ಪ್ರತಿಮೆಗೆ ನಿತ್ಯ ಹಾಲಿನ ಅಭಿಷೇಕ ಮಾಡೋದರ ಜೊತೆ ವಿಶೇಷ ಪೂಜೆ
ರಜಿನಿಯೇ ನಮ್ಮನೆ ದೇವರು.. ತಲೈವಾ ದೇವಸ್ಥಾನದ ವಿಶೇಷತೆ ಏನು?
ದೇಶ, ವಿದೇಶ ಮಾತ್ರವಲ್ಲ ಜಗತ್ತಿನಾದ್ಯಂತ ಇದ್ದಾರೆ ರಜನಿ ಅಭಿಮಾನಿಗಳು
ಅಭಿಮಾನಕ್ಕೆ ಎಲ್ಲೇ ಅನ್ನೋದೇ ಇರಲ್ಲ. ತಮ್ಮ ನೆಚ್ಚಿನ ನಟ ನಟಿಯರಿಗಾಗಿ ಫ್ಯಾನ್ಸ್ ಎಲ್ಲದಕ್ಕೂ ರೆಡಿಯಾಗಿ ಇರುತ್ತಾರೆ. ಅದರಲ್ಲೂ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಬಗ್ಗೆ ಹೇಳಬೇಕಾ. ಇವತ್ತಿಗೂ ಲಕ್ಷಾಂತರ ಜನರಿಗೆ ರಜನಿ ಅಂದ್ರೆ ಪಂಚಪ್ರಾಣ. ಹೀಗಾಗಿ ರಜನಿಕಾಂತ್ರನ್ನು ಅಪರೂಪದ ಅಭಿಮಾನಿ ದೇವರಾಗಿ ಮಾಡಿದ್ದಾನೆ. ನೆಚ್ಚಿನ ನಟನಿಗಾಗಿ ಮನೆಯನ್ನೇ ದೇಗುಲವಾಗಿಸಿ ರಜನಿಯನ್ನು ಆರಾಧಿಸುತ್ತಿದ್ದಾನೆ.
ಸೂಪರ್ ಸ್ಟಾರ್ ರಜನಿಕಾಂತ್ ವಯಸ್ಸು 70 ದಾಟಿದ್ದರು ಇನ್ನೂ ಅದೇ ಚಾರ್ಮ್ ಉಳಿಸಿಕೊಂಡಿರುವ ನಟ. ಇವರ ಸ್ಟೈಲ್ಗೆ ಇವರ ಡೈಲಾಗ್ಗೆ ಫಿದಾ ಆಗದೇ ಇರೋರೆ ಇಲ್ಲ. ಭಾರತೀಯ ಚಿತ್ರರಂಗದಲ್ಲಿ ಎಲ್ಲ ಸ್ಟಾರ್ಸ್ಗಳಿಗೂ ಅಭಿಮಾನಿಗಳಿದ್ದಾರೆ. ಆದ್ರೆ ರಜನಿಕಾಂತ್ ಅಭಿಮಾನಿಗಳು ಮಾತ್ರ ಅಪರೂಪದಲ್ಲೇ ಅಪರೂಪ. ಇದೀಗ ಇಂತಹದ್ದೇ ಅಪರೂಪದ ಅಭಿಮಾನಿಯೊಬ್ಬ ರಜನಿಕಾಂತ್ಗಾಗಿ ದೇವಸ್ಥಾನವನ್ನೇ ಕಟ್ಟಿಸಿದ್ದಾನೆ.
