newsfirstkannada.com

VIDEO: ರಾಯರಮಠದಲ್ಲೂ ರಜನಿಕಾಂತ್‌; ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕೋವಾಗ ‘ಕಬಾಲಿ’ ಸ್ಟೈಲ್‌ ಹೇಗಿದೆ ನೋಡಿ

Share :

29-08-2023

    ಚಾಮರಾಜಪೇಟೆ ರಾಯರ ಮಠಕ್ಕೂ ರಜನಿಕಾಂತ್ ದಿಢೀರ್ ಭೇಟಿ

    ಮೊದಲು ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟು ಬಂದ ಸೂಪರ್ ಸ್ಟಾರ್

    ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಿದ ಕಬಾಲಿ ಸ್ಟೈಲ್ ಹೇಗಿದೆ ನೋಡಿ

ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಡನ್ ಆಗಿ ಬೆಂಗಳೂರಿಗೆ ಭೇಟಿ ಕೊಟ್ಟು ಸಖತ್ ಸರ್ಪ್ರೈಸ್ ಕೊಟ್ಟಿದ್ದಾರೆ. ಮೊದಲು ಜಯನಗರದ ಬಸ್ ಡಿಪೋಗೆ ಭೇಟಿ ಕೊಟ್ಟು ಬಿಎಂಟಿಸಿ ಸಿಬ್ಬಂದಿ ಜೊತೆ ಕಾಲ ಕಳೆದಿದ್ರು. ರಜನಿಕಾಂತ್ ಬೆಂಗಳೂರು ರೌಂಡ್ಸ್ ಇಷ್ಟೇ ಮುಗಿದಿಲ್ಲ. ಜಯನಗರ ಬಿಎಂಟಿಸಿ ಬಸ್ ಡಿಪೋಗೆ ಭೇಟಿ ಕೊಟ್ಟ ಬಳಿಕ ಸೂಪರ್ ಸ್ಟಾರ್ ರಜನಿ ಚಾಮರಾಜಪೇಟೆಯ ರಾಯರ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ರಾಯರ ಮಠದಲ್ಲಿ ವಿಶೇಷ ಅನುಗ್ರಹಕ್ಕೂ ಪಾತ್ರರಾಗಿದ್ದಾರೆ.

ಚಾಮರಾಜಪೇಟೆ ರಾಯರ ಮಠಕ್ಕೆ ಭೇಟಿ ಕೊಟ್ಟಿದ್ದ ರಜನಿಕಾಂತ್ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ರಾಯರಿಗೆ ಪೂಜೆ ಸಲ್ಲಿಸುವ ವೇಳೆ ರಜನಿಕಾಂತ್ ತಮ್ಮ ಡಿಫರೆಂಟ್‌ ಸ್ಟೈಲ್ ಪ್ರದರ್ಶಿಸಿದ್ದಾರೆ. ಮಂಗಳಾರತಿ ತಟ್ಟೆಗೆ ಸಾಮಾನ್ಯವಾಗಿ ಎಲ್ಲರೂ ತಮ್ಮ ಜೇಬಿನಿಂದ ಹಣ ತೆಗೆದು ಕಾಣಿಕೆ ಹಾಕುತ್ತಾರೆ. ಆದರೆ ರಾಯರ ಮಠದಲ್ಲಿ ರಜನಿಕಾಂತ್ ತಮ್ಮ ಶರ್ಟ್‌ನಲ್ಲಿ ಮಡಿಚಿಟ್ಟ ಹಣವನ್ನು ತೆಗೆದು ಮಂಗಳಾರತಿ ತಟ್ಚೆಗೆ ಹಾಕಿದ್ದಾರೆ. ರಾಯರ ಮಠದಲ್ಲಿ ರಜನಿಕಾಂತ್ ಪೂಜೆ ಸಲ್ಲಿಸಿದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಬಾಲಿಯ ಸೂಪರ್‌ ಸ್ಟೈಲ್ ಅನ್ನು ಕಾಣಬಹುದಾಗಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಚಾಮರಾಜಪೇಟೆ ರಾಯರ ಮಠಕ್ಕೂ ಬಹಳಷ್ಟು ವರ್ಷಗಳ ನಂಟಿದೆ. ರಜನಿಕಾಂತ್ ಕಂಡಕ್ಟರ್ ಆಗೋದಕ್ಕೂ ಮುಂಚೆಯಿಂದಲೂ ಇಲ್ಲಿಗೆ ಬರುತ್ತಿದ್ದರಂತೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಾಗಲೂ ರಜನಿಕಾಂತ್ ಈ ರಾಯರ ಮಠಕ್ಕೆ ಭೇಟಿ ಕೊಟ್ಟು ಅನುಗ್ರಹ ಪಡೆದಿದ್ದಾರೆ ಎನ್ನಲಾಗಿದೆ. ರಾಯರ ಮಠದ ಆಡಳಿತಾಧಿಕಾರಿ ವೆಂಕಣ್ಣ ಆಚಾರ್ ಅವರು ಈ ಬಗ್ಗೆ ನ್ಯೂಸ್‌ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: PHOTOS: ಜಯನಗರದಲ್ಲಿ ರಜನಿಕಾಂತ್​! ತಾನು ಕೆಲಸ ಮಾಡುತ್ತಿದ್ದ ಬಸ್​ ಡಿಪೋಗೆ ಭೇಟಿ ನೀಡಿದ ತಲೈವಾ

