newsfirstkannada.com

ಮಗ ರಾಕೇಶ್​​ 7ನೇ ಪುಣ್ಯ ತಿಥಿ; ಸಿಎಂ ಸಿದ್ದರಾಮಯ್ಯ ಭಾಗಿ

Share :

29-07-2023

    ದಿವಂಗತ ರಾಕೇಶ್ ಸಿದ್ದರಾಮಯ್ಯರ ಏಳನೇ ವರ್ಷದ ಪುಣ್ಯತಿಥಿ

    ರಾಕೇಶ್ ಸಮಾಧಿಗೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಕುಟುಂಬಸ್ಥರು

    ಪುತ್ರ ಧವನ್ ರಾಕೇಶ್ ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಭಾಗಿ

ಮೈಸೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಎರಡನೇ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರು ನಮ್ಮನ್ನಗಲಿ ಇಂದಿಗೆ 7 ವರ್ಷಗಳು ಪೂರ್ಣಗೊಂಡಿವೆ. ಇಂದು ಅವರ ಏಳನೇ ವರ್ಷದ ಪುಣ್ಯ ಸ್ಮರಣೆ.

ರಾಕೇಶ್ ಸಿದ್ದರಾಮಯ್ಯರ ಏಳನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ಕಾಟೂರು ಗ್ರಾಮದಲ್ಲಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ, ಆಪ್ತರು ಹಾಗೂ ಕುಟುಂಬಸ್ಥರು ಇದ್ದರು. ಸಿದ್ದರಾಮಯ್ಯ ಮೊಮ್ಮಗ ಧವನ್ ರಾಕೇಶ್, ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಉಪಸ್ಥಿತರಿದ್ದರು.

ಇನ್ನು, ರಾಕೇಶ್‌ ಅವರು ಬೆಲ್ಜಿಯಂನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇಂದಿಗೆ ಬರೋಬ್ಬರಿ 7 ವರ್ಷ ತುಂಬಿದೆ. ಈ 7ನೇ ವರ್ಷದ ತಿಥಿಗೆ ರಾಕೇಶ್‌ ಸಿದ್ದರಾಮಯ್ಯ ನಾಯಕ ನಟನಾಗಿ ನಟಿಸಿರುವ “ನನಗೆ ನೀನು ನಿನಗೆ ನಾನು” ಸಿನಿಮಾ ಮತ್ತೊಮ್ಮೆ ಬಿಡುಗಡೆ ಮಾಡುವುದಕ್ಕೆ ತೆರೆಮರೆಯಲ್ಲಿಯೇ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ರಾಕೇಶ್‌ ಸಿದ್ದರಾಮಯ್ಯ ಅವರ ಸಾವಿಗೂ 13 ವರ್ಷಗಳ ಹಿಂದೆ ನಟಿಸಿದ ‘ನನಗೆ ನೀನು ನಿನಗೆ ನಾನು’ ಕನ್ನಡ ಸಿನಿಮಾವನ್ನು ಅನಿತಾ ಸುಬ್ರಹ್ಮಣ್ಯ ನಿರ್ದೇಶನ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗ ರಾಕೇಶ್​​ 7ನೇ ಪುಣ್ಯ ತಿಥಿ; ಸಿಎಂ ಸಿದ್ದರಾಮಯ್ಯ ಭಾಗಿ

https://newsfirstlive.com/wp-content/uploads/2023/07/siddu-5.jpg

Load More