newsfirstkannada.com

ಫ್ಯಾನ್ಸ್​ಗೆ ಗುಡ್​ನ್ಯೂಸ್​​: ಚಾರು ಬದಲಾವಣೆಗೆ ಮನಸೋತ ರಾಮಾಚಾರಿ; ಹೊಸ ಮೈಲಿಗಲ್ಲು!

Share :

Published August 18, 2023 at 6:33pm

    ಹಿರಿತೆರೆಯಲ್ಲಿ ಫೇಮಸ್​ ಆಗಿದ್ದ ಟೈಟಲ್​ ಎಂದರೆ ರಾಮಾಚಾರಿ

    ರಾಮಾಚಾರಿ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ ಪ್ರೀತಿಯ ಚಾರು

    ಮನರಂಜನೆಯ ಸ್ಪೆಷಲ್‌ ಧಮಾಕ ನೀಡುತ್ತಿದೆ ರಾಮಾಚಾರಿ

ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ರಾಮಾಚಾರಿ ಕೂಡ ಒಂದು. ವೀಕ್ಷಕರ ಮನಸ್ಸಲ್ಲಿ ರಾಮಾಚಾರಿಗೆ ಸ್ಪೆಷಲ್​ ಸ್ಥಾನ ಇದೆ. ಗಗನ ಎಂಟರ್​ಪ್ರೈಸಸ್​​ನ ಅಡಿ ಮೂಡಿಬರುತ್ತಿರುವ ರಾಮಾಚಾರಿ 400 ಸಂಚಿಕೆಗಳನ್ನ ಪೂರೈಸಿದ ಸಂಭ್ರಮದಲ್ಲಿದೆ.

ಹಿರಿತೆರೆಯಲ್ಲಿ ಫೇಮಸ್​ ಆಗಿದ್ದ ಟೈಟಲ್​ ರಾಮಾಚಾರಿ. ಈ ಟೈಟಲ್​ಗೆ ಇರೋ ಶಕ್ತಿ ಎಂತಹದ್ದು ಅಂತಾ ಸಿನಿ ರಸಿಕರಿಗೆ ಗೊತ್ತಿರೋ ವಿಚಾರ. ದೊಡ್ಡ ಸ್ಟಾರ್​​​ಗಗಳಿಗೆ ಬ್ರೇಕ್​ ನೀಡಿದ ಟೈಟಲ್​ ಇದು. ಈ ​ ಹಿಂದಿನ ನಿರೀಕ್ಷೆ ಇಮ್ಮಡಿಯಿತ್ತು. ವೀಕ್ಷಕರ ನಿರೀಕ್ಷೆ ಹುಸಿಯಾಗಲಿಲ್ಲ. ಕಿರುತೆರೆಯಲ್ಲೂ ರಾಮಾಚಾರಿ ಹವಾ ಅಷ್ಟೇ ಅದ್ಭುತವಾಗಿತ್ತು. ಮುಖ್ಯ ಭೂಮಿಕೆಯಲ್ಲಿರುವ ರಿತ್ವಿಕ್​ ಕೃಪಾಕರ್​ ಹಾಗೂ ಮೌನ ಕೇರಿಯರ್​​ಗೆ ಮೈಲುಗಲ್ಲಾಗಿದೆ. ಇನ್ನು, ಶ್ರೀಮಂತಿಕೆಯ ಸೊಕ್ಕನ್ನ ಬಿಟ್ಟು ರಾಮಾಚಾರಿ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ ಚಾರು. ಅವಳ ಪ್ರೀತಿ ತ್ಯಾಗಕ್ಕೆ ರಾಮಾಚಾರಿ ಸೋತಿದ್ದಾನೆ. ರಾಮಾಚಾರಿಗೆ ಲೈಟ್​ ಆಗಿ ಲವ್​ ಆಗಿದೆ. ಚಾರುಳನ್ನ ಪರೀಕ್ಷೆ ಮಾಡಲು ರಾಮಾಚಾರಿ ಚಾರುಗೆ ಒಂದು ಗಿಫ್ಟ್​ ನೀಡಿದ್ದಾನೆ.

ಇದನ್ನ ನೋಡಿ ಶಾಕ್​ ಆಗಿರೋ ಚಾರು, ಹಳೆಯ ಚಾರು ಮಾಯಾವಾಗಿದ್ದಾಳೆ. ಇದೀಗ ರಾಮಾಚಾರಿನೇ ನನ್ನ ಪ್ರಪಂಚ ಅಂತಾ ಹೇಳಿ ರಾಮಾಚಾರಿ ನಂಬಿಕೆಯನ್ನ ಉಳಿಸಿಕೊಂಡಿದ್ದಾಳೆ. ಚಾರು ಬದಲಾವಣೆಗೆ ರಾಮಾಚಾರಿ ಮನಸೋತ್ತಿದ್ದಾನೆ. ಸದ್ಯ ಇವರಿಬ್ಬರ ಮದುವೆ ನಂತರದ ಸಂಚಿಕೆಗಳಲ್ಲಿ ಚಾರು ಹಾಗೂ ರಾಮಾಚಾರಿ ಕ್ಯೂಟ್​ ಕ್ಷಣಗಳು ವೀಕ್ಷಕರನ್ನ ಸೇಳೆಯುತ್ತಿವೆ. ಒಟ್ಟಿನಲ್ಲಿ ದೊಡ್ಡ ತಾರಾಬಳಗವಿರುವ ರಾಮಾಚಾರಿ ಕ್ವಾಲಿಟಿ ಜೊತೆಗೆ ಮನರಂಜನೆಯ ಧಮಾಕ ನೀಡುತ್ತಿದೆ. ಈ ಜರ್ನಿ ಮತ್ತಷ್ಟು ಯಶಸ್ವಿ ಮೈಲುಗಲಲ್ಲನ್ನ ಸಾಧಿಸಲಿ ಅನ್ನೋದು ನಮ್ಮ ಹಾರೈಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಗುಡ್​ನ್ಯೂಸ್​​: ಚಾರು ಬದಲಾವಣೆಗೆ ಮನಸೋತ ರಾಮಾಚಾರಿ; ಹೊಸ ಮೈಲಿಗಲ್ಲು!

https://newsfirstlive.com/wp-content/uploads/2023/08/ramachari-2.jpg

Load More