newsfirstkannada.com

ರಾಮದೇವರ ಬೆಟ್ಟದಿಂದ ಕಳಕ್ಕೆ ಜಿಗಿದ ಬೆಂಗಳೂರಿನ ಯುವತಿ; ಆಗಿದ್ದೇನು..?

Share :

14-09-2023

    ಯುವತಿಯ ಯಡವಟ್ಟಿಗೆ ಬದುಕಿದ್ದೇ ಹೆಚ್ಚು

    ರಾಮನಗರ ಆಸ್ಪತ್ರೆಯಲ್ಲಿ ವೈದ್ಯರಿಂದ ಚಿಕಿತ್ಸೆ

    ಆತ್ಮಹತ್ಯೆಗೆ ಯತ್ನದ ಹಿಂದಿನ ಕಾರಣ ನಿಗೂಢ

ರಾಮನಗರ: ರಾಮದೇವರ ಬೆಟ್ಟದಿಂದ ಯುವತಿಯೊಬ್ಬಳು ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬೆಮೆಲ್ ಲೇಔಟ್​ನ ನಿವಾಸಿ ಇಶಾ ಪ್ರಸಾದ್ ಸೂಸೈಡ್ ಅಟೆಂಪ್ಟ್‌ ಮಾಡಿದ್ದಾಳೆ.

ಬೆಟ್ಟದ ಮೇಲಿಂದ ಜಿಗಿದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಬೆಟ್ಟದಿಂದ ಹಾರಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಗಾಯಾಳು ಯುವತಿಯನ್ನ ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಂಗಳೂರಿನಿಂದ ಒಬ್ಬಳೇ ರಾಮದೇವರ ಬೆಟ್ಟಕ್ಕೆ ಬಂದಿದ್ದಳು ಎನ್ನಲಾಗುತ್ತಿದೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮದೇವರ ಬೆಟ್ಟದಿಂದ ಕಳಕ್ಕೆ ಜಿಗಿದ ಬೆಂಗಳೂರಿನ ಯುವತಿ; ಆಗಿದ್ದೇನು..?

https://newsfirstlive.com/wp-content/uploads/2023/09/BNG_GIRL-1.jpg

Load More