newsfirstkannada.com

×

VIDEO: ಗುರುತೇ ಸಿಗದ ಹಾಗೆ ಮುಖಕ್ಕೆ ಕೆಸರು ಮೆತ್ತಿಕೊಂಡ ಚಾರು; ನಟಿ ಮೌನ ಅವತಾರಕ್ಕೆ ಫ್ಯಾನ್ಸ್ ಶಾಕ್

Share :

Published September 15, 2024 at 7:15am

Update September 15, 2024 at 7:29am

    ರಾಮಾಚಾರಿ ಸೀರಿಯಲ್ ಮೂಲಕ ಖ್ಯಾತಿ ಪಡೆದ ಮೌನ ಗುಡ್ಡೆಮನೆ

    ಟಿಆರ್​ಪಿಯಲ್ಲೂ ಉತ್ತಮ ಸ್ಥಾನ ಪಡೆಯೋದಕ್ಕೆ ಇದೇ ಕಾರಣನಾ?

    ಸೀರಿಯಲ್​ ಸೆಟ್​​ನಲ್ಲಿರೋ ನಟಿ ಮೌನ ಗುಡ್ಡೆಮನೆ ಫೋಟೋ ವೈರಲ್

ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಟಿಆರ್​ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಯ್ದುಕೊಂಡು ಮುನ್ನುಗ್ಗುತ್ತಿದೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಮಾಚಾರಿ ಸೀರಿಯಲ್ ವೀಕ್ಷಕರ ಫೇವರೆಟ್​ ಆಗಿ ಉಳಿದುಕೊಂಡಿದೆ.

ಇದನ್ನೂ ಓದಿ: ಗೆಳತಿಯ ಮದುವೆಯಲ್ಲಿ ಮಿರ ಮಿರ ಮಿಂಚಿದ ಚಾರು; ಮೌನ ಗುಡ್ಡೆಮನೆ ಕ್ಯೂಟ್​ ಸ್ಮೈಲ್​ಗೆ ಫ್ಯಾನ್ಸ್​ ಫಿದಾ

ಇದೇ ಧಾರಾವಾಹಿಯಲ್ಲಿ ಇತ್ತೀಚೆಗೆ ಶುರುವಾಗಿದ್ದ ರಾಮಾಚಾರಿ ಹಾಗೂ ಚಾರು ಮದುವೆಯ ರೋಚಕ ತಿರುವು ಕೊನೆಗೂ ಅಂತ್ಯ ಕಂಡಿದೆ. ಆದರೆ ವೀಕ್ಷಕರು ರಾಮಾಚಾರಿ ಹಾಗೂ ಚಾರುವಿನ ಅದ್ಧೂರಿ ಮದುವೆಯನ್ನು ಮರೆತಿಲ್ಲ. ಅದರಲ್ಲೂ ಮೊದಲು ಆಟಿಟ್ಯೂಡ್​ನಲ್ಲಿದ್ದ ಚಾರವನ್ನು ವೀಕ್ಷಕರು ಇನ್ನೂ ಮರೆತ್ತಿಲ್ಲ.

ಹೌದು, ರಾಮಾಚಾರಿಗೆ ಸಿಗುವ ಮೊದಲು ಚಾರುಗೆ ಸಕ್ಕಾಪಟ್ಟೆ ಆಟಿಟ್ಯೂಡ್ ಇತ್ತು. ಅದರಲ್ಲೂ ರಾಮಾಚಾರಿ ಅಂದ್ರೆ ಕೆಂಡ ಕಾರುತ್ತಿದ್ದಳು. ರಾಮಾಚಾರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಲೇ ಇದ್ದಳು. ಸದಾ ಆಟಿಟ್ಯೂಡ್​ನಲ್ಲಿ ಇರುತ್ತಿದ್ದ ಚಾರುಗೆ ರಾಮಾಚಾರಿಯೇ ಬುದ್ದಿ ಕಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಹೀಗೆ ಸೀರಿಯಲ್​ ಶುರುವಿನ ಸಂದರ್ಭದಲ್ಲಿ ಚಾರುಳ ಸೊಕ್ಕು ಕರಗಿಸಲು ರಾಮಾಚಾರಿ ಸಾಕಷ್ಟು ಹರಸಾಹಸಪಟ್ಟಿದ್ದ. ಆದರೆ ಇದೀಗ ಧಾರಾವಾಹಿಯ ಮೊದ ಮೊದಲು ಶೂಟ್​ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿದೆ.

ವೈರಲ್​ ಆದ ವಿಡಿಯೋದಲ್ಲಿ ಚಾರು ಮೈತುಂಬಾ ಕೆಸರನ್ನು ಮೆತ್ತಿಕೊಂಡಿದ್ದಾಳೆ. ಅದರಲ್ಲೂ ಗುರುತೇ ಸಿಗದ ಹಾಗೆ ಮೈಮೇಲೆ ಕೆಸರನ್ನು ಎರಚಿಕೊಂಡು ಕುರ್ಚಿ ಮೇಲೆ ಕುಳಿತುಕೊಂಡಿದ್ದರು. ಇದೇ ವೇಳೆ ರಾಮಾಚಾರಿ ಚಾರು ಪೋಸ್​ ಕೊಡು ಅಂತ ಹೇಳ್ತಾರೆ. ಆಗ ಚಾರು ನಗು ನಗುತ್ತಾ ಪೋಸ್​ ಕೊಡ್ತಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೇ ನೋಡಿದ ಅಭಿಮಾನಿಗಳು ಅಯ್ಯೋ ಇದು ನಮ್ಮ ಚಾರುನಾ? ಎಷ್ಟೇಲ್ಲಾ ಕಷ್ಟ ಪಡಬೇಕು ನೋಡಿ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಗುರುತೇ ಸಿಗದ ಹಾಗೆ ಮುಖಕ್ಕೆ ಕೆಸರು ಮೆತ್ತಿಕೊಂಡ ಚಾರು; ನಟಿ ಮೌನ ಅವತಾರಕ್ಕೆ ಫ್ಯಾನ್ಸ್ ಶಾಕ್

https://newsfirstlive.com/wp-content/uploads/2024/09/Mouna-Guddemane.jpg

Load More