newsfirstkannada.com

ಬರೋಬ್ಬರಿ 10 ವರ್ಷಗಳ ಬಳಿಕ ಕಮ್​ಬ್ಯಾಕ್​​.. ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ನಟಿ ರಮ್ಯಾ!

Share :

11-09-2023

  ಉತ್ತರಕಾಂಡ ಶೂಟಿಂಗ್​ಗೆ ಮುಹೂರ್ತ ಫಿಕ್ಸ್!

  ಡಾಲಿ ಜೊತೆ ಮೋಹಕ ತಾರೆ ಸ್ಕ್ರೀನ್​ ಶೇರ್

  ವಿದೇಶದಲ್ಲಿ ಬೀಡುಬಿಟ್ಟಿದ್ದ ರಮ್ಯಾ ಕಮ್​ಬ್ಯಾಕ್​​​

ಮೋಹಕ ತಾರೆ ರಮ್ಯಾ ಹೊಸ ಚಿತ್ರದ ಮುಹೂರ್ತ ಆಗಿ ಹೆಚ್ಚು ಕಡಿಮೆ ವರ್ಷ ಆಗ್ತಿದೆ. ಪ್ಲಾನ್ ಪ್ರಕಾರವೇ ಆಗಿದ್ರೆ ಇಷ್ಟೊತ್ತಿಗಾಗಲೇ ರಮ್ಯಾ ಉತ್ತರಕಾಂಡ ಶೂಟಿಂಗ್ ಸ್ಟಾರ್ಟ್ ಮಾಡ್ಬೇಕಿತ್ತು. ಆದರೆ ಆಗಲೇ ಇಲ್ಲ. ಹಾಗಾದ್ರೆ ಉತ್ತರಕಾಂಡ ಕಥೆ ಏನಾಯ್ತು? ರಮ್ಯಾ ಈ ಸಿನಿಮಾ ಮಾಡಲ್ವಾ? ಅನ್ನೋರಿಗೆ ಸ್ಪೆಷಲ್ ಅಪ್ಡೇಟ್​ ಇಲ್ಲಿದೆ.

ಮೋಹಕ ತಾರೆ ರಮ್ಯಾ 10 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಡಾಲಿ ಧನಂಜಯ್​ ನಾಯಕನಾಗಿ ನಟಿಸ್ತಿರುವ ಉತ್ತರಕಾಂಡ ಚಿತ್ರದ ಮೂಲಕ ನಟಿ ರಮ್ಯಾ ಮತ್ತೆ ನಟನೆ ಆರಂಭಿಸ್ತಾ ಇದ್ದಾರೆ ಎನ್ನುವ ಸುದ್ದಿಯನ್ನ ನಾವೇ ನಿಮ್ಗೆ ಹೇಳಿದ್ವಿ. ಆದ್ರೆ, ಉತ್ತರಕಾಂಡ ಸಿನಿಮಾ ಸೆಟ್ಟೇರಿ ಈಗಾಗ್ಲೇ ಹೆಚ್ಚು ಕಡಿಮೆ ವರ್ಷ ಆಗ್ತಿದೆ. ಆದ್ರೆ, ಇದುವರೆಗೂ ಶೂಟಿಂಗ್ ಶುರು ಮಾಡಿಲ್ಲ. ಆ ಕಡೆ ಚಿತ್ರತಂಡದಿಂದಲೂ ಯಾವುದೇ ಅಪ್ಡೇಟ್​ ಇಲ್ಲ. ಹಾಗಾಗಿ ರಮ್ಯಾ ಈ ಸಿನಿಮಾನ ಮಾಡ್ತಾರೋ ಇಲ್ವೋ ಎನ್ನುವ ಅನುಮಾನ ಕಾಡೋಕೆ ಶುರುವಾಗಿದೆ.

