ಒಬ್ಬೊಬ್ಬ ಗಂಡನ ಬಳಿ ಒಂದೊಂದು ಹೆಸರಿನಲ್ಲಿ ಮದುವೆ ಆಗಿದ್ದಳು
ಹೆಂಡತಿ ಕಾಣೆಯಾಗಿದ್ದಾಳೆ ಎಂದು ಓಡೋಡಿ ಬಂದ ಗಂಡಂದಿರು
ಡಾಲಿ ಕಿ ಡೋಲಿ ಸಿನಿಮಾದಲ್ಲಿ ನಡೆದಿದ್ದ ಮೋಸ ಇಲ್ಲಿ ರಿಯಲ್
ರಜೌರಿ: ಮದುವೆ ಆಗೋದು ಗಂಡನ ಬಿಟ್ಟು ಪರಾರಿ ಆಗೋದು. ಮದ್ವೆಯಾದ 10 ದಿನಕ್ಕೆ ಮತ್ತೊಬ್ಬ ಯುವಕನ ಜೊತೆ ಮತ್ತೊಂದು ಮ್ಯಾರೇಜ್. ಅಬ್ಬಾ.. ಒಬ್ಬರು ಇಬ್ಬರಲ್ಲ ಬರೋಬ್ಬರಿ 27 ಮಂದಿಗೆ ಹೀಗೆ ಮೋಸ ಮಾಡಿರೋ ಪ್ರಕರಣ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಾಲಿವುಡ್‌ನ ಡಾಲಿ ಕಿ ಡೋಲಿ ಕಾಮಿಡಿ ಸಿನಿಮಾದಲ್ಲಿ ನಟಿ ಸೋನಂ ಕಪೂರ್ ಹೀಗೆ ಮದುವೆಯಾಗಿ ಹಲವಾರು ಪುರುಷರಿಗೆ ಮೋಸ ಮಾಡೋ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ರೀತಿಯ ರಿಯಲ್ ಘಟನೆ ಇದಾಗಿದ್ದು, ಮೋಸಗಾತಿ ಯಾರ ಕೈಗೂ ಸಿಗದೆ ತಪ್ಪಿಸಿಕೊಂಡಿದ್ರೆ, ಪಾಪ ಮದುವೆಯಾದ ಡಜನ್‌ಗಟ್ಟಲೇ ಗಂಡಂದಿರು ಪೊಲೀಸ್ ಠಾಣೆಯಲ್ಲಿ ಪರದಾಡುತ್ತಿದ್ದಾರೆ.
ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಒಬ್ಬಳೇ ಯುವತಿಯನ್ನು ಹಲವು ಪುರುಷರು ಮದುವೆಯಾಗಿ ಮೋಸ ಹೋಗಿದ್ದಾರೆ. ಈ ಫ್ರಾಡ್ ಮ್ಯಾರೇಜ್ ಬೆಳಕಿಗೆ ಬಂದಿದ್ದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಪೊಲೀಸ್ ಠಾಣೆಗೆ ಕಾಶ್ಮೀರದ ಹತ್ತಾರು ಯುವಕರು ತನ್ನ ಹೆಂಡತಿ ಕಾಣೆಯಾಗಿದ್ದಾಳೆ ದಯವಿಟ್ಟು ಹುಡುಕಿಕೊಡಿ ಎಂದು ದೂರು ಕೊಡಲು ಬರುತ್ತಾರೆ. ಆಗ ಪೊಲೀಸರು ಕಾಣೆಯಾದ ಮಹಿಳೆಯ ಫೋಟೋ ನೋಡಿದಾಗ ಒಬ್ಬಳೇ ಎಲ್ಲರನ್ನೂ ಮದುವೆಯಾಗಿ ಮೋಸ ಹೋಗಿರೋದು ಗೊತ್ತಾಗಿದೆ.