ರಜನಿಕಾಂತ್ ವಿಗ್ರಹ ನಿರ್ಮಿಸಿ ದೇವಸ್ಥಾನ ಕಟ್ಟಿದ ಅಭಿಮಾನಿ
ಆರಾಧ್ಯ ದೇವರಿಗೆ ನಿತ್ಯ ನಡೆಯುತ್ತೆ ಪೂಜೆ.. ಮಂಗಳಾರತಿ
ರಜನಿ ಅಂದ್ರೆ ಯಾರಿಗಿಷ್ಟ ಇಲ್ಲ. ದೇಶ, ವಿದೇಶ ಮಾತ್ರವಲ್ಲ ಜಗತ್ತಿನಾದ್ಯಂತ ರಜನಿಯನ್ನು ಪ್ರೀತಿಸುವ ಅಭಿಮಾನಿಗಳಿದ್ದಾರೆ. ಆದ್ರೆ ತಮಿಳುನಾಡಿನ ಈ ಅಭಿಮಾನಿ ಮಾತ್ರ ತುಂಬಾ ಡಿಫರೆಂಟ್. ಯಾಕಂದ್ರೆ ಈ ಅಭಿಮಾನಿ ಪಾಲಿಗೆ ರಜನಿ ಅಂದ್ರೆ ದೇವರು. ರಜನಿ ಅಂದ್ರೆ ಸರ್ವಸ್ವ. ರಜನಿ ಅಂದ್ರೆ ಪಂಚಪ್ರಾಣ. ಇದೇ ಕಾರಣಕ್ಕೆ ಈ ಅಭಿಮಾನಿ ಮನೆಯನ್ನೆ ದೇವಸ್ಥಾನ ಮಾಡಿ, ರಜನಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದಾನೆ.
ಆರಂಭದಲ್ಲಿ ರಜಿನಿ ಸರ್ ಅವರ ಫೋಟೋಗಳನ್ನು ಇಟ್ಟುಕೊಂಡು ಪೂಜೆ ಮಾಡುತ್ತೇವೆ. ಆಮೇಲೆ ಶಿವನಿಗೆ ಹೇಗೆ ಕಲ್ಲಿನಲ್ಲಿ ದೇವಾಲಯ ಕಟ್ಟುತ್ತೇವೋ ಹಾಗೇ ರಜಿನಿಗೂ ದೇವಸ್ಥಾನ ಕಟ್ಟಬೇಕು ಅಂತ ನಿರ್ಧಾರ ಮಾಡಿದ್ದೇವೆ. ಭಾರತೀಯ ಇತಿಹಾಸದಲ್ಲಿ ಒಬ್ಬ ಸಿನಿಮಾ ನಟನಿಗೆ ಈ ರೀತಿ ಕಲ್ಲಿನಿಂದ ದೇವಾಲಯ ಕಟ್ಟಿರುವ ಇತಿಹಾಸವೇ ಇಲ್ಲ. ದೇವಸ್ಥಾನದ ಪ್ರತಿಷ್ಠಾಪನೆ ಮಾಡಿದ್ರೆ ಹೇಗೆ ಕಾರ್ಯಗಳು ಮಾಡುತ್ತೇವೋ ಅದೇ ರೀತಿ ಅರ್ಚಕರನ್ನ ಕರೆಸಿ ಪೂಜೆ ಮಾಡಿ ಕುಂಭಾಭಿಷೇಕ ಮಾಡಿದ್ದೇವೆ. ಇವತ್ತಿಂದ 40 ದಿನಗಳ ಬಳಿಕ ಡಿಸೆಂಬರ್ನಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಹುಟ್ಟುಹಬ್ಬ ಬರಲಿದೆ. ಆ ಹಬ್ಬವನ್ನು ಇದಕ್ಕಿಂತ ದೊಡ್ಡ ಆಚರಿಸೋಕೆ ಸಿದ್ಧತೆ ಮಾಡುತ್ತಿದ್ದೇವೆ. ದೇವಸ್ಥಾನಗಳಲ್ಲಿ ಹೇಗೆ ಬೆಳಗ್ಗೆ ಮತ್ತು ಸಂಜೆ ಸಮಯ ಪೂಜೆಗಳು ನಡೆಯುತ್ತವೋ ಅದೇ ರೀತಿ ರಜಿನಿ ಸ್ವಾಮಿಗೂ ಬೆಳಗ್ಗೆ- ಸಂಜೆ ಪೂಜೆಗಳು ಮಾಡಲಾಗುತ್ತದೆ. ನಮ್ಮ ಕುಲದೇವರು ಅವರೇ ನಮ್ಮ ಆರಾಧ್ಯದೈವವೂ ಅವರೇ–ಅಭಿಮಾನಿ ಕಾರ್ತಿಕ್