ಕರ್ನಾಟಕ ವಿಧಾನಸಭೆ ಎಲೆಕ್ಷನ್​ನಲ್ಲಿ ಕ್ಯಾಂಪೇನ್​ ಮಾಡಿದ ರಮ್ಯಾ, ಅದಾದ ಮೇಲೆ ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ವಿದೇಶಕ್ಕೆ ಹಾರಿದ ಮೋಹಕ ತಾರೆ ಸೋಶಿಯಲ್ ಮೀಡಿಯಾದಲ್ಲಷ್ಟೇ ಆ್ಯಕ್ಟೀವ್ ಆಗಿದ್ದಾರೆ. ಈ ನಡುವೆ ರಮ್ಯಾಗೆ ಹೃದಯಾಘಾತ ಆಗಿ ನಿಧನರಾದರು ಎನ್ನುವ ವದಂತಿಯೂ ಹಬ್ಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆಮೇಲೆ ಖುದ್ದು ರಮ್ಯಾ ಅವರೇ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿ ನಮ್ಮೂರಿಗೆ ಬರ್ತಿದ್ದೇನೆ ಎಂದಿದ್ದರು.

ನ್ಯೂಸ್​ಫಸ್ಟ್​​​ ಎಕ್ಸ್​ಕ್ಲೂಸಿವ್​ ಮಾಹಿತಿ ಲಭ್ಯ

ಹಾಗ್ನೋಡಿದ್ರೆ ಇಷ್ಟೊತ್ತಿಗಾಗಲೇ ಉತ್ತರಕಾಂಡ ಚಿತ್ರೀಕರಣ ಆರಂಭವಾಗಬೇಕಿತ್ತು. ಆದ್ರೆ ನಟಿ ರಮ್ಯಾ ಪಾತ್ರಕ್ಕಾಗಿ ಸ್ಲಿಮ್ ಆಗಬೇಕಿತ್ತು, ಜೊತೆಗೆ ಪ್ರಮುಖ ಪಾತ್ರವೊಂದಕ್ಕೆ ಶಿವರಾಜ್ ಕುಮಾರ್ ಅವರ ಡೇಟ್ ಹೊಂದಾಣಿಕೆಯಾಗಬೇಕಿತ್ತು. ಆದರೆ ಅಂದುಕೊಂಡ ಸಮಯಕ್ಕೆ ಇವರೆಡೂ ಆಗಿಲ್ಲ. ಆದ್ರೀಗ ಕಳೆದ ಒಂದೂವರೆ ತಿಂಗಳಿಂದ ವಿದೇಶದಲ್ಲಿ ಬೀಡುಬಿಟ್ಟಿದ್ದ ರಮ್ಯಾ ಸ್ಲಿಮ್ ಆಗಿ ಉತ್ತರಕಾಂಡ ಪಾತ್ರಕ್ಕೆ ರೆಡಿಯಾಗಿ ಬರ್ತಿದ್ದಾರಂತೆ. ಈ ಕಡೆ ಚಿತ್ರತಂಡವೂ ಸಜ್ಜಾಗಿದ್ದು, ಅಕ್ಟೋಬರ್ 30ರಿಂದ ಶೂಟಿಂಗ್​ ಅಖಾಡಕ್ಕೆ ಧುಮುಕಲಿದ್ದಾರೆ ಎನ್ನುವ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ರತ್ನನ್ ಪ್ರಪಂಚ, ದಯವಿಟ್ಟು ಗಮನಿಸಿ ಖ್ಯಾತಿಯ ರೋಹಿತ್ ಪದಕಿ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಕೆಆರ್‌ಜಿ ಸ್ಟುಡಿಯೋ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ ಮಾಡಬೇಕಿದ್ದ ಪಾತ್ರಕ್ಕೆ ರಘು ಮುಖರ್ಜಿ ಎಂಟ್ರಿಯಾಗಿದ್ದು, ಸ್ಯಾಂಡಲ್​ವುಡ್​ನಲ್ಲಿ ಮತ್ತೆ ರಮ್ಯಾ ಕಾಲಕ್ಕೆ ಕೌಂಟ್​ಡೌನ್​ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 10 ವರ್ಷಗಳ ಬಳಿಕ ಕಮ್​ಬ್ಯಾಕ್​​.. ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ನಟಿ ರಮ್ಯಾ!

https://newsfirstlive.com/wp-content/uploads/2023/07/ramya-2.webp

Load More