ಒಬ್ಬೊಬ್ಬ ಗಂಡನ ಬಳಿ ಒಂದೊಂದು ಹೆಸರಿನಲ್ಲಿ ಮದುವೆಯಾಗಿರೋ ಈಕೆಯ ಅಸಲಿ ಹೆಸರೇ ಯಾರಿಗೂ ಗೊತ್ತಿಲ್ಲ. ಈ ಮಹಿಳೆ ಮದುವೆಯಾದ ಜಸ್ಟ್ 10 ದಿನಕ್ಕೆ ಗಂಡನ ಬಿಟ್ಟು ಪರಾರಿಯಾಗಿದ್ದಾಳೆ. ಹೀಗೆ ಪ್ರತಿ ಬಾರಿ ಕಾಣೆಯಾದಾಗಲೂ ಮೋಸ ಹೋದ ಗಂಡನ ಕೈಗೆ ಈಕೆ ಇಲ್ಲಿಯವರೆಗೂ ಸಿಕ್ಕೇ ಇಲ್ಲ ಅನ್ನೋದು ಮತ್ತೊಂದು ವಿಚಿತ್ರ ಸಂಗತಿಯಾಗಿದೆ.
ಬುದ್ಗಾಮ್ ಜಿಲ್ಲೆಯ ಅಬ್ದುಲ್ ಅಹದ್ ಮಿರ್ ಎನ್ನುವವರು ಕೆಲವು ತಿಂಗಳ ಹಿಂದೆ ಮದುವೆ ದಲ್ಲಾಳಿಯೊಬ್ಬರನ್ನು ಸಂಪರ್ಕಿಸಿದ್ದಾರೆ. ಅವರು ತಮ್ಮ ಮಗನ ಮದುವೆಗಾಗಿ ಹುಡುಗಿಯನ್ನ ಹುಡುಕುತ್ತಿದ್ದರು. ಮದುವೆ ದಲ್ಲಾಳಿ ಇವರಿಗೆ ಈ ಮಹಿಳೆಯ ಫೋಟೋ ತೋರಿಸಿದ್ದಾರೆ. ಫೋಟೋ ನೋಡಿದ ಅಬ್ದುಲ್ ಅಹದ್ ಮಿರ್ ಈಕೆಯನ್ನು ತನ್ನ ಮಗನಿಗೆ ಮದುವೆ ಮಾಡಲು ಒಪ್ಪಿದ್ದಾರೆ. ಆ ದಲ್ಲಾಳಿ ಮದುವೆ ಮಾಡಿಸಲು 2 ಲಕ್ಷ ರೂಪಾಯಿಯನ್ನು ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾನೆ.
ದಲ್ಲಾಳಿಯನ್ನು ನಂಬಿ ಲಕ್ಷ, ಲಕ್ಷ ದುಡ್ಡು ಕೊಟ್ಟಿದ್ದ ಅಬ್ದುಲ್ ಅಹದ್ ಮಿರ್ ಅವರು ತನ್ನ ಮಗನ ಮದುವೆಗೆ ತಯಾರಿ ಮಾಡಿಕೊಂಡಿದ್ದಾರೆ. ದಲ್ಲಾಳಿಯ ನೇತೃತ್ವದಲ್ಲೇ ಮದುವೆಯೂ ನಡೆದು ಹುಡುಗಿಯನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮದುವೆ ಆದ ಕೆಲವು ದಿನಗಳ ಬಳಿಕ ಅವಳು ತನ್ನ ಗಂಡನಿಗೆ ಆಸ್ಪತ್ರೆಗೆ ಹೋಗಬೇಕು ಎಂದು ಹೇಳಿದ್ದಾಳೆ. ಆಕೆಯ ಗಂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸುವಾಗ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ.
ಇದು ಕೇವಲ ಒಬ್ಬರು ಹೇಳಿರೋ ಮೋಸದ ಕಥೆ. ಹೀಗೆ ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಹಲವರು ಈಕೆಯ ಮದುವೆ ಮೋಸಕ್ಕೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಈ ಯುವತಿ ನಕಲಿ ಹೆಸರಿನಲ್ಲಿ ಮದುವೆಯಾದ 10 ದಿನಕ್ಕೆ ರಾತ್ರೋರಾತ್ರಿ ಪರಾರಿಯಾಗಿದ್ದಾಳೆ. 27 ಗಂಡಂದಿರು ಈಕೆಯ ಮೋಸದ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