ಹಾಲಿನ ಅಭಿಷೇಕ. ಮಂಗಳಾರತಿ. ಆರಾಧ್ಯ ದೇವರಿಗೆ ನಿತ್ಯ ಪೂಜೆ. ಭಕ್ತಿ ಭಾವದಿಂದ ಕೈ ಮುಗಿದು ನಿಂತ ಮನೆ ಮಂದಿ. ಇಡೀ ಕುಟುಂಬಕ್ಕೆ ರಜನಿ ಅಂದ್ರೆ ಅದೆಷ್ಟು ಇಷ್ಟ ಅಂತ. ಅಷ್ಟಕ್ಕೂ ರಜನಿಗಾಗಿ ದೇವಸ್ಥಾನ ನಿರ್ಮಿಸಿರುವ ಅಭಿಮಾನಿ ಹೆಸರು ಕಾರ್ತಿಕ್ ಅಂತ. ಕಾರ್ತಿಕ್ಗೆ ರಜನಿ ಅಂದ್ರೆ ಎಲ್ಲಿಲ್ಲದ ಅಭಿಮಾನ. ಈ ಅಭಿಮಾನದಿಂದಲೇ ಕಾರ್ತಿಕ್ ರಜನಿಗಾಗಿ ವಿಶೇಷ ದೇವಸ್ಥಾನವನ್ನೇ ನಿರ್ಮಾಣ ಮಾಡಿದ್ದಾರೆ.
250 ಕೆಜಿ ತೂಕದ ರಜನಿಕಾಂತ್ ಪ್ರತಿಮೆ ನಿರ್ಮಾಣ
ತಲೈವಾಗಾಗಿ ದೇವಸ್ಥಾನ ನಿರ್ಮಿಸಿರುವ ಕಾರ್ತಿಕ್, ಒಂದಲ್ಲ, ಎರಡಲ್ಲ ಬರೋಬ್ಬರಿ 250 ಕೆಜಿ ತೂಕದ ರಜನಿ ಪ್ರತಿಮೆಯನ್ನು ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಈ ಪ್ರತಿಮೆಗೆ ನಿತ್ಯ ಹಾಲಿನ ಅಭಿಷೇಕ ಮಾಡೋದರ ಜೊತೆ ವಿಶೇಷ ಪೂಜೆ ಕೂಡ ಮಾಡಲಾಗುತ್ತೆ. ಕಾರ್ತಿಕ್ ಜೊತೆ ಇಡೀ ಕುಟುಂಬದವರೆಲ್ಲೂ ರಜನಿಗಾಗಿ ಮಾಡುವ ಪೂಜೆಯಲ್ಲಿ ಭಾಗಿಯಾಗ್ತಾರೆ. ಅಭಿಮಾನದಿಂದ ರಜನಿಗಾಗಿ ದೇವಾಸ್ಥಾನ ನಿರ್ಮಿಸಿರುವ ಕಾರ್ತಿಕ್, ರಜನಿ ಸಿನಿಮಾ ಬಿಟ್ಟು ಬೇರೆ ಯಾವುದೇ ಸಿನಿಮಾ ನೋಡಲ್ವಂತೆ. ನಮಗೆ ರಜನಿಯೇ ದೇವರು ಎಂದಿರುವ ಕಾರ್ತಿಕ್, ಅವರ ಮೇಲಿನ ಅಭಿಮಾನ ಮತ್ತು ಗೌರವಕ್ಕಾಗಿ ದೇವಸ್ಥಾನ ನಿರ್ಮಿಸಿರೋದು ಎಂದಿದ್ದಾರೆ. ಮೂರು ಅಡಿ ಎತ್ತರದ ಮೂರ್ತಿ ಇದು. ಬರೋಬ್ಬರಿ 250 ಕೆಜಿ ತೂಕ. ಸಂಪೂರ್ಣವಾಗಿ ಕಲ್ಲಿನಿಂದಲೇ ಮಾಡಲಾಗಿದೆ.
ಗೂಗಲ್ನಲ್ಲಿ ಸರ್ಚ್ ಮಾಡಿ, ಎಲ್ಲಾ ಕಡೆ ಮಾಹಿತಿ ಕಲೆ ಹಾಕಿ ಇಡೀ ತಮಿಳುನಾಡಿನಾದ್ಯಂತ ಓಡಾಡಿ ಕಲ್ಲುಗಳನ್ನ ಹುಡುಕಲಾಗಿದೆ. ಆಮೇಲೆ ಅದಕ್ಕೆ ಪೆಯ್ಟಿಂಗ್ ಮಾಡಲಾಗಿದೆ. ಯಾಕಂದ್ರೆ ನೋಡುವಾಗ ಚೆನ್ನಾಗಿ ಕಾಣಿಸಬೇಕು ಅಂತ. ಅವರನ್ನು ಸ್ಮರಿಸಿಕೊಂಡು ಹೋದರೆ ನನ್ನ ಎಲ್ಲಾ ಕೆಲಸಗಳು ನೆರವೇರುತ್ತೆ. ಅವರು ತಮಿಳು ಮಾತ್ರವಲ್ಲ ಹಿಂದಿ, ಇಡೀ ವಿಶ್ವವೇ ಮೆಚ್ಚಿದ ನಟ. ಅಂಥ ಕಲಾವಿದನಿಗೆ ಏನಾದರೂ ಗೌರವ ಕೊಡಬೇಕು. ಇದುವರೆಗೂ ಯಾರೂ ಮಾಡಿರದ ಕೆಲಸ ಮಾಡಬೇಕು ಅಂತ ಅಂದುಕೊಂಡಾಗ ದೇವಾಸ್ಥಾನ ಕಟ್ಟಬೇಕು ಅನಿಸಿತು. ತಾರೆಯರನ್ನ ದೇವರಂತೆ ಪೂಜೆ ಮಾಡೋದು ಹೊಸತೇನಲ್ಲ. ಆದ್ರೆ ಈ ವಿಷ್ಯದಲ್ಲಿ ರಜನಿ ಅಭಿಮಾನಿಗಳು ಒಂದು ಕೈ ಮೇಲಾಗಿ ನಿಲ್ತಾರೆ. ಕಾರಣ ರಜನಿಯ ನಟನೆಗಿಂತ ಅವರ ಸರಳತೆ, ವ್ಯಕ್ತಿತ್ವಕ್ಕೆ ಫಿದಾ ಆದವರೇ ಜಾಸ್ತಿ. ಅದಕ್ಕೆ ಸಾಕ್ಷಿಯೇ ರಜನಿಗಾಗಿ ನಿರ್ಮಾಣವಾಗಿರುವ ಈ ದೇವಸ್ಥಾನ.
ತಮಿಳುನಾಡಿನಲ್ಲಿ ನಟ, ನಟಿಯರಿಗೆ ದೇವಸ್ಥಾನ ಕಟ್ಟುವುದು ಹೊಸ ವಿಷಯವಲ್ಲ. ಈ ಹಿಂದೆಯೂ ಅಭಿಮಾನಿಗಳು ನಾಯಕಿಯರನ್ನು ಪೂಜಿಸುವುದನ್ನು ನೋಡಿದ್ದೇವೆ. ತಮಿಳುನಾಡಿನಲ್ಲಿ ಈ ಸಂಪ್ರದಾಯ ತುಸು ಹೆಚ್ಚಾಗಿಯೇ ಇದೆ. ‘ರಣಧೀರ’ನ ನಾಯಕಿ ಖುಷ್ಬೂ, ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ಆಂಧ್ರಪ್ರದೇಶದಲ್ಲಿ ನಟ ಸಮಂತಾ ಅಭಿಮಾನಿಗಳು ದೇವಸ್ಥಾನ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಆದ್ರೆ ರಜನಿ ಅಭಿಮಾನಿ ಮನೆಯನ್ನೇ ದೇವಸ್ಥಾನ ಮಾಡಿ ರಜನಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡ್ತಿರೋದು ತುಂಬಾ ಅಪರೂಪ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