newsfirstkannada.com

ಸರ್ಕಾರಿ ಆಸ್ಪತ್ರೆಗೆ ಹೋಗಲು ಮೂಗು ಮುರಿಯೋ ಜನ ಓದಲೇಬೇಕಾದ ಸ್ಟೋರಿ! ಕಾರಣವೇನು?

Share :

Published July 17, 2023 at 10:14pm

    ರೋಗಿಗಳಿಗೆ ಸೋಂಕು ಮುಕ್ತವಾಗಿ ಚಿಕಿತ್ಸೆ ಕೊಡುವ ಸದುದ್ದೇಶ

    ಹೊಸ ಟೆಕ್ನಾಲಜಿ ಪರಿಚಯ ಮಾಡುತ್ತಿದೆ ರಾಜೀವ್ ಗಾಂಧಿ ಆಸ್ಪತ್ರೆ

    ರೋಗಿಯ ಮನಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತೆ ಈ ರೋಬೋ

ಇದು ಆಧುನಿಕತೆಯ ಆಲಿಂಗನ ಮಾಡಿ ಕೊಂಡಿರುವ ಯುಗ. ತಂತ್ರಜ್ಞಾನದ ಪರಮಾವಧಿ ತಲುಪಿರುವ ತಾಂತ್ರಿಕ ಯುಗ. ಇದೀಗ ಜನರಿಗಾಗಿ ಜನರಿಗೋಸ್ಕರ ಸರ್ಕಾರಿ ಆಸ್ಪತ್ರೆಯಲ್ಲಿ ಕೂಡ ಈಗ ಟೆಲಿ ರೋಬೋ ಟೆಕ್ನಾಲಜಿ ಪರಿಚಯ ಮಾಡಲಾಗಿದೆ.

ಸಿಲಿಕಾನ್ ಸಿಟಿಯ ಪ್ರಸಿದ್ಧ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆ ICU ಅಲ್ಲಿರುವ ರೋಗಿಗಳಿಗೆ ಸೋಂಕು ಮುಕ್ತವಾಗಿ ಚಿಕಿತ್ಸೆ ಕೊಡುವ ಸದುದ್ದೇಶದಿಂದ ಈ ಟೆಲಿ ರೋಬೋ ಟೆಕ್ನಾಲಜಿ ಬಳಕೆ ಮಾಡಲು ಶುರು ಮಾಡಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸೀಮಿತ ಬೆಡ್‌ಗೆ ಈ ತಂತ್ರಜ್ಞಾನ ಬಳಕೆ ಮಾಡಿ ಆಸ್ಪತ್ರೆ ಯಶಸ್ವಿ ಆಗಿತ್ತು. ಆ ಬಳಿಕ ಈಗ ಸಂಪೂರ್ಣ ICU ಘಟಕಕ್ಕೆ ಈ ಟೆಲಿ ರೋಬೋ ಟೆಕ್ನಾಲಜಿ ಬಳಕೆ ಮಾಡಲಾಗ್ತಿದೆ.

ಹೌದು, ಈ ರೋಬೋಗೆ ಡೈರಕ್ಷನ್ ಕೊಡೋದಕ್ಕೆ ಪ್ರತ್ಯೇಕ ರೂಂ ಇರುತ್ತೆ. ಅಲ್ಲೊಬ್ಬ ಆಪರೇಟರ್ ಕೂಡ ಇರ್ತಾರೆ. ಅವರ ಮೂಲಕ ತಜ್ಞ ವೈದ್ಯರು ರೋಗಿಗಳ ಆರೋಗ್ಯ ಕ್ಷೇಮ ವಿಚಾರಿಸುತ್ತಾರೆ. ಕೆಲವೊಮ್ಮೆ ರೋಗಿಗಳಿಗೆ ತಮ್ಮ ಮನೆಯವರೆಲ್ಲರ ಜೊತೆ ಮಾತಾಡಬೇಕು ಅನ್ನೋ ಆಸೆಯಾಗುತ್ತದೆ. ಆ ಸಂದರ್ಭದಲ್ಲಿ ಯಾರೋ ಒಬ್ಬರನ್ನಷ್ಟೇ ತುರ್ತು ಘಟಕದಲ್ಲಿ ಅಲೋ ಮಾಡಲಾಗುತ್ತೆ. ಆಗ ರೋಗಿಗಳ ಮನೋ ಬಲ ಕುಗ್ಗುವ ಸಾಮರ್ಥ್ಯ ಇರುತ್ತೆ. ಈ ಕಾರಣಕ್ಕೆ ರೋಗಿಯ ಮನಸ್ಥೈರ್ಯ ಹೆಚ್ಚಿಸುವ ಕೆಲಸ ಕೂಡ ರೋಬೋ ಮೂಲಕ ಆಗುತ್ತೆ.

ಇನ್ನು, ಎಷ್ಟೋ ಜನ ಕೆಲ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅಸಡ್ಡೆ, ಆಸ್ಪತ್ರೆಯ ಸೌಕರ್ಯದ ಕೊರತೆಯಿಂದ ಆಸ್ಪತ್ರೆ ಹೋಗಲು ಮೂಗು ಮುರಿಯುತ್ತಾರೆ. ಅಂತಹ ಅಭಿಪ್ರಾಯಗಳ ಮಧ್ಯೆ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆ ದಿನದಿಂದ ದಿನಕ್ಕೆ ವಿಭಿನ್ನವಾದ ತಂತ್ರಜ್ಞಾನ ಬಳಕೆ ಮಾಡಿ ಜನರಿಗೆ ವಿಶೇಷವಾದ ಸೌಲಭ್ಯ ಒದಗಿಸಿ ಕೊಟ್ಟು ಕಾರ್ಯ ನಿರ್ವಹಿಸುತ್ತಿರುವ ಪರಿ ನಿಜಕ್ಕೂ ಶ್ಲಾಘನೀಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಆಸ್ಪತ್ರೆಗೆ ಹೋಗಲು ಮೂಗು ಮುರಿಯೋ ಜನ ಓದಲೇಬೇಕಾದ ಸ್ಟೋರಿ! ಕಾರಣವೇನು?

https://newsfirstlive.com/wp-content/uploads/2023/07/rajiv.jpg

Load More