ಸೂಪರ್ ಸ್ಟಾರ್ ರಜನಿಕಾಂತ್ 'ಜೈಲರ್' ಚಿತ್ರದ ಸಾಂಗ್ ರಿಲೀಸ್ಗೆ ಡೇಟ್ ಫಿಕ್ಸ್
ಚಿತ್ರರಂಗದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ರಾ ನಟ ವಿಜಯ್ ದಳಪತಿ
ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ದಿನಾಂಕ ಮುಂದೂಡಿಕೆ..!
ರಶ್ಮಿಕಾ ಸಿನಿಮಾ ಪೋಸ್ಟ್‌ಪೋನ್
ರಶ್ಮಿಕಾ ಮಂದಣ್ಣ ಹಾಗೂ ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರ ಆಗಸ್ಟ್ ತಿಂಗಳು ತೆರೆಗೆ ಬರಬೇಕಿತ್ತು. ಆದ್ರೀಗ ತಾಂತ್ರಿಕ ಕಾರಣದಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಎಂದು ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಈಗಾಗಲೇ ‘ಅನಿಮಲ್’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಅನಿಮಲ್’ ಚಿತ್ರದಲ್ಲಿ ವಿಎಫ್ಎಕ್ಸ್ ಕೆಲಸ ಇನ್ನಷ್ಟು ಸಮಯ ತೆಗೆದುಕೊಳ್ಳುವ ಕಾರಣದಿಂದ ಡಿಸೆಂಬರ್ 1ಕ್ಕೆ ರಿಲೀಸ್ ಮಾಡಲಾಗುವುದು ಎಂದು ಹೊಸ ದಿನಾಂಕ ಘೋಷಿಸಿದ್ದಾರೆ.
ತಮನ್ನಾ ಸಾಂಗ್.. ಜೈಲರ್ ಸಖತ್ ಪ್ಲಾನ್!
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದ ಮೊದಲ ಸಾಂಗ್ ರಿಲೀಸ್ಗೆ ದಿನಾಂಕ ನಿಗದಿಯಾಗಿದೆ. ಜುಲೈ 6ಕ್ಕೆ ಜೈಲರ್ ಸ್ಪೆಷಲ್ ನಂಬರ್ ಬಿಡುಗಡೆಯಾಗಲಿದ್ದು, ಈ ಹಾಡಿನಲ್ಲಿ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದ್ರನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಸಾಂಗ್ ಪ್ರೋಮೋ ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ.
ಕೆಜಿಎಫ್ಗೂ ಸಲಾರ್ಗೂ ಲಿಂಕ್ ಇದ್ಯಾ?
ಸಲಾರ್ ಚಿತ್ರದ ಟೀಸರ್ ಬಿಡುಗಡೆ ದಿನಾಂಕ ಘೋಷಣೆ ಆದ್ಮೇಲೆ ಹೊಸ ಚರ್ಚೆ ಆರಂಭವಾಗಿದೆ. ಸಲಾರ್ ಚಿತ್ರದ ಮೊದಲ ಟೀಸರ್ ಜುಲೈ 6ರಂದು ಮುಂಜಾನೆ 5 ಗಂಟೆ 17 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಇದನ್ನ ಕೆಜಿಎಫ್ ಚಿತ್ರದೊಂದಿಗೆ ಲಿಂಕ್ ಮಾಡುತ್ತಿರುವ ನೆಟ್ಟಿಗರು ಇದು ಕೆಜಿಎಫ್ ಸೀಕ್ವೆಲ್ ಅಂತಿದ್ದಾರೆ. ಕೆಜಿಎಫ್ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರಾಕಿ ಭಾಯ್ ಸಮುದ್ರದಲ್ಲಿ ಧುಮುಕೋದು ಬೆಳಗ್ಗೆ 5.12 ನಿಮಿಷಕ್ಕೆ. ಈಗ ಅದೇ ಟೈಮ್ನಲ್ಲಿ ಸಲಾರ್ ಟೀಸರ್ ಬರ್ತಿದೆ. ಹಾಗಾಗಿ ಕೆಜಿಎಫ್ಗೂ ಸಲಾರ್ಗೂ ನಂಟಿದೆ ಎನ್ನುವ ಚರ್ಚೆ ನಡೆಯುತ್ತಿದೆ.
ಸಲ್ಮಾನ್ ಖಾನ್ಗಾಗಿ ರಾಖಿ ಸಾವಂತ್ ಶಪಥ
ಸಲ್ಮಾನ್ ಖಾನ್ ಮದುವೆ ಮಾಡಿಕೊಳ್ಳುವವರೆಗೂ ನಾನು ಬರಿಗಾಲಿನಲ್ಲಿ ನಡೆಯುತ್ತೇನೆ ಅಂತಾ ಹೇಳಿ ಗಮನ ಸೆಳೆದಿದ್ದಾರೆ ರಾಖಿ ಸಾವಂತ್. ಇತ್ತೀಚೆಗಷ್ಟೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ರಾಖಿ, ಬರಿಗಾಲಲ್ಲಿ ನಡೆದು ಬರ್ತಿದ್ರು. ಯಾಕೆ ಅಂತ ಕೇಳಿದ್ದಕ್ಕೆ ನಮ್ಮ ಸಲ್ಲು ಭಾಯ್ ಮದುವೆ ಆಗೋವರೆಗೂ ನಾನು ಬರಿಗಾಲಲ್ಲೇ ಇರ್ತೇನೆ ಎಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
68ನೇ ಚಿತ್ರದ ಆದ್ಮೇಲೆ ಬ್ರೇಕ್!
ತಮಿಳು ನಟ ವಿಜಯ್ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ. 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಸಿನಿಮಾ ಮಾಡೋದನ್ನ ನಿಲ್ಲಿಸಿ ರಾಜಕೀಯ ತಯಾರಿ ಆರಂಭಿಸಲಿದ್ದಾರಂತೆ. ಸದ್ಯ ಲೋಕೇಶ್ ಕನಕರಾಜ್ ಜೊತೆ 67ನೇ ಸಿನಿಮಾ ಮಾಡ್ತಿದ್ದು, ಅದಾದ ಬಳಿಕ ನಿರ್ದೇಶಕ ವೆಂಕಟ್ ಪ್ರಭು ಜೊತೆ ಮಾಡ್ತಿರುವ 68ನೇ ಸಿನಿಮಾ ಕೊನೆಯ ಚಿತ್ರ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