newsfirstkannada.com

‘ರಾಮಾಚಾರಿ’ ಕುಟುಂಬಸ್ಥರಿಗೆ ಶಾಕ್ ಮೇಲೆ ಶಾಕ್​​; ಸೀರಿಯಲ್​​ಗೆ ಹೊಸ ನಟಿ​​ ಎಂಟ್ರಿ..!

Share :

26-05-2023

  ‘ರಾಮಾಚಾರಿ’ ಕುಟುಂಬಸ್ಥರಿಗೆ ಶಾಕ್ ಮೇಲೆ ಶಾಕ್

  ಸೀರಿಯಲ್​​ಗೆ ಹೊಸ ನಟಿ ಐಶ್ವರ್ಯ ಸಾಲಿಮಠ​​ ಎಂಟ್ರಿ..!

  ರಾಮಾಚಾರಿ ಹಾಗೂ ಚಾರುಳ ಮದುವೆ ವಿಚಾರ ಗೊತ್ತಾಗುತ್ತಾ?

ಕಿರುತೆರೆಯ ಹಿಟ್ ಧಾರಾವಾಹಿಗಳಲ್ಲಿ ವೀಕ್ಷಕರ ಮನಸ್ಸಲ್ಲಿ ಪ್ರಮುಖ ಸ್ಥಾನಗಳಿಸಿಕೊಂಡಿರೋ ಧಾರಾವಾಹಿ ಅಂದ್ರೆ ಅದು ರಾಮಾಚಾರಿ. ರಾಮಾಚಾರಿ ಸೀರಿಯಲ್​​ ವೀಕ್ಷಕರಿಗೆ ಬಲು ಹತ್ತಿರವಾಗಿದೆ. ಚಾರುಳ ದಿಢೀರ್ ಚೇಂಜ್ ವೀಕ್ಷಕರಿಗೆ ತುಂಬಾ ಇಷ್ಟವಾಗಿ ಬಿಟ್ಟಿದೆ. ರಾಮಾಚಾರಿಯ ನಡತೆ ಕೂಡ ವೀಕ್ಷಕರ ಮನಸ್ಸನ್ನು ತಟ್ಟಿದೆ. ಸದ್ಯ ಚಾರು ರಾಮಾಚಾರಿಯನ್ನು ತನ್ನ ಗಂಡನಾಗಿ ಮಾಡಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಪಡ್ತಿದ್ದಾಳೆ. ಚಾರು ಫುಲ್ ಲವ್ ಅಲ್ಲಿ ಬಿದ್ದಾಗಿದೆ. ಗೊತ್ತೋ ಗೊತ್ತಿಲ್ಲದೆನೋ ಇಬ್ಬರು ಪರಿಸ್ಥಿಗೆ ಬಿದ್ದು ಗಂಡ ಹೆಂಡತಿಯಾಗಿದ್ದಾರೆ. ರಾಮಾಚಾರಿಗೆ ಮನೆಯವರಿಗೆ ಈ ವಿಷ್ಯವನ್ನ ಹೇಳದೇ ಇರುವ ಸಂಕಂಟದಲ್ಲಿದ್ದಾನೆ. ಈ ಮಧ್ಯೆ ಚಾರು ಮಾತ್ರ ಫುಲ್ ಲವ್ ಮೂಡ್​​ನಲ್ಲಿದ್ದಾಳೆ.

