‘ತಲೈವಾ’ ನಂಬುವ ಈ ಶಕ್ತಿ ಸ್ಥಳ ಯಾವುದು ಗೊತ್ತಾ..?
ಕೊನೆಗೂ ಬಿಗ್ ಅಪ್ಡೇಟ್ ಕೊಟ್ಟ ರಜಿನಿಕಾಂತ್
ಐಶ್ವರ್ಯ ಆ್ಯಕ್ಷನ್ ನಿರ್ದೇಶನದ ಚಿತ್ರದ ಹೆಸರೇನು..?
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಬ್ಯುಸಿ ಶೆಡೂಲ್ಡ್ನಲ್ಲೂ ಜೈಲರ್ ಸಿನಿಮಾದ ಶೂಟಿಂಗ್ನಲ್ಲಿ ಹಂತ ಹಂತವಾಗಿ ತೊಡಗಿಕೊಳ್ಳುತ್ತಿದ್ದಾರೆ. ಇದರ ನಡುವೆಯು ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಮ್ ಸಿನಿಮಾದಲ್ಲಿ ರಜನಿಕಾಂತ್ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ವೇಳೆ ರಜನಿಕಾಂತ್ ಅವರು ಪ್ರಸಿದ್ಧ ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಂಡಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಇರುವ ಪ್ರಸಿದ್ಧ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಇವತ್ತು ರಜನಿಕಾಂತ್ ಭೇಟಿ ಕೊಟ್ಟು ದೇವರ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆಗ ದೇವಾಲಯದ ಅರ್ಚಕರು ನಟನಿಗೆ ಹೂ ಮಾಲೆ ಹಾಕಿದರು. ಲಾಲ್ ಸಲಾಮ್ ಸಿನಿಮಾ ಶೂಟಿಂಗ್ ತಿರುವಣ್ಣಾಮಲೈನಲ್ಲಿ ನಡೆಯುತ್ತಿತ್ತು. ಹೀಗಾಗಿ ಹತ್ತಿರದಲ್ಲಿಯೇ ಇದ್ದ ದೇವಾಲಯಕ್ಕೆ ಹೋಗಿ ಸೂಪರ್ ಸ್ಟಾರ್ ದೇವರ ದರ್ಶನ ಪಡೆದುಕೊಂಡರು ಎಂದು ತಿಳಿದು ಬಂದಿದೆ.
ಇನ್ನು ಲಾಲ್ ಸಲಾಮ್ ಸಿನಿಮಾದಲ್ಲಿ ರಜನಿಕಾಂತ್ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ಎಂದರೆ ಈ ಸಿನಿಮಾವನ್ನು ಸ್ವತಹ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸುಬಾಸ್ಕರನ್ (ಲೈಕಾ ಪ್ರೊಡಕ್ಷನ್ಸ್) ಬಂಡವಾಳ ಹೂಡಿದ್ದು ಸಿನಿಮಾದ ಮುಖ್ಯ ಪಾತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅವರು ಅಭಿನಯ ಮಾಡುತ್ತಿದ್ದಾರೆ.
ಇನ್ನು ಸಿನಿಮಾಕ್ಕೆ AR ರೆಹಮಾನ್ ಅವರು ಸಂಗೀತ ನೀಡುತ್ತಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಿದೆ. ಐಶ್ವರ್ಯ 2012ರಲ್ಲಿ ವೈ ರಾಜ ವೈ ಎನ್ನುವ ಸಿನಿಮಾ ನಿರ್ದೇಶನ ಮಾಡಿ ಹೆಸರು ಪಡೆದಿದ್ದರು. ಈ ಸಿನಿಮಾದಲ್ಲಿ ತಮಿಳು ನಟ ಧನುಷ್ ಅಭಿನಯಿಸಿದ್ದರು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
#Rajinikanth done swami darshan at Tiruvannamalai 👍👍#LalSalaam #Jailer #Tiruvannamalai pic.twitter.com/TLR9D9lqWT
— Dhivakar G (@Dhivakar_25) July 1, 2023