ನ್ಯೂಸ್ ಫಸ್ಟ್ ಜೊತೆ ಮಾತನಾಡಿರುವ ರಾಯರ ಮಠದ ಆಡಳಿತಾಧಿಕಾರಿ ವೆಂಕಣ್ಣ ಆಚಾರ್ ಅವರು ಇವತ್ತು ರಜನಿಕಾಂತ್ ಅವರು ಇಲ್ಲಿಗೆ ಬರ್ತಾರೆ ಅಂತಾ ಯಾರಿಗೂ ಗೊತ್ತಿರಲಿಲ್ಲ. ಸಡನ್ ಆಗಿ ಬಂದು ರಾಯರ ದರ್ಶನ ಪಡೆದು ಹೋಗಿದ್ದಾರೆ. ಸುಮಾರು 15 ನಿಮಿಷ ರಜನಿಕಾಂತ್ ಅವರು ಮಠದಲ್ಲಿ ಇದ್ದರು. ಒಬ್ಬರೇ ಆಗಮಿಸಿದ್ದು ವಿಶೇಷ ಅರ್ಚನೆ ಮಾಡಿಸಿದ್ದಾರೆ ಎಂದಿದ್ದಾರೆ.

ಬೆಂಗಳೂರಿಗೆ ಬಂದಾಗ ಹಲವು ಬಾರಿ ಇಲ್ಲಿಗೆ ಬರುತ್ತಾರೆ. ರಾಯರ ಮೇಲೆ ರಜನಿಕಾಂತ್‌ ಅವರಿಗೆ ವಿಶೇಷವಾದ ಗೌರವ ಇದೆ. ಕಳೆದ 3 ವರ್ಷಗಳಿಂದ ಅವರು ಇಲ್ಲಿಗೆ ಬಂದಿರಲಿಲ್ಲ. ಇಂದು ಮಠಕ್ಕೆ ಭೇಟಿ ಕೊಟ್ಟು ರಾಯರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದು ಮಠದ ಆಡಳಿತಾಧಿಕಾರಿ ವೆಂಕಣ್ಣ ಆಚಾರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ರಾಯರಮಠದಲ್ಲೂ ರಜನಿಕಾಂತ್‌; ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕೋವಾಗ ‘ಕಬಾಲಿ’ ಸ್ಟೈಲ್‌ ಹೇಗಿದೆ ನೋಡಿ

https://newsfirstlive.com/wp-content/uploads/2023/08/WhatsApp-Image-2023-08-29-at-2.37.19-PM.jpeg

Load More