ಸದ್ಯ ಈಗ ಇಬ್ಬರು ಗುಡಿಯಲ್ಲಿ ದೇವರಿಗೆ ಸೇವೆ ಸಲ್ಲಿಸೋಕೆ ಬಂದಿದ್ದಾರೆ. ಗಂಡ ಹೆಂಡತಿಯನ್ನು ಹೊತ್ತು ನೆಡೆಯೋ ಸೇವೆ. ಈ ಸೇವೆಗೆ ಬೆಟ್ಟಕ್ಕೆ ಚಾರು ತುಂಬಾ ಶ್ರಮಪಟ್ಟು ರಾಮಾಚಾರಿಯನ್ನು ಕರೆದುಕೊಂಡು ಬಂದಿದ್ದಾಳೆ. ಚಾರುಳ ಹಟಕ್ಕೆ ರಾಮಾಚಾರಿ ಕೂಡ ತಲೆ ಬಾಗಿದ್ದಾನೆ. ಅದೇ ಬೆಟ್ಟಕ್ಕೆ ಸೇವೆ ಸಲ್ಲಿಸೋಕೆ ರಾಮಾಚಾರಿಯ ಇಡೀ ಕುಂಟುಂಬ ಗುಡಿಗೆ ಬಂದಿದ್ದಾರೆ. ಹಾಗಾದ್ರೆ ರಾಮಾಚಾರಿ ಹಾಗೂ ಚಾರು ಅವರ ಫ್ಯಾಮಿಲಿ ಮುಂದೆ ಸಿಕ್ಕಿ ಬೀಳ್ತಾರಾ ಎಂಬುವುದು ಈಗ ಕೂತುಕಲ ವಿಷಯ. ಆದರೆ ಇದರ ಮಧ್ಯೆ ರಾಮಾಚಾರಿ ಸೀರಿಯಲ್​​​ನಲ್ಲಿ ಮತ್ತೊಬ್ಬ ನಟಿಯ ಎಂಟ್ರಿಯಾಗಿದೆ. ಅಗ್ನಿ-ಸಾಕ್ಷಿ ಮೂಲಕ ಅಪಾರ ಅಭಿಮಾನಿಗಳ ಹೃದಯ ಗೆದ್ದ ನಟಿ ಐಶ್ವರ್ಯ ಸಾಲಿಮಠ ಇದೀಗ ರಾಮಾಚಾರಿ ಸೀರಿಯಲ್​​ಗೆ ಕಾಲಿಟ್ಟಿದ್ದಾರೆ.

ಈಗ ರಾಮಾಚಾರಿ ಸೀರಿಯಲ್​​ಗೆ ಮತ್ತೊಂದು ಬಲ ಬಂದಂತೆ ಆಗಿದೆ. ರಾಮಾಚಾರಿ ಅಣ್ಣ ಕೋದಂಡ ನಟಿ ಐಶ್ವರ್ಯ ಸಾಲಿಮಠರನ್ನ ಗುಟ್ಟಾಗಿ ಮದುವೆಯಾಗಿದ್ದಾನೆ. ಬಳಿಕ ಗುಡಿಯಲ್ಲಿ ದೇವರಿಗೆ ಸೇವೆ ಸಲ್ಲಿಸೋಕೆಂದು ನಟಿ ಐಶ್ವರ್ಯ ಹೊತ್ತುಕೊಂಡು ಬಂದು ಕುಟುಂಬಸ್ಥರಿಗೆ ಶಾಕ್​ ಕೊಟ್ಟಿದ್ದಾನೆ. ಈ ಎಪಿಸೋಡ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ತೆರೆಯ ಹಿಂದೆಯೂ ಕೂಡ ರಾಮಾಚಾರಿಯ ಶ್ರಮಕ್ಕೆ ಶಭಾಷ್ ಗಿರಿ ನೀಡಲೆಬೇಕು. ಒಟ್ಟಿನಲ್ಲಿ ಸ್ವೀಟ್ ಸರ್​ಪ್ರೈಸ್​ಗಳನ್ನು ನೀಡ್ತಾ ರಾಮಾಚಾರಿ ಧಾರಾವಾಹಿಯು ಎಲ್ಲಾ ಕರುನಾಡ ವೀಕ್ಷಕರನ್ನು ಸೆಳೆದುಕೊಂಡಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

‘ರಾಮಾಚಾರಿ’ ಕುಟುಂಬಸ್ಥರಿಗೆ ಶಾಕ್ ಮೇಲೆ ಶಾಕ್​​; ಸೀರಿಯಲ್​​ಗೆ ಹೊಸ ನಟಿ​​ ಎಂಟ್ರಿ..!

https://newsfirstlive.com/wp-content/uploads/2023/05/ramacharai-3.jpg

Load More