newsfirstkannada.com

ರಿಚರ್ಡ್​​​ ಆ್ಯಂಟನಿ, ಪುಣ್ಯಕೋಟಿ ಸಿನಿಮಾದ ಗುಟ್ಟು ಬಿಟ್ಟುಕೊಟ್ಟ ರಕ್ಷಿತ್​ ಶೆಟ್ಟಿ!

Share :

03-07-2023

  ರಕ್ಷಿತ್​ ಶೆಟ್ಟಿ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಏನೋ ಹೇಳಲು ಹೊರಟಿದ್ದಾರೆ ಶೆಟ್ರು

  ತಾನು ಕಂಡದ್ದನ್ನು ಹೇಳಲು ಹೊರಟ ರಕ್ಷಿತ್​ ಶೆಟ್ಟಿ.. ಅದೇನು ಗೊತ್ತಾ?

  ‘ನಾ ಕಂಡಂತೆ’ ಸಂವಾದಾತ್ಮಕ ಸರಣಿಯ ಪ್ರಾರಂಭಿಸುತ್ತಿದ್ದಾರೆ ರಕ್ಷಿತ್​ ಶೆಟ್ಟಿ

ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಏನಾದರೊಂದು ಹೊಸತನ್ನ ಮಾಡುತ್ತಿರುತ್ತಾರೆ ಮತ್ತು ಪರಿಚಯಿಸುತ್ತಿರುತ್ತಾರೆ. ಅದರಂತೆಯೇ ಇಂದು ಗುರುಪೂರ್ಣಿಮ. ಈ ಶುಭದಿನದಂದು ‘ನಾ ಕಂಡಂತೆ’ ಎಂಬ ಸರಣಿಯನ್ನು ತರುವುದಾಗಿ ಘೋಷಿಸಿದ್ದಾರೆ. ಟ್ವಿಟ್ಟರ್​ನಲ್ಲಿ ಈ ಕುರಿತಾಗಿ ವಿಡಿಯೋ ಹಂಚಿಕೊಂಡಿದ್ದು, ಎಲ್ಲರನ್ನು ಭರಪೂರವಾಗಿ ಸ್ವಾಗತಿಸಿದ್ದಾರೆ.

ನಾ ಕಂಡಂತೆ- ರಕ್ಷಿತ್​ ಶೆಟ್ಟಿ

ರಕ್ಷಿತ್​ ಶೆಟ್ಟಿ ‘ನಾ ಕಂಡಂತೆ’ ಎಂಬ ಒಂದು ಸಂವಾದಾತ್ಮಕ ಸರಣಿಯನ್ನು ಪ್ರಾರಂಭಿಸುತ್ತಿದ್ದಾರೆ. ಹೀಗಾಗಿ ತನ್ನ ಅಭಿಮಾನಿಗಳನ್ನು ಈ ಸಂವಾದ ಸರಣಿಯಲ್ಲಿ ಭಾಗಿಯಾಗಿ ಎಂದು ಬರಮಾಡಿಕೊಂಡಿದ್ದಾರೆ.

ಅಂದಹಾಗೆಯೇ, ಹಂಚಿಕೊಂಡ ದೃಶ್ಯದಲ್ಲಿ ಶೆಟ್ರು ಹಲವಾರು ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಯಶಸ್ಸು, ಕನಸು, ಕಥೆಗಾರ, ಬೆಳ್ಳಿತೆರೆ, ಸಿನಿಮಾ ಜರ್ನಿ ಹಲವಾರು ವಿಚಾರಗಳನ್ನು ಮನದಟ್ಟು ಮಾಡಿದ್ದಾರೆ. ಅದರ ಜೊತೆಗೆ ರಕ್ಷಿತ್​ ಶೆಟ್ಟಿ ಕಥೆಗಾರನಾಗಲು ಕಾರಣ ಇವೆಲ್ಲವನ್ನು ಹೇಳಿಕೊಂಡಿದ್ದಾರೆ.

ರಿಚರ್ಡ್​​​ ಆ್ಯಂಟನಿ- ಪುಣ್ಯಕೋಟಿ ಸಿನಿಮಾದ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಶೆಟ್ರು

ರಕ್ಷಿತ್​ ಶೆಟ್ಟಿ ಅವರ ಕನಸಿನ ಸಿನಿಮಾ ರಿಚರ್ಡ್​​​ ಆ್ಯಂಟನಿ ಮತ್ತು ಪುಣ್ಯಕೋಟಿ. ಈ ಸಿನಿಮಾದ ಬಗ್ಗೆ ಕೆಲಸಗಳು ನಡೆಯುತ್ತಲೇ ಇವೆ. ಆದರೆ ಸಿನಿಮಾದ ಕುರಿತು ರಕ್ಷಿತ್​ ಶೆಟ್ಟಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕರಾವಳಿ ಸೃಷ್ಟಿಕರ್ತನಾದ ಪರಶುರಾಮ ಮತ್ತು ಆತನ ಕೊಡಲಿ ನನ್ನ ಮುಂಬರುವ ಸಿನಿಮಾಗಳಾದ ರಿಚರ್ಡ್​​​ ಆ್ಯಂಟನಿ ಮತ್ತು ಪುಣ್ಯಕೋಟಿ ಸಿನಿಮಾಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಅದೇನೆ ಇರಲಿ ರಕ್ಷಿತ್​ ಶೆಟ್ಟಿ ತಾವು ಕಂಡದ್ದನ್ನು ಅಭಿಮಾನಿಗಳ ಮುಂದೆ ಹೇಳಲು ಹೊರಟಿದ್ದಾರೆ. ಗುರುಪೂರ್ಣಿಮೆಯ ದಿನದಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ನಾ ಕಂಡಂತೆ’ ಎಂದು ತಮ್ಮೊಳಗಿನ, ತಾವು ಕಂಡಂತಹ ವಿಚಾರ ಸತ್ಯತೆಗಳನ್ನು ಸರಣಿಯ ಮೂಲಕ ಮನಬಿಚ್ಚಿ ಹೇಳಲಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಿಚರ್ಡ್​​​ ಆ್ಯಂಟನಿ, ಪುಣ್ಯಕೋಟಿ ಸಿನಿಮಾದ ಗುಟ್ಟು ಬಿಟ್ಟುಕೊಟ್ಟ ರಕ್ಷಿತ್​ ಶೆಟ್ಟಿ!

https://newsfirstlive.com/wp-content/uploads/2023/07/Rakshit-Shetty.jpg

Load More