newsfirstkannada.com

Video: ಸೀರೆ ತುಂಬೆಲ್ಲಾ ರಾಮಾಯಣ..ಅಯೋಧ್ಯೆಯ ಸೀತಾರಾಮನಿಗಾಗಿ ಸಿದ್ಧವಾಯ್ತು ವಿಶೇಷ ಉಡುಗೊರೆ

Share :

08-08-2023

  ಆಯೋಧ್ಯೆ ಶ್ರೀರಾಮ ಮಂದಿರಕ್ಕೆ ಬರುತ್ತಿದೆ ಉಡುಗೊರೆ ಮಹಾಪೂರ

  ಆಯೋಧ್ಯೆ ಸೀತಾರಾಮನಿಗೆ ವಿಶೇಷ ಸೀರೆ ತಯಾರಿಸಿದ ಭಕ್ತ

  12 ಭಾಷೆಗಳಲ್ಲಿ ಜೈ ಶ್ರೀರಾಮ್ ಎಂದು ಬರೆದು ನೇಯ್ದಿರುವ ಸೀರೆ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಭರಪೂರ ಉಡುಗೊರೆಗಳು ಬರುತ್ತಿದೆ. ಇತ್ತೀಚೆಗೆ ಕುಶಲಕರ್ಮಿಯೋರ್ವ 2 ಲಕ್ಷ ರೂಪಾಯಿ ಖರ್ಚು ಮಾಡಿ 400 ಕೆ. ಜಿ ತೂಕದ ಬೀಗವನ್ನು ರೆಡಿ ಮಾಡಿದ್ದನು. ಈ ವಿಚಾರ ಸುದ್ದಿಯ ಜೊತೆಗೆ ಸದ್ದು ಕೂಡ ಆಗಿತ್ತು. ಇದೀಗ ಅದರಂತೆಯೇ ಭಕ್ತರೊಬ್ಬರು ಸೀರೆಯನ್ನು ತಯಾರಿಸಿದ್ದಾರೆ. ಅಂದಹಾಗೆಯೇ ಈ ಸೀರೆಯ ವಿಶೇಷತೆ ಎಂದರೆ ರಾಮಾಯಣದ ಕಥೆಯನ್ನು ಸೀರೆ ಹೇಳುತ್ತಿದೆ.

ಹೌದು. ರಾಮ ಭಕ್ತರು ತಯಾರಿಸಿದ ಸೀರೆ ರೇಷ್ಮೆ ಸೀರೆಯಾಗಿದ್ದು, ಸೀರೆಯ ತುಂಬೆಲ್ಲಾ ರಾಮಾಯಣ ಕಥೆಯನ್ನು ನೇಯಲಾಗಿದೆ. ಅದರ ಜೊತೆಗೆ ಭಾರತದ 12 ಭಾಷೆಗಳಲ್ಲಿ ಜೈ ಶ್ರೀರಾಮ್ ಎಂದು ಬರೆದು ಸೀರೆಯನ್ನು ನೇಯ್ದಿದ್ದಾರೆ. ಇದನ್ನು ಆಯೋಧ್ಯೆಯ ಸೀತಾರಾಮನಿಗೆ ಅರ್ಪಿಸಲು ಮುಂದಾಗಿದ್ದಾರೆ.

400 ಕೆ.ಜಿ ತೂಕದ ಬೀಗ

ಕುಶಲಕರ್ಮಿಯೊಬ್ಬರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ  400 ಕೆ.ಜಿ ತೂಕದ ಬೀಗವನ್ನು ತಯಾರಿಸಿದ್ದಾರೆ. ಅಲಿಘರ್​ ಮೂಲಕ ಸತ್ಯ ಪ್ರಕಾಶ್​ ಶರ್ಮಾ ಈ ಬೀಗವನ್ನು ತಯಾರಿಸಿದ್ದಾರೆ. ಕುಶಲಕರ್ಮಿ ಸತ್ಯ ಪ್ರಕಾಶ್​ ಶರ್ಮಾ ರಾಮನ ಭಕ್ತನಾಗಿದ್ದು, ಅವರು ತಯಾರಿಸಿರುವ ಬೀಗ ಬರೋಬ್ಬರಿ 10 ಅಡಿ ಎತ್ತರ, 4.5 ಅಡಿ ಅಗಲ ಮತ್ತು 9.5 ಇಂಚು ದಪ್ಪವನ್ನು ಹೊಂದಿದೆ. ಇದಕ್ಕಾಗಿ 4 ಅಡಿ ಉದ್ದದ ಕೀಯನ್ನು ರಚಿಸಿದ್ದಾರೆ.

ಸತ್ಯ ಪ್ರಕಾಶ್​​ ಶರ್ಮಾ ಕುಟುಂಬವು ಅಲಿಘರದಲ್ಲಿ ನೆಲೆಸಿದ್ದು ಅನೇಕ ವರ್ಷಗಳಿಂದ ಕೈಯಾರೆ ಬೀಗಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಅಯೋಧ್ಯೆ ರಾಮಮಂದಿರಕ್ಕಾಗಿ ತಯಾರಿಸಿರುವ 400 ಕೆ.ಜಿ ತೂಕದ ಬೀಗದ ಮೇಲೆ ತಿಂಗಳಾನುಗಟ್ಟಲೆ ಅವರು ಕೆಲಸ ಮಾಡಿದ್ದಾರೆ.

ಅಂದಹಾಗೆಯೇ ಸಮಾರು 2 ಲಕ್ಷ ರೂಪಾಯಿ ಈ ಬೀಗಕ್ಕಾಗಿ ಖರ್ಚು ಮಾಡಿದ್ದಾರೆ. ಸದ್ಯ ಈ ಬೀಗದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಭಕ್ತರಿಗಾಗಿ ರಾಮ ಮಂದಿರದ ಬಾಗಿಲು ತೆರೆಯಲು ನಿರ್ಧರಿಸಲಾಗಿದೆ. ಹೀಗಾಗಿ ಮಂದಿರಕ್ಕೆ ಸಾಕಷ್ಟು ಉಡುಗೊರೆಗಳು ಬರುತ್ತಿವೆ. ಮತ್ತೊಂದೆಡೆ ರಾಮಮಂದಿರದ ಮಹಾಮಸ್ತಕಾಭಿಷೇಕಕ್ಕೆ  ಸಿದ್ಧತೆ ನಡೆಯುತ್ತಿದ್ದು, ಜನವರಿ 21, 22, 23 ರಂದು ಶಂಕು ಸ್ಥಾಪನೆ ಸಮಾರಂಭವನ್ನು ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಸೀರೆ ತುಂಬೆಲ್ಲಾ ರಾಮಾಯಣ..ಅಯೋಧ್ಯೆಯ ಸೀತಾರಾಮನಿಗಾಗಿ ಸಿದ್ಧವಾಯ್ತು ವಿಶೇಷ ಉಡುಗೊರೆ

https://newsfirstlive.com/wp-content/uploads/2023/08/Sri-Ram-saree.jpg

Load More