ರಾಮಾಚಾರಿ ಕೃಷ್ಣನನ್ನು ಪ್ರೀತಿಸುತ್ತಿದ್ದಾಳೆ ಕ್ಯೂಟ್ ಬೆಡಗಿ
ರಾಮಾಚಾರಿ ಸೀರಿಯಲ್ಗೆ ಹೊಸದಾಗಿ ಎಂಟ್ರಿ ಕೊಟ್ಟ ರುಕ್ಕು
ರುಕ್ಮಿಣಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ನಟಿ ದೇವಿಕಾ ಭಟ್
ರಾಮಾಚಾರಿಯಲ್ಲಿ ಹೊಸ ಸ್ಟೋರಿ ತೆರೆದುಕೊಂಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಕೃಷ್ಣನಿಗೆ ಒಂದು ಜೋಡಿ ಮಾಡಿ. ನೋಡೋದಕ್ಕೆ ಚನ್ನಾಗಿರುತ್ತೆ. ಇಲ್ಲ ರಾಮಚಾರಿ ಮಾವನ ಮಗಳು ದೀಪಾನೇ ಕಿಟ್ಟಿಗೆ ಜೋಡಿ ಮಾಡಿ. ಒಟ್ಟಿನಲ್ಲಿ ಕಿಟ್ಟಿ ಕೀಟಲೇ ರಾಮಾಚಾರಿಯಲ್ಲಿ ಇರಬೇಕು. ಇದು ಧಾರಾವಾಹಿ ಅಭಿಮಾನಿಗಳ ಕಟ್ಟಪ್ಪಣೆ ಆಗಿತ್ತು.
ಇದನ್ನೂ ಓದಿ: ಬಿಗ್ಬಾಸ್ ಇತಿಹಾಸದಲ್ಲೇ ಮೊದಲು.. ಕ್ಯಾಪ್ಟನ್ಸಿ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ನಡೆದ ಭಾರೀ ಜಿದ್ದಾಜಿದ್ದಿ ಹೇಗಿತ್ತು?
ವೀಕ್ಷಕ ಮಹಾಪ್ರಭುಗಳು ಆಸೆಯಂತೆ ಇಲ್ಲ ಅನ್ನೋದಕ್ಕೆ ಆಗುತ್ತಾ? ಕೃಷ್ಣನಿಗೆ ಜೋಡಿಯಾಗಿ ರುಕ್ಕು ಬಂದಾಯ್ತು.. ಕಿಟ್ಟಿ ಹೃದಯಲ್ಲಿ ಪ್ರೀತಿ ತಂದಾಯ್ತು. ಅಷ್ಟಕ್ಕೂ ರುಕ್ಮಿಣಿ ಪಾತ್ರ ಮಾಡ್ತಿರೋರು ಯಾರು ಅಂತ ಫ್ಯಾನ್ಸ್ ಹುಡುಕಾಟ ನಡೆಸುತ್ತಿದ್ದಾರೆ. ಕಲ್ಲಿನಂತಿದ್ದ ಕಿಟ್ಟಿ ಎದೆಗೆ ಗುರಿ ಇಟ್ಟು ಪ್ರೀತಿಯ ಅಲೆಬ್ಬಿಸಿದ್ದಾಳೆ ರುಕ್ಕಮ್ಮ. ಹೇ ರುಕ್ಕಮ್ಮ ನಿನ್ನ ಪ್ರೀತಿಯ ಮಾತುಗಳೇ ನನಗೆ ಟಾನಿಕ್ಕೂ. ನೀನು ನಕ್ಕರೇ ನೂರು ಬಾಟಲಿ ಕಿಕ್ಕಮ್ಮ ಅಂತ ಕಿಟ್ಟಪ್ಪ ರುಕ್ಕು ಗುಂಗಲ್ಲಿ ತೇಲಾಡುತ್ತಿದ್ದಾರೆ. ರಾಮಾಚಾರಿ ಬ್ರದರ್ಗೆ ರುಕ್ಕು ಮೇಲೆ ಲವ್ ಅಗಿದೆ. ಇಷ್ಟು ದಿನ ಕಿಟ್ಟಿ ಹಿಂದೆ ರುಕ್ಕು ಸುತ್ತುತ್ತಿದ್ದಳು. ಆದರೆ ಈಗ ಕಿಟ್ಟಿಗೆ ರುಕ್ಕು ನೆನಪಲ್ಲಿ ಊಟ ತಿಂಡಿ ಸೇರುತ್ತಿಲ್ಲ.
ಹೌದು, ರಾಮಾಚಾರಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇಷ್ಟು ದಿನ ಸತ್ಯಬಾಮ ಸುತ್ತ ಸುತ್ತುತ್ತಿದ್ದ ಕತೆ ಈಗ ರುಕ್ಮಿಣಿ ಕಿಟ್ಟಿಯದ್ದೇ ಮಾತು ಶುರುವಾಗಿದೆ. ಯಾರನ್ನೋ ಕಿಡ್ನಾಪ್ ಮಾಡೋಕೆ ಹೋಗಿ ಇನ್ಯಾರನ್ನೋ ಕಿಡ್ನಾಪ್ ಮಾಡಿದ್ದ ರಾಮಾಚಾರಿ ತಮ್ಮ ಕಿಟ್ಟಿ. ಆ ಹುಡುಗಿನೇ ರುಕ್ಮಿಣಿ. ಕೃಷ್ಣನ ಸಾಹಸ, ಕಷ್ಟದಲ್ಲಿದ್ದಾಗ ಅವನು ಸಹಾಯ ಮಾಡಿದ ಮನೋಭಾವ ಕಂಡು ರುಕ್ಕುಗೆ ಕಿಟ್ಟಿ ಮೇಲೆ ಲವ್ ಆಗುತ್ತೆ. ಅವನಿಗಾಗಿನೇ ಕಾಯುತ್ತಿರುತ್ತಾಳೆ.
