newsfirstkannada.com

VIDEO: ಟೊಮ್ಯಾಟೋ ಬೇಕಾ ಟೊಮ್ಯಾಟೋ.. 15 ದಿನದಲ್ಲಿ ಬೆಳೆದು ಕೊಡ್ತೀನಿ ಎಂದ ರಾಖಿ ಸಾವಂತ್

Share :

11-07-2023

    100, 150, 200 ರೂಪಾಯಿಯನ್ನು ದಾಟಿರೋ ಟೊಮ್ಯಾಟೋ ರೇಟ್‌

    ಇನ್ನೂ 15 ದಿನದಲ್ಲಿ ಟೊಮ್ಯಾಟೋ ಸಿಗುತ್ತೆ ಎಂದ ರಾಖಿ ಸಾವಂತ್

    ಟೊಮ್ಯೊಟೋ ರೇಟ್ ಜಾಸ್ತಿ ಆಗಿರೋದಕ್ಕೆ ಬ್ಯೂಟಿಫುಲ್ ಐಡಿಯಾ

ಟೊಮ್ಯಾಟೋ.. ಟೊಮ್ಯಾಟೋ.. ಟೊಮ್ಯಾಟೋ.. ಇಡೀ ಇಂಡಿಯಾದಲ್ಲೇ ಸದ್ಯ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಕೆಜಿಗೆ 100, 150, 200 ರೂಪಾಯಿಯನ್ನು ದಾಟಿರೋ ಟೊಮ್ಯಾಟೋ ರೇಟ್‌ ಇನ್ನೂ ಎರಡು ತಿಂಗಳು ಕಡಿಮೆ ಆಗೋದು ಅನುಮಾನ. ಗೃಹಿಣಿಯರು ಟೊಮ್ಯಾಟೋ ರೇಟ್ ಕೇಳಿಯೇ ಸುಸ್ತಾಗಿದ್ದು, ಇದರ ಸಹವಾಸನೇ ಬೇಡಪ್ಪಾ ಅಂತಾ ಕೊನೆಗೆ ಹುಣಸೆಹಣ್ಣಿನ ಮೊರೆ ಹೋಗಿದ್ದಾರೆ.

ಪ್ರತಿದಿನ ಗಗನಕ್ಕೇರಿರೋ ಟೊಮ್ಯಾಟೋನ ತಿನ್ನೋದಿರಲಿ ಸದ್ಯ ಮಾರುಕಟ್ಟೆಯಲ್ಲಿ ಟಚ್ ಮಾಡೋದು ಕಷ್ಟ. ಯಾಕಂದ್ರೆ ಟೊಮ್ಯಾಟೋ ಮಾರುವವರು ಸಿಸಿಟಿವಿಯನ್ನು ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ವ್ಯಾಪಾರಿಗೆ ಬೌನ್ಸರ್‌ಗಳ ಸೆಕ್ಯೂರಿಟಿ ಕೂಡ ಸುದ್ದಿಯಾಗಿದ್ದಾರೆ. ಇಷ್ಟೊಂದು ಡಿಮ್ಯಾಂಡ್ ಇರೋ ಈ ರೆಡ್ ಬ್ಯೂಟಿ ಮೇಲೆ ಈಗ ರಾಖಿ ಸಾವಂತ್ ಕಣ್ಣು ಬಿದ್ದಿದೆ. ಜನರ ಕಷ್ಟ ಅರ್ಥ ಮಾಡಿಕೊಂಡಿರೋ ರಾಖಿ ತಾನೇ ಟೊಮ್ಯಾಟೋ ಬೆಳೆದು ಕೊಡೋಕೆ ರೆಡಿಯಾಗಿದ್ದಾರೆ. ಆದರೆ ರಾಖಿ ಸಾವಂತ್ ಅವರು ಮಾಡಿರೋ ಕೃಷಿ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ಹೈಡ್ರಾಮಾಗಳನ್ನೇ ಮಾಡುವ ರಾಖಿ ಸಾವಂತ್, ಟೊಮ್ಯೊಟೋ ರೇಟ್ ಜಾಸ್ತಿ ಆಗಿರೋದನ್ನ ಕೇಳಿ ಪರಿಹಾರ ಹುಡುಕಲು ಮುಂದಾಗಿದ್ದಾರೆ. ತಾವೇ ಒಂದು ಪಾಟ್‌ನಲ್ಲಿ ಟೊಮ್ಯೊಟೋ ಸಸಿ ಬೆಳೆಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಒಬ್ಬ ಮೆಂಟರ್‌ ಅನ್ನು ಕೂಡ ನೇಮಿಸಿಕೊಂಡಿದ್ದಾರೆ. ಟೊಮ್ಯೊಟೋ ಗಿಡ ನೆಡುವ ರಾಖಿ, ಪಾಟ್‌ ಒಳಗೆ ಮೊದಲು ನಾಲ್ಕೈದು ಟೊಮ್ಯೊಟೋ ಅನ್ನು ಹಾಕಿದ್ದಾರೆ. ಆಮೇಲೆ ಟೊಮ್ಯೊಟೋ ಗಿಡವನ್ನು ನೆಟ್ಟು ಇನ್ನು 15 ದಿನದಲ್ಲಿ ನನಗೆ ಟೊಮ್ಯಾಟೋ ಸಿಗುತ್ತಾ ಎಂದು ಕೇಳಿದ್ದಾರೆ.

ರಾಖಿ ಸಾವಂತ್‌ ಏನೋ ಟೊಮ್ಯಾಟೋ ಗಿಡ ಬೆಳೆಸುವ ವಿಡಿಯೋವನ್ನು ಖುಷಿಯಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇದನ್ನು ನೋಡಿದ ನೆಟ್ಟಿಗರಂತೂ ರಾಖಿನ ಸಿಕ್ಕಾಪಟ್ಟೆ ಗೇಲಿ ಮಾಡುತ್ತಿದ್ದಾರೆ. ರಾಖಿಗೇನು ತಲೆ ಕೆಟ್ಟಿದ್ಯಾ ವಿಡಿಯೋ ಮಾಡಲು ಹೋಗಿ ಟೊಮ್ಯಾಟೋಗಳನ್ನೇ ಪಾಟ್‌ ಒಳಗೆ ಹಾಕಿದ್ದಾರೆ. ಟೊಮ್ಯಾಟೋ ರೇಟ್ ದುಬಾರಿ ಆಗಿರುವಾಗ ವೇಸ್ಟ್‌ ಮಾಡಿದ್ದು ಸರೀನಾ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಟೊಮ್ಯಾಟೋ ಬೇಕಾ ಟೊಮ್ಯಾಟೋ.. 15 ದಿನದಲ್ಲಿ ಬೆಳೆದು ಕೊಡ್ತೀನಿ ಎಂದ ರಾಖಿ ಸಾವಂತ್

https://newsfirstlive.com/wp-content/uploads/2023/07/Rakhi-Savanth.jpg

Load More