newsfirstkannada.com

ಮೆಗಾ ಪವರ್​ ರಾಮ್​ ಚರಣ್​ ತೇಜ್​​​ ಮಗಳ ನಾಮಕರಣ; ಇಲ್ಲಿವೆ ಟಾಪ್​ 5 ಸಿನಿಮಾ ಸುದ್ದಿಗಳು!

Share :

30-06-2023

    ಪವರ್ ​ಸ್ಟಾರ್​ ಪವನ್ ಕಲ್ಯಾಣ್ ನಟನೆಯ ‘ಬ್ರೋ’ ಚಿತ್ರದ ಟೀಸರ್​ ರಿಲೀಸ್

    ನಟಿ ಕಂಗನಾ ನಟನೆಯ ಚಂದ್ರಮುಖಿ 2 ಚಿತ್ರದ ರಿಲೀಸ್​ ಡೇಟ್​​ ಫಿಕ್ಸ್​​, ಯಾವಾಗ?

    ಪ್ರಭಾಸ್​ ನಟನೆಯ ಆದಿಪುರುಷ್ ಚಿತ್ರ ಬಾಕ್ಸಾಫೀಸ್​ನಲ್ಲಿ ಹೀನಾಯ ಸೋಲು

ರಾಮ್ ಚರಣ್ ಮಗಳಿಗೆ ನಾಮಕರಣ

ತೆಲುಗಿನ ನಟ, ಚಿರಂಜೀವಿ ಸುಪುತ್ರ ಮೆಗಾ ಪವರ್​ ಸ್ಟಾರ್ ರಾಮ್ ಚರಣ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಇಂದು ಸಂಭ್ರಮ ಕಳೆಗಟ್ಟಿದೆ. ರಾಮ್​ಚರಣ್ ಪತ್ನಿ ಉಪಾಸನಾ ಜೂನ್ 20 ರಂದು ಹೈದರಾಬಾದ್​ನ ಜುಬಿಲಿ ಹಿಲ್ಸ್‌ನಲ್ಲಿರೋ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದರು. ಇವತ್ತು ರಾಮ್​ ಚರಣ್​ ಚೊಚ್ಚಲ ಮಗುವಿಗೆ ನಾಮಕರಣ ಆಗಲಿದ್ದು, ಈ ಹಿನ್ನೆಲೆ ಚಿರು ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಿದೆ. ಇದರ ತಯಾರಿಯ ಕೆಲವು ತುಣುಕಗಳನ್ನ ಉಪಾಸನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದು, ಮೆಗಾ ಪ್ರಿನ್ಸನ್ಸ್​​ಗೆ​​​ ಹೆಸರೇನು ಇಡಬಹುದು ಅನ್ನೋ ಕುತೂಹಲ ಕಾಡ್ತಿದೆ.

ಕೇವಲ 1 ಕೋಟಿ ಗಳಿಸಿದ ಆದಿಪುರುಷ್

ಪ್ರಭಾಸ್​ ನಟನೆಯ ಆದಿಪುರುಷ್ ಸಿನಿಮಾ ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದೆ. ಸುಮಾರು 550 ಕೋಟಿ ವೆಚ್ಚದ ಸಿನಿಮಾ ಹಾಕಿದ ಬಂಡವಾಳವನ್ನ ಸಹ ಪಾಪಸ್ ಪಡೆದಿಲ್ಲ. ಜುಲೈ 16ಕ್ಕೆ ತೆರೆಕಂಡಿದ್ದ ಆದಿಪುರುಷ್ 14ನೇ ದಿನ ಕೇವಲ 75 ಲಕ್ಷ ಕಲೆಕ್ಷನ್ ಮಾಡಿದೆಯಂತೆ. ಈ ಮೂಲಕ ಒಟ್ಟಾರೆ ವರ್ಲ್ಡ್​ವೈಡ್​ ಗಳಿಕೆ 450 ಕೋಟಿ ಆಗಿದ್ರೆ ಭಾರತದ ನೆಟ್​ ಕಲೆಕ್ಷನ್ 300 ಕೋಟಿ ಎನ್ನಲಾಗಿದೆ. ಇದರೊಂದಿದಿಗೆ ಪ್ರಭಾಸ್​ಗೆ ಬಹುದೊಡ್ಡ ಸೋಲು ತಂದುಕೊಟ್ಟಿದೆ.

ಇಂಡಿಯನ್-3ಗೆ ನಡೀತಿದ್ಯಾ ಸಿದ್ಧತೆ?

ಕಮಲ್ ಹಾಸನ್ – ಡೈರೆಕ್ಟರ್ ಶಂಕರ್ ಕಾಂಬಿನೇಷನ್​ನಲ್ಲಿ ತಯಾರಾಗ್ತಿರುವ ಇಂಡಿಯನ್ 2 ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತಕ್ಕೆ ಹೋಗಿದೆ. ಈ ನಡುವೆ ಇಂಡಿಯನ್ 3 ಬರೋ ಸಾಧ್ಯತೆ ಎನ್ನುವ ವಿಷಯ ಈಗ ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಬಗ್ಗೆ ನಿರ್ಮಾಪಕ ಉದಯನಿಧಿ ಸ್ಟಾಲಿನ್​ ಸುಳಿವು ಕೊಟ್ಟಿದ್ದು, ಮೂರನೇ ಭಾಗದ ಮಾತುಕತೆ ಆಗಿದೆ, ಇನ್ನೂ ಪ್ರಾರಂಭಿಕ ಹಂತದಲ್ಲಿದೆ ಎಂದಿದ್ದಾರಂತೆ.

ಬ್ರೋ ಟೀಸರ್​.. ಪವನ್ ಕಲ್ಯಾಣ್​ ಪವರ್​

ಪವರ್​ಸ್ಟಾರ್​ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ ನಟನೆಯ ಬ್ರೋ ಸಿನಿಮಾದ ಟೀಸರ್​ ರಿಲೀಸ್ ಆಗಿದೆ. ಸಮುದ್ರಕಣಿ ಈ ಚಿತ್ರ ನಿರ್ದೇಶಿಸಿದ್ದು, ಟೀಸರ್​ ಎಂಟ್ರಿಗೆ ಪವನ್ ಕಲ್ಯಾಣ್ ಫ್ಯಾನ್ಸ್​ ಸಖತ್ ಥ್ರಿಲ್ ಆಗಿದ್ದಾರೆ. ಸರ್ಪ್ರೈಸ್​ ಅಂದ್ರೆ ಮೆಗಾಸ್ಟಾರ್ ಚಿರಂಜೀವಿ ಸಹ ಒಂದು ಫ್ರೇಮ್​ನಲ್ಲಿ ಬಂದು ಹೋಗೋದು ಬ್ರೋ ಚಿತ್ರಕ್ಕೆ ಹೆಚ್ಚಿನ ಶಕ್ತಿ ತಂದಿದೆ. ಸದ್ಯ ಟೀಸರ್​ ಮೂಲಕ ಸದ್ದು ಮಾಡ್ತಿರುವ ಬ್ರೋ ಸಿನಿಮಾ ಜುಲೈ 28ಕ್ಕೆ ಬಿಡುಗಡೆಯಾಗಲಿದೆ.

‘ಚಂದ್ರಮುಖಿ-2’ ಎಂಟ್ರಿಗೆ ಮುಹೂರ್ತ ಫಿಕ್ಸ್

ಬಹುನಿರೀಕ್ಷಿತ ಚಂದ್ರಮುಖಿ 2 ಚಿತ್ರದ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ ಹಾಗೂ ಬಾಲಿವುಡ್ ಬ್ಯೂಟಿ ಕಂಗನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಂದ್ರಮುಖಿ 2 ಸೆಪ್ಟಂಬರ್ 19ಕ್ಕೆ ಗಣೇಶ್ ಚತುರ್ಥಿಯ ವಿಶೇಷವಾಗಿ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಚಂದ್ರಮುಖಿ ನಿರ್ದೇಶಿಸಿದ್ದ ಪಿ.ವಾಸು ಅವರೇ ಈ ಚಿತ್ರ ನಿರ್ದೇಶಿಸಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮೆಗಾ ಪವರ್​ ರಾಮ್​ ಚರಣ್​ ತೇಜ್​​​ ಮಗಳ ನಾಮಕರಣ; ಇಲ್ಲಿವೆ ಟಾಪ್​ 5 ಸಿನಿಮಾ ಸುದ್ದಿಗಳು!

https://newsfirstlive.com/wp-content/uploads/2023/06/upasana.jpg

Load More