newsfirstkannada.com

Jailer Collection: 450 ಕೋಟಿ ಬಾಚಿಕೊಂಡ ಜೈಲರ್​​.. ತಮಿಳುನಾಡಿನಲ್ಲೇ ಒಟ್ಟು ಕಲೆಕ್ಷನ್​ ಎಷ್ಟು ಗೊತ್ತಾ?

Share :

17-08-2023

    400 ಕೋಟಿ ರೂಪಾಯಿಗಳ ಗಡಿ ದಾಟಿದ ಜೈಲರ್​

    ಬಾಕ್ಸ್​ ಆಫೀಸ್​​ ಶೇಕ್​ ಮಾಡಿದ ಅಭಿಮಾನಿಗಳ ತಲೈವಾ

    ತಮಿಳಿನಲ್ಲಿ ವೇಗವಾಗಿ ಕಲೆಕ್ಷನ್​ ಮಾಡಿದ ದಿಲೀಪ್ ಕುಮಾರ್ ಮೂವಿ

‘ಜೈಲರ್’ ಅಭಿಮಾನಿಗಳ ತಲೈವಾ ರಜನಿಕಾಂತ್​ ನಟನೆಯ ಸಿನಿಮಾ. ಈ ಸಿನಿಮಾ ಬಿಡುಗಡೆಗೊಂಡು ಇಂದಿಗೆ 7 ದಿನಗಳಾಯ್ತು. ದಿನ ಕಳೆಯುತ್ತಿದ್ದಂತೆ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಈಗಾಗಲೇ ಈ ಸಿನಿಮಾ ವಿಶ್ವದಾದ್ಯಂತ 400 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ.

ಅಚ್ಚರಿ ಸಂಗತಿ ಎಂದರೆ ಸ್ವಾತಂತ್ರ್ಯ ದಿನಾಚರಣೆಯಂದು 200 ಕೋಟಿ ಕಲೆಕ್ಷನ್​ ಮಾಡಿದೆ. 7ನೇ ದಿನಕ್ಕೆ 15 ಕೋಟಿ ಕಲೆಕ್ಷನ್​ ಮಾಡಿರುವ ಈ ಸಿನಿಮಾ ಒಂದು ವಾರದಲ್ಲಿ 225.65 ಕೋಟಿ ರೂಪಾಯಿಯಷ್ಟು ಹಣವನ್ನು ಬಾಚಿಕೊಂಡಿದೆ.

ಅಂದಹಾಗೆಯೇ, ತಮಿಳು ಚಿತ್ರರಂಗದ ಹಿಸ್ಟರಿಯಲ್ಲೇ ಕೇವಲ ನಾಲ್ಕು ಚಿತ್ರಗಳು ಮಾತ್ರ ಈ ಹಿಂದೆ 400 ಕೋಟಿ ರೂಪಾಯಿಗಳ ಗಡಿ ದಾಟಿವೆ. ರಜನಿಕಾಂತ್ ಅವರ 2.O ಮತ್ತು ಕಬಾಲಿ, ಪೊನ್ನಿಯಿನ್ ಸೆಲ್ವನ್ ಮತ್ತು ವಿಕ್ರಂ ಸಿನಿಮಾಗಳು ಮಾತ್ರ 400 ಕೋಟಿ ಕಲೆಕ್ಷನ್​ ಕ್ಲಬ್ ಸೇರಿವೆ.

ಇನ್ನು ಸಿನಿಮಾ ವಿತರಕ ಮನೋಬಾಲ ವಿಜಯಬಾಲನ್​ ಪ್ರಕಾರ, ಜೈಲರ್​ ಸಿನಿಮಾ ವಿಶ್ವದಾದ್ಯಂತ 450/80 ಕೋಟಿ ಕಲೆಕ್ಷನ್​​ ಮಾಡಿದೆ. ಮೊದಲ ದಿನವೇ 95.78 ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳು ನಾಡಿನಲ್ಲೇ ಒಟ್ಟು 159.02 ಕೋಟಿ ಗಳಿಸಿದೆ ಎಂದು ಹೇಳಿದ್ದಾರೆ.

ಜೈಲರ್​ ಸಿನಿಮಾ 

‘ಜೈಲರ್’ಚಿತ್ರ ಯು/ಎ ಪ್ರಮಾಣ ಪತ್ರ ಪಡೆದ ಸಿನಿಮಾ. ಈ ಚಿತ್ರದ ಅವಧಿ 2 ಗಂಟೆ 49 ನಿಮಿಷಗಳಿದ್ದು, ಸುಮಾರು 3 ಗಂಟೆಗಳ ಕಾಲ ಸಿನಿಮಾವಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್​ ಸಿನಿಮಾ ಮೂಡಿಬಂದಿದೆ. ಅನಿರುದ್ಧ್ ಸಂಗೀತ ನೀಡಿದ್ದಾರೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jailer Collection: 450 ಕೋಟಿ ಬಾಚಿಕೊಂಡ ಜೈಲರ್​​.. ತಮಿಳುನಾಡಿನಲ್ಲೇ ಒಟ್ಟು ಕಲೆಕ್ಷನ್​ ಎಷ್ಟು ಗೊತ್ತಾ?

https://newsfirstlive.com/wp-content/uploads/2023/08/jailer-3.jpg

Load More