ಚಾರು-ರಾಮಾಚಾರಿಯನ್ನ ನೋಡಿ ಕಿಟ್ಟಿ ತನಗೆ ಮೋಸ ಮಾಡಿದ ಅದುಕೊಂಡು ದುಷ್ಟರ ಕೈಗೆ ಸಿಕ್ಕಿಹಾಕಿಕೊಂಡಿದ್ದಾಳೆ ರುಕ್ಮಿಣಿ. ಇತ್ತ ಕಿಟ್ಟಿಗೆ ರುಕ್ಮಿಣಿ ಮೇಲೆ ನಿಜವಾದ ಪ್ರೀತಿಯಾಗಿದೆ. ಕಿಟ್ಟಿ-ರುಕ್ಮಿಣಿಯನ್ನ ಒಂದು ಮಾಡೋಕೆ ಚಾರು ಹಾಗೂ ರಾಮಾಚಾರಿ ಪಣ ತೊಟ್ಟಿದ್ದಾರೆ. ಇದರ ಜೊತೆಗೆ ರುಕ್ಮಿಣಿಗೂ ಹಾಗೂ ಚಾರುಗೂ ಒಂದು ಪ್ಲ್ಯಾಶ್ಬ್ಯಾಕ್ ಸ್ಟೋರಿ ತೆರೆದುಕೊಳ್ತಿದೆ. ಸದ್ಯ ಸ್ಟೋರಿ ರುಕ್ಕು ಸುತ್ತಾನೇ ಸುತ್ತುತ್ತಿದೆ.
ಇನ್ನು, ರುಕ್ಮಿಣಿ ಪಾತ್ರಕ್ಕೆ ಜೀವ ತುಂಬಿರೋದು ನಟಿ ದೇವಿಕಾ ಭಟ್. ದೇವಿಕಾ ಮೂಲತಹ ಬೆಂಗಳೂರಿನವರು. ಓದಿದ್ದು ಎಂಬಿಎ. ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ಆಗಿದೆ. ಶಾಲೆ ಕಾಲೇಜಿನ ದಿನಗಳಿಂದನೂ ದೇವಿಕಾಗೆ ಕಲೆ ಬಗ್ಗೆ ಆಸಕ್ತಿ ಇತ್ತು ಅನ್ನೋದನ್ನು ಅವರ ಸೋಷಿಯಲ್ ಮೀಡಿಯಾ ಪೇಜ್ ನೋಡಿದರೇ ತಿಳಿಯುತ್ತೆ. ಇಷ್ಟೇಯಲ್ಲ ಕಥಕ್ ಡ್ಯಾನ್ಸರ್ ಕೂಡ ಹೌದು.
ಇದನ್ನೂ ಓದಿ: ಫುಟ್ ಬಾಲ್ ಪ್ಲೇಯರ್ ಜತೆ ಎಂಗೇಜ್ ಆದ ನಟಿ ಮಾನಸಾ ಮನೋಹರ್; ಹುಡುಗ ಇವರೇ ನೋಡಿ
View this post on Instagram
ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿದ್ದ ಲಕ್ಷ್ಮೀ ಟಿಫನ್ ರೂಮ್ ಧಾರಾವಾಹಿ ಖ್ಯಾತಿಯ ನಟ ವಚನ್ ಅವರ ಜೊತೆ ಒಂದು ಆಲ್ಬಂ ಸಾಂಗ್ನಲ್ಲೂ ನಟಿಸಿದ್ದಾರೆ. ಮಾಡಲಿಂಗ್ನಲ್ಲೂ ಆಸಕ್ತಿ ಹೊಂದಿರೋ ದೇವಿಕಾ, ಹಲವು ಱಪ್ನಲ್ಲಿ ಹೆಜ್ಜೆ ಹಾಕಿದ್ದಾರೆ. ಈಗಲೂ ಮಾಡಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಭೆ ಜೊತೆಗೆ ನೋಡೋಕೆ ಮುದ್ದಾಗಿರೋ ದೇವಿಕಾ ಕಿರುತೆರೆ ಬೆಳ್ಳಿತೆರೆ ಎರಡಕ್ಕೂ ಸೂಟ್ ಆಗ್ತಾರೆ. ವೀಕ್ಷಕರಿಗೂ ಇಷ್ಟ ಆಗಿದ್ದಾರೆ. ಹೀಗೆ ಅವಕಾಶಗಳು ಸಿಕ್ಕರೇ ಟಾಪ್ ಹೀರೋಯಿನ್ ಆಗೋದ್ರಲ್ಲೂ ಡೌಟ್ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