newsfirstkannada.com

Video: ಯೋಗಿ ಎಂಬ ಕಾರಣಕ್ಕೆ ಪಾದ ಮುಟ್ಟಿ ನಮಸ್ಕರಿಸಿದ್ದೇನೆ.. ಸ್ಪಷ್ಟನೆ ಕೊಟ್ಟ ಸೂಪರ್​ ಸ್ಟಾರ್​ ರಜನಿಕಾಂತ್​

Share :

22-08-2023

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ್ದ ತಲೈವಾ

    ಸನ್ಯಾಸಿಗಳ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯೋದು ನನ್ನ ಅಭ್ಯಾಸ

    ತನ್ನ ಬಗ್ಗೆ ಹುಟ್ಟಿಕೊಂಡಿದ್ದ ಚರ್ಚೆಗೆ ಇತಿಶ್ರೀ ಹಾಡಿದ ಸೂಪರ್​ ಸ್ಟಾರ್​ ರಜನಿಕಾಂತ್​

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ರಜನಿಕಾಂತ್ ಉತ್ತರ ಪ್ರದೇಶದ ಪ್ರವಾಸ ಕೈಗೊಂಡಿದ್ದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದರು. ಆದರೆ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರ-ವಿರೋಧದ ಮಾತುಗಳು ಕೇಳಿಬಂದಿತ್ತು. ರಜನಿ​ಕಾಂತ್​​​ ಅವರ ಕಿವಿಗೆ ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ನಟ ಸ್ಪಷ್ಟನೆ ನೀಡಿದ್ದಾರೆ.​

ತಲೈವಾ ರಜನಿಕಾಂತ್​ ‘ಯೋಗಿಗಳು ಅಥವಾ ಸನ್ಯಾಸಿಗಳ ಪಾದಗಳನ್ನು ಮುಟ್ಟಿ ಅವರ ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸ. ಅವರು ನನಗಿಂತ ಚಿಕ್ಕವರಾಗಿದ್ದರೂ ಅವರು ಯೋಗಿ ಎಂಬ ಕಾರಣಕ್ಕೆ ಇವರ ಪಾದಕ್ಕೆ ನಮಸ್ಕರಿಸಿದ್ದೇನೆ’ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಹುಟ್ಟಿಕೊಂಡಿದ್ದ ಚರ್ಚೆಗೆ ಇತಿಶ್ರೀ ಹಾಡಿದ್ದಾರೆ.

ಏನಿದು ಘಟನೆ?

ರಜಿನಿಕಾಂತ್ ಅವರು ಉತ್ತರ ಭಾರತದ ಪ್ರವಾಸದಲ್ಲಿದ್ದರು. ಬಾಬಾ ಗುಹೆ, ಬದ್ರಿನಾಥ್, ಹೃಷಿಕೇಶ, ಇನ್ನಿತರೆ ಧಾರ್ಮಿಕ ಸ್ಥಳಗಳ ದರ್ಶನ ಮುಗಿಸಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್​ರನ್ನು ಭೇಟಿಯಾದ ರಜಿನಿಕಾಂತ್, ಅವರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಜೈಲರ್​ ಸಿನಿಮಾ

ಜೈಲರ್ ಸಿನಿಮಾದ ತಮಿಳು ವರ್ಷನ್ 186.05 ಕೋಟಿ ಗಳಿಸಿದ್ರೆ, ತೆಲುಗಿನಲ್ಲಿ 46.99 ಕೋಟಿ ಗಳಿಸಿದೆ. ಕನ್ನಡ ಹಾಗೂ ಹಿಂದಿ 1.9 ಕೋಟಿ ಗಳಿಸಿದೆ. ನಿನ್ನೆಯವರೆಗೆ ಈ ಸಿನಿಮಾದ ಒಟ್ಟು ಕಲೆಕ್ಷನ್ 470.17 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಜೈಲರ್​ ಸಿನಿಮಾ ಮೂಡಿ ಬಂದಿದ್ದು ಅನಿರುದ್ಧ್ ಸಂಗೀತ ನೀಡಿದ್ದಾರೆ. ಇದಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ. ತಮನ್ನಾ, ಮೋಹನ್ ಲಾಲ್, ಶಿವರಾಜ್ ಕುಮಾರ್, ಜಾಕಿ ಶ್ರಾಫ್, ನಾಗೇಂದ್ರ ಬಾಬು, ರಮ್ಯಾ ಕೃಷ್ಣ, ಸುನೀಲ್, ವಸಂತ ರವಿ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಯೋಗಿ ಎಂಬ ಕಾರಣಕ್ಕೆ ಪಾದ ಮುಟ್ಟಿ ನಮಸ್ಕರಿಸಿದ್ದೇನೆ.. ಸ್ಪಷ್ಟನೆ ಕೊಟ್ಟ ಸೂಪರ್​ ಸ್ಟಾರ್​ ರಜನಿಕಾಂತ್​

https://newsfirstlive.com/wp-content/uploads/2023/08/RAJANIKANTH_CM_YOGI.webp

Load More