ರಕ್ಷಾ ಬಂಧನ ಅಂದ್ರೆ ಸಹೋದರನ ರಕ್ಷಣೆ, ಪ್ರೀತಿ, ಅನುಬಂಧನ
ಒಡಹುಟ್ಟಿದವರ ಪ್ರೀತಿ, ವಾತ್ಸಲ್ಯಕ್ಕೆ ವಯಸ್ಸಿನ ಹಂಗೇಕೆ?
82 ವರ್ಷದ ಅಣ್ಣನಿಗೆ 80 ವರ್ಷದ ತಂಗಿಯಿಂದ ರಕ್ಷಾ ಬಂಧನ
ಅಣ್ಣ, ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ. ರಕ್ಷಾ ಬಂಧನ ಅಂದ್ರೆ ಸಹೋದರನ ರಕ್ಷಣೆ, ಪ್ರೀತಿ, ಅನುಬಂಧನದಲ್ಲಿ ಸಹೋದರಿಯು ಖುಷಿ, ಖುಷಿಯಿಂದ ಬದುಕಿ ಬಾಳುವುದಾಗಿದೆ. ಭಾರತೀಯ ಸಂಪ್ರದಾಯದ ಹಬ್ಬಗಳಲ್ಲಿ ಈ ರಕ್ಷಾ ಬಂಧನ ನಿಜಕ್ಕೂ ವಿಶೇಷವಾದದ್ದು. ಸಹೋದರ-ಸಹೋದರಿಯ ಸಂಬಂಧ ಗಟ್ಟಿಗೊಳಿಸುವ ಹಬ್ಬ ಇದಾಗಿದೆ. ಕಿರಿಯರು-ಹಿರಿಯರು ಎನ್ನದೇ ಎಲ್ಲಾ ವಯಸ್ಸಿನವರೂ ಈ ರಾಖಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಸಹೋದರಿ ರಾಖಿ ಕಟ್ಟಿದರೇ ಅದಕ್ಕೆ ಸಹೋದರನು ಏನಾದ್ರೂ ಉಡುಗೊರೆಯಾಗಿ ಕೊಡುವುದು ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತೆ.
ರಕ್ಷಾ ಬಂಧನ ಇದು ಸಹೋದರತ್ವ ಸಾರುವ ಭಾವನಾತ್ಮಕ ಹಬ್ಬವಾಗಿದೆ. ಬೆಂಗಳೂರಲ್ಲಿ 82 ವರ್ಷದ ಕೃಷಿಕರಾದ ರಾಮಕೃಷ್ಣಗೌಡ ಅವರಿಗೆ ಸಹೋದರಿಯಾದ ಪದ್ಮಾವತಮ್ಮನವರು ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಾಮಕೃಷ್ಣಗೌಡ ಅವರು ಆಡ್-6 ಜಾಹಿರಾತು ಸಂಸ್ಥೆಯ ಮುಖ್ಯಸ್ಥರಾದ ಸುಧಾಕರ್ ಅವರ ತಂದೆಯಾಗಿದ್ದಾರೆ.
ಹೃದಯದಲ್ಲಿ ಬಿಗಿಯಾದ ಬಂಧದಿಂದ ಭಾವ ತಂತು ಇನ್ನು ಹೆಚ್ಚಾಗಿ ಬೆಸೆಯಲಿ. ಅಣ್ಣ- ತಂಗಿ, ಅಕ್ಕ- ತಮ್ಮನ ಬಾಂಧವ್ಯ ನೂರಾರು ಕಾಲ ಗಟ್ಟಿಗೊಳ್ಳಲಿ. ಒಡಹುಟ್ಟಿದವರ ವಾತ್ಸಲ್ಯಕ್ಕೆ ವಯಸ್ಸಿನ ಹಂಗೇಕೆ ಹೇಳಿ ಎನ್ನುವ ಸಾಲುಗಳಿಗೆ ಅರ್ಥ ಎಂದರೆ, ಈ ಹಿರಿಯರ ರಕ್ಷಾ ಬಂಧನ. 82 ವರ್ಷದ ಕೃಷಿಕರಾದ ಎಂ.ಎನ್.ರಾಮಕೃಷ್ಣ ಗೌಡರಿಗೆ 80 ವರ್ಷದ ತಂಗಿ ಪದ್ಮಾವತಮ್ಮನವರು ರಾಖಿ ಕಟ್ಟಿದ್ದಾರೆ. ಬಳಿಕ ಪರಸ್ಪರ ಸಿಹಿ ತಿನಿಸುವುದರಿಂದ ಸಂತಸಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