newsfirstkannada.com

ಜಪಾನ್​​ನಲ್ಲಿ ರಾಮ್​ ಚರಣ್ ಅಭಿನಯದ ‘ರಂಗಸ್ಥಲಂ’ ಕಮಾಲ್.. ಉಡೀಸ್ ಆಗುತ್ತಾ KGF-2 ದಾಖಲೆ..?

Share :

27-07-2023

  ಜಪಾನ್​​ನಲ್ಲಿ ‘ರಂಗಸ್ಥಲಂ’ ನಾಗಾಲೋಟ

  ಎಷ್ಟು ಕೋಟಿ ಹಣ ಗಳಿಸಿದೆ ‘ರಂಗಸ್ಥಲಂ’?

  2018 ರಲ್ಲಿ ಭಾರತದಲ್ಲಿ ಸದ್ದು ಮಾಡಿದ್ದ ‘ರಂಗಸ್ಥಲಂ’

ಜಪಾನ್ ಸಿನಿಮಾ ಮಂದಿರಗಳಲ್ಲಿ ಭಾರತೀಯ ಚಿತ್ರಗಳ ಪ್ರದರ್ಶನ ಸಕರಾತ್ಮಕವಾಗಿ ಸಾಗುತ್ತಿದೆ. ರಾಜಮೌಳಿ ನಿರ್ದೇಶನದ RRR ಚಿತ್ರವು ಅಮೋಘ ಪ್ರದರ್ಶನ ಬೆನ್ನಲ್ಲೆ, ಮತ್ತೊಂದು ಸಿನಿಮಾ ಜಪಾನ್​ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇತ್ತೀಚೆಗೆ ರಾಮ್​ ಚರಣ್ ಅಭಿನಯದ ‘ರಂಗಸ್ಥಲಂ’ (Rangasthalam) ಚಿತ್ರವು ರಿಲೀಸ್ ಆಗಿತ್ತು. ಈ ಚಿತ್ರವನ್ನು ಜಪಾನ್​​ನಲ್ಲಿರುವ ರಾಮ್​ ಚರಣ್ ಅಭಿಮಾನಿಗಳು ಯಶಸ್ವಿಗೊಳಿಸಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ದಾಖಲೆಯ ಪ್ರಮಾಣದಲ್ಲಿ ಹಣ ಗಳಿಕೆ ಮಾಡಿದ್ದು, ಕೆಜೆಎಫ್​-2 ದಾಖಲೆಯನ್ನು ಉಡೀಸ್ ಮಾಡಿದೆ.

ಜಪಾನ್ ಬಾಕ್ಸ್​ ಆಫೀಸ್​ ಇಂಪ್ರೆಸ್ ಮಾಡುವಲ್ಲಿ ಯಶಸ್ವಿಯಾಗಿರುವ ‘ರಂಗಸ್ಥಲಂ’ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ಗಳಿಕೆ ಮಾಡಿದೆ. ಚಿತ್ರವು ಭಾರೀ ಪ್ರಶಂಸೆಗೆ ಕಾರಣವಾಗಿದ್ದು, ಜಪಾನಿಗರನ್ನು ಮೆಚ್ಚಿಸುವಲ್ಲಿ ಸಫಲವಾಗಿದೆ. ಚಿತ್ರದ ಯಶಸ್ಸಿನ ಓಟ ಜೋರಾಗಿರುವ ಹಿನ್ನೆಲೆಯಲ್ಲಿ ಕೆಜಿಎಫ್​ ಚಿತ್ರದ ದಾಖಲೆಯನ್ನು ಮೀರಿಸುವ ನಿರೀಕ್ಷೆ ಮಾಡಲಾಗಿದೆ.

‘ರಂಗಸ್ಥಲಂ’ ಜುಲೈ 14 ರಂದು ಜಪಾನ್​​ನಲ್ಲಿ ಮೊದಲ ಬಾರಿಗೆ ರಿಲೀಸ್ ಆಗಿದೆ. ಬರೋಬ್ಬರಿ 70 ಸ್ಕ್ರೀನ್​ಗಳಿಂದ ಬರೋಬ್ಬರಿ 2.5 ಮಿಲಿಯನ್ ಯೆನ್ ಗಳಿಸುವಲ್ಲಿ (ಜಪಾನ್ ಕರೆನ್ಸಿ) ಯಶಸ್ವಿಯಾಗಿದೆ. ಇನ್ನು ಯಶ್ ಅಭಿನಯದ ಕೆಜೆಎಫ್-1 ಮತ್ತು ಕೆಜಿಎಫ್​-2 ಎರಡೂ ಚಿತ್ರಗಳು ಜಪಾನ್​ನಲ್ಲಿ ರಿಲೀಸ್ ಆಗಿದ್ದವು. ಸುಕುಮಾರ್ ನಿರ್ದೇಶನದ ‘ರಂಗಸ್ಥಲಂ’ ಚಿತ್ರವು ಮಾರ್ಚ್​ 30, 2018 ರಂದು ದೇಶದಲ್ಲಿ ತೆರೆ ಕಂಡಿತ್ತು. ಬರೋಬ್ಬರಿ 60 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಪಾನ್​​ನಲ್ಲಿ ರಾಮ್​ ಚರಣ್ ಅಭಿನಯದ ‘ರಂಗಸ್ಥಲಂ’ ಕಮಾಲ್.. ಉಡೀಸ್ ಆಗುತ್ತಾ KGF-2 ದಾಖಲೆ..?

https://newsfirstlive.com/wp-content/uploads/2023/07/KGF.jpg

Load More