newsfirstkannada.com

ರಜನಿ ಸಿನಿಮಾಗೆ ಉತ್ತರ ಪ್ರದೇಶ ಸಿಎಂ ಸಾಥ್​​; ನಾಳೆ ‘ಜೈಲರ್’​ ನೋಡಲಿದ್ದಾರೆ ಯೋಗಿ ಆದಿತ್ಯನಾಥ್​​

Share :

18-08-2023

  ಜೈಲರ್​​​​ ಅಬ್ಬರಕ್ಕೆ ಬಾಕ್ಸ್​ ಆಫೀಸ್​ ಪೀಸ್​​ ಪೀಸ್​​

  ರಿಲೀಸ್​​ ಆದ 8 ದಿನಕ್ಕೆ ಜೈಲರ್ ಕಲೆಕ್ಷನ್​ ಎಷ್ಟು ಗೊತ್ತಾ?

  ಜೈಲರ್​​ ಸಿನಿಮಾ ನೋಡಲು ಸಜ್ಜಾದ ಸಿಎಂ ಆದಿತ್ಯನಾಥ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿದೆ. ಈ ಚಿತ್ರ ರಿಲೀಸ್​ ಆಗಿ 8 ದಿನಗಳಾಯ್ತು. ದಿನ ಕಳೆಯುತ್ತಿದ್ದಂತೆ ಜೈಲರ್ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಸೂಪರ್ ಸ್ಟಾರ್ ನಟನೆಗೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಇದೀಗ ಸೂಪರ್​ ಸ್ಟಾರ್​​ ರಜನಿಕಾಂತ್ ಅವರ ಜೊತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಿನಿಮಾ ವೀಕ್ಷಿಸಲಿದ್ದಾರಂತೆ.

ಇನ್ನು ಈ ಬಗ್ಗೆ ಖುದ್ದಾಗಿ ನಟ ರಜನಿಕಾಂತ್ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ ಲಕ್ನೋಗೆ ಬಂದಿದ್ದಾರೆ. ನಾನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇನೆ. ನಾನು ನಾಳೆ ಅವರೊಂದಿಗೆ ಜೈಲರ್ ಸಿನಿಮಾ ವೀಕ್ಷಿಸಲಿದ್ದೇನೆ ಎಂದು ಸೂಪರ್​ ಸ್ಟಾರ್​ ರಜನಿಕಾಂತ್ ಹೇಳಿದ್ದಾರೆ.

ಸದ್ಯ ಸೂಪರ್​ ಸ್ಟಾರ್​ ರಜಿನಿಕಾಂತ್ ನಟನೆಯ ಜೈಲರ್​​ ಚಿತ್ರವು ಆಗಸ್ಟ್​​ 10ರಂದು ವಿಶ್ವದಾದ್ಯಂತ ರಿಲೀಸ್​ ಆಗಿತ್ತು. ಇನ್ನು ಭಾರತದಲ್ಲಿ ಈ ಚಿತ್ರ ರಿಲೀಸ್​ ಆದ ಮೊದಲ ದಿನ 48.35 ಕೋಟಿ, ಎರಡನೇ ದಿನ 25.75, ಮೂರನೇ ದಿನ 34.35, ನಾಲ್ಕನೇ ದಿನ 42.20, ಐದನೇ ದಿನ 23.55, ಆರನೇ ದಿನ 207.15, ಏಳನೇ ದಿನ 15, ಎಂಟನೇ ದಿನ 235.65. ಒಟ್ಟಾರೆಯಾಗಿ ಇಡೀ ವಿಶ್ವದಾದ್ಯಂತ ಎಂಟು ದಿನದ ಕಲೆಕ್ಷನ್ 470.17 ಕೋಟಿ ಗಳಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜನಿ ಸಿನಿಮಾಗೆ ಉತ್ತರ ಪ್ರದೇಶ ಸಿಎಂ ಸಾಥ್​​; ನಾಳೆ ‘ಜೈಲರ್’​ ನೋಡಲಿದ್ದಾರೆ ಯೋಗಿ ಆದಿತ್ಯನಾಥ್​​

https://newsfirstlive.com/wp-content/uploads/2023/08/jailar-1.jpg

Load More