newsfirstkannada.com

ನಿತ್ಯಾನಂದ ಸ್ವಾಮೀಜಿಯ ಇಬ್ಬರು ಶಿಷ್ಯರಿಗೆ ಬಿಗ್ ಶಾಕ್.. ಜಾಮೀನು ರಹಿತ ವಾರೆಂಟ್ ಹೊರಡಿಸಿದ ಕೋರ್ಟ್

Share :

05-07-2023

    ರಾಮನಗರ ಜಿಲ್ಲಾ ನ್ಯಾಯಾಲಯದಿಂದ ವಾರೆಂಟ್

    ಶಿವವಲ್ಲಬನೇನಿ, ಜಮುನಾರಾಣಿ ವಿರುದ್ಧ ವಾರೆಂಟ್

    2023ರ ಆಗಸ್ಟ್ 5ಗೆ ಮುಂದಿನ ವಿಚಾರಣೆ

ರಾಮನಗರ: ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಬಿಡದಿಯ ನಿತ್ಯಾನಂದ ಸ್ವಾಮೀಜಿ ಈಗ ಕೈಲಾಸ ವಾಸಿ. ತಮ್ಮದೇ ಕೈಲಾಸ ದೇಶವನ್ನು ಸೃಷ್ಟಿಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿಯ ಇಬ್ಬರು ಅನುಯಾಯಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆ

ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿಯಾದ ಶಿವವಲ್ಲಬನೇನಿ ಹಾಗೂ 6ನೇ ಆರೋಪಿ ಜಮುನಾರಾಣಿ ಇಬ್ಬರಿಗೂ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲು ನ್ಯಾಯಾಲಯ ಬುಧವಾರ ಆದೇಶಿಸಿದೆ. 2023ರ ಫೆಬ್ರವರಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಜಾರಿಗೊಳಿಸಿರುವ ಆದೇಶಗಳನ್ನು ಪರಿಶೀಲಿಸಿದ ಜಿಲ್ಲಾ ನ್ಯಾಯಾಲಯ, ಪ್ರಕರಣದ 3ನೇ ಆರೋಪಿ ಶಿವವಲ್ಲಬನೇನಿ ಇಂದು ಕೂಡ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲು ಆದೇಶಿಸಿದೆ.

6ನೇ ಆರೋಪಿ ಜಮುನಾ ರಾಣಿ ಕೂಡ ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಪಾಲಿಸದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಸದರಿ ಆರೋಪಿಯು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸುವಂತೆ ಆದೇಶ ನೀಡಿದೆ. 2023ರ ಆಗಸ್ಟ್ 5ಗೆ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿತ್ಯಾನಂದ ಸ್ವಾಮೀಜಿಯ ಇಬ್ಬರು ಶಿಷ್ಯರಿಗೆ ಬಿಗ್ ಶಾಕ್.. ಜಾಮೀನು ರಹಿತ ವಾರೆಂಟ್ ಹೊರಡಿಸಿದ ಕೋರ್ಟ್

https://newsfirstlive.com/wp-content/uploads/2023/07/NITYANANDA.jpg

Load More