newsfirstkannada.com

ಮಹಿಳೆಯರಿಂದ ತುಂಬಿದ ಧಾರ್ಮಿಕ ಕ್ಷೇತ್ರಗಳು; ನೈಜ ಹಿಂದುತ್ವಕ್ಕೆ ಶಕ್ತಿ ತಂದ ಶಕ್ತಿ ಸ್ಕೀಮ್​ ಎಂದ ರಾಮಲಿಂಗಾರೆಡ್ಡಿ!

Share :

18-06-2023

    ಅಸಲಿ ಹಿಂದುತ್ವಕ್ಕೆ ಶಕ್ತಿ ನೀಡಿದ ಶಕ್ತಿ ಸ್ಕೀಮ್​ ಎಂದ ಸಚಿವ ರಾಮಲಿಂಗಾರೆಡ್ಡಿ

    ಶಕ್ತಿ ಬಗ್ಗೆ ಟ್ವೀಟ್​ ಮಾಡುವ ಮೂಲಕ ಬಿಜೆಪಿಗೆ ರಾಮಲಿಂಗಾರೆಡ್ಡಿ ತಿರುಗೇಟು

    ಇತರ ಧರ್ಮೀಯರನ್ನು ಗೌರವಿಸುವುದೇ ನಿಜವಾದ ಹಿಂದುತ್ವ ಎಂದ ಮಿನಿಸ್ಟರ್​​!

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಫುಲ್​​ ಖುಷ್​​ ಆಗಿದ್ದಾರೆ. ಶಕ್ತಿ ಸ್ಕೀಮ್​ನಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸೋ ಜನರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಹಿಳೆಯರಂತೂ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಮಹಿಳೆಯರು ಧಾರ್ಮಿಕ ಸ್ಥಳಗಳಿಗೆ ಹೋಗುತ್ತಿದ್ದಾರೆ.

ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟ್ವೀಟ್​ ಮಾಡುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡುವ ಜೊತೆ ಜೊತೆಗೆ ಅಸಲಿ ಹಿಂದುತ್ವಕ್ಕೆ ಶಕ್ತಿ ತುಂಬಿದೆ. ಎಲ್ಲಾ ಹಿಂದೂ ದೇಗುಲಗಳು, ಪುಣ್ಯ ಕ್ಷೇತ್ರಗಳು ತುಂಬಿ ತುಳುಕುತ್ತಿವೆ. ನಮ್ಮ ದೇವರ ಪೂಜಿಸಿ, ಪ್ರೀತಿಸುವುದು, ಇತರ ಧರ್ಮೀಯರನ್ನು ಗೌರವಿಸುವವನೇ ನಿಜವಾದ ಹಿಂದೂ. ಇದು ಈಗ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ನಿಜ ಹಿಂದೂಗಳ ರಕ್ಷಣೆ, ಅಭಿವೃದ್ಧಿಗೆ ಕಾಂಗ್ರೆಸ್ ಸದಾ ಬದ್ಧ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರಿಂದ ತುಂಬಿದ ಧಾರ್ಮಿಕ ಕ್ಷೇತ್ರಗಳು; ನೈಜ ಹಿಂದುತ್ವಕ್ಕೆ ಶಕ್ತಿ ತಂದ ಶಕ್ತಿ ಸ್ಕೀಮ್​ ಎಂದ ರಾಮಲಿಂಗಾರೆಡ್ಡಿ!

https://newsfirstlive.com/wp-content/uploads/2023/06/ramalinga.jpg

Load More