newsfirstkannada.com

×

ರಜಿನಿಕಾಂತ್ ಜೈಲರ್ ಸಿನಿಮಾದ ಖ್ಯಾತ ಖಳನಾಯಕ ಅರೆಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Share :

Published September 9, 2024 at 7:07am

Update September 9, 2024 at 7:18am

    ಸೂಪರ್​ ಸ್ಟಾರ್​ ರಜಿನಿಕಾಂತ್ ಸಿನಿಮಾದಲ್ಲಿ ಖಳನಾಯಕರಾಗಿ ಅಭಿನಯ

    ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟ ಅರೆಸ್ಟ್

    ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ರಾ ನಟ ವಿನಾಯಕನ್

ಸೂಪರ್​ ಸ್ಟಾರ್​ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಖಳನಾಯಕ ವಿನಾಯಕನ್​ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ವಿನಾಯಕನ್ ಬಂಧನದ ಸುದ್ದಿ ತಿಳಿದು ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗಳ ಮೊದಲ ಫೋಟೋ ರಿಲೀಸ್‌.. ಪುಟಾಣಿ ‘ದೀಪ್ಸ್’ ಹೆಸರೇನು ಗೊತ್ತಾ?

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಲಯಾಳಂ ಖ್ಯಾತ ನಟ ವಿನಾಯಕನ್​ ವಿಮಾನ ನಿಲ್ದಾಣದಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದರಂತೆ. ಅವರ ಕುಡಿದ ಅಮಲಿನಲ್ಲಿ ತೂರಾಡುತ್ತಿದ್ದ ಅವರನ್ನು ಕಂಡ ಭದ್ರತಾ ಪಡೆಗಳು ದೌಡಾಯಿಸಿದ್ದರು. ಇದೇ ವೇಳೆ ಭದ್ರತಾ ಸಿಬ್ಬಂದಿಗೆ ಸ್ಟಾರ್ ನಟ ಎಂದು ಗೊತ್ತಾಗಿದೆ.

ಆ ಕೂಡಲೇ ಮದ್ಯ ಸೇವಿಸಿ ವಿಮಾನ ನಿಲ್ದಾಣದಲ್ಲಿ ತುರಾಡುತ್ತಿದ್ದ ವಿನಾಯಕನ್ ಅವರನ್ನು ತಪಾಸಣೆಗೆ ಒಳಪಡಿಸಲು ಮುಂದಾಗಿದ್ದಾರಂತೆ. ಆದರೆ ಈ ವೇಳೆ ನಟ CISF (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್) ಜೊತೆಗೆ ವಾಗ್ವಾದ ನಡೆಸಿ, ಭದ್ರತಾ ತಪಾಸಣೆಗೆ ಅಡ್ಡಿಪಡಿಸಿದ್ದರಂತೆ.

ಸದ್ಯ ವಿನಾಯಕನ್ ಠಾಣೆಗೆ ಕರೆದೊಯ್ದಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಸ್ಟಾರ್ ನಟ ಕುಡಿದು ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಈ ಘಟನೆ ವೇಳೆ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಜನರು ಹಾಗೂ ಅಭಿಮಾನಿಗಳು ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜಿನಿಕಾಂತ್ ಜೈಲರ್ ಸಿನಿಮಾದ ಖ್ಯಾತ ಖಳನಾಯಕ ಅರೆಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

https://newsfirstlive.com/wp-content/uploads/2024/09/VINAYAKAN.jpg

Load More