ಅಂತಾ ಹೇಳಿದ್ದಾಳೆ.

ಎರಡನೇ ಪತ್ನಿ ಹೇಳೋದೇನು..?

ನಾನು ಯಾವತ್ತೂ ಆಕೆಯನ್ನು ತಂಗಿ, ಆಂಟಿ ಎಂದು ಕರೆದಿಲ್ಲ. ಈ ಕೇಸ್​ನಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ಆಕೆ ಮಾಡ್ತಿದ್ದಾಳೆ. ಆಕೆಗೆ ನನ್ನ ಮದುವೆ ಆಗಲು ಇಷ್ಟವಿಲ್ಲದಿದ್ರೆ ಒಂದು ಮಾತು ಹೇಳಬಹುದಿತ್ತು. ನಾನು ಯಾವತ್ತೂ ಒತ್ತಾಯಮಾಡಿ ಮದುವೆ ಆಗಿಲ್ಲ. ನಾನೊಬ್ಬ ರೈತ. ಆಕೆಯ ಕುಟುಂಬಸ್ಥರು ನನಗೆ ಬರುವಂತೆ ಹೇಳಿದರು. ಆದರೆ ನಾನು ಹೋಗಲಿಲ್ಲ ಎಂದು ಜೋಶಿ ಹೇಳಿದ್ದಾರೆ.

ಸದ್ಯ ತರುಣಾಳನ್ನು ಪೊಲೀಸರು ರಕ್ಷಣೆ ಮಾಡಿದ್ದು ಛತ್ತೀಸ್​ಗಢದಲ್ಲಿರುವ ‘Sakhi One Stop Center’ ನಲ್ಲಿ ಆರೈಕೆ ಮಾಡಲಾಗುತ್ತಿದೆ. ಎರಡನೇ ಪತಿಗೆ ರಾಖಿ ಕಟ್ಟಿರುವ ತರುಣಾ, ಮೊದಲ ಪತ್ನಿ ಜೊತೆ ಬಾಳುವ ಆಸೆ ವ್ಯಕ್ತಪಡಿಸಿದ್ದಾಳೆ. ಆಕೆಯ ಅಭಿಲಾಷೆಯಂತೆ ಅಧಿಕಾರಿಗಳು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒತ್ತಾಯ ಮಾಡಿ ಮರು ಮದುವೆ.. ತಾಳಿ ಕಟ್ಟಿದ ಬೆನ್ನಲ್ಲೇ 2ನೇ ಪತ್ನಿಗೆ ರಾಖಿ ಕಟ್ಟಿ ಆಕ್ರೋಶ ಹೊರಹಾಕಿದ ಲೇಡಿ..!

https://newsfirstlive.com/wp-content/uploads/2023/06/MARRIAGE-1.jpg

Load More